ಜಿಲ್ಲಾ ಸುದ್ದಿ

ಅಮಲಿನಲ್ಲಿ ಪೊಲೀಸರ ವಾಹನಕ್ಕೆ ಡಿಕ್ಕಿ: ಟೆಕ್ಕಿ ಸೆರೆ

ಮದ್ಯ ಸೇವಿಸಿದ್ದಲ್ಲದೆ, ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಚೀತಾ ಬೈಕ್ ಗೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಸಾಫ್ಟ್ ವೇರ್ ಎಂಜಿನಿಯರ್ ವೀರಭದ್ರ ಎಂಬಾತನನ್ನು ಕೆಂಗೇರಿ ಸಂಚಾರ ಪೊಲೀಸರು ಬಂಧಿಸಿದ್ದಾರೆ...

ಅಮಲಿನಲ್ಲಿ ಪೊಲೀಸರ ವಾಹನಕ್ಕೆ ಡಿಕ್ಕಿ: ಟೆಕ್ಕಿ ಸೆರೆ
ಸಾಂಕೇತಿಕ ಚಿತ್ರ
Published On :

ಬೆಂಗಳೂರು: ಮದ್ಯ ಸೇವಿಸಿದ್ದಲ್ಲದೆ, ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಚೀತಾ ಬೈಕ್ ಗೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಸಾಫ್ಟ್ ವೇರ್ ಎಂಜಿನಿಯರ್ ವೀರಭದ್ರ ಎಂಬಾತನನ್ನು ಕೆಂಗೇರಿ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ಕೆಂಗೇರಿ ಠಾಣೆಯ ಕಾನ್ ಸ್ಟೇಬಲ್ ಗಳಾದ ಅನಿಲ್ ಕುಮಾರ್ ಮತ್ತು ಅಂದಾನಿ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ರೆ.

ನಾಗದೇವನಹಳ್ಳಿ  ನಿವಾಸಿಯಾದ, ಆರೋಪಿ ವೀರಭದ್ರ ಶನಿವಾರ ರಾತ್ರಿ ಕೊಮ್ಮಘಟ್ಟ ಮುಖ್ಯರಸ್ತೆಯ ಸ್ಯಾಟಲೈಟ್ ಕ್ಲಬ್ ಗೆ ತೆರಳಿದ್ದ. ಮದ್ಯಪಾನ ಮಾಡಿ ರಾತ್ರಿ 12.15ರ ಸುಮಾರಿನಲ್ಲಿ ನಶೆಯಲ್ಲೇ ಕಾರು ಚಲಾಯಿಸಿಕೊಂಡು ಮನೆಗೆ ಹೊರಟಿದ್ದ. ಕೆಂಗೇರಿ-ಕೊಮ್ಮಘಟ್ಟ ಮುಖ್ಯರಸ್ತೆಯಲ್ಲಿ ಚೀತಾ ಬೈಕ್ ನಲ್ಲಿ ಗಸ್ತಿನಲ್ಲಿದ್ದ ಅನಿಲ್ ಮತ್ತು ಅಂದಾನಿ, ಕೊಮ್ಮಘಟ್ಟ ಕಡೆಗೆ ಹೋಗುತ್ತಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ವೀರಭದ್ರ, ಚೀತಾ ಬೈಕ್ ಗೆ ಕಾರು ಗುದ್ದಿಸಿದ. ಗಾಯಗೊಂಡ ಸಿಬ್ಬಂದಿ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಆಗ ಸ್ಥಳಕ್ಕಾಗಮಿಸಿದ ಹೊಯ್ಸಳ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು.
ಆರೋಪಿ ಮೇಲೆ ಐಪಿಸಿ ಕಲಂ 279 ಹಾಗೂ 337 ಅನ್ವಯ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.