ಕದೀಮ ಬ್ಯಾಂಕ್ ನೌಕರರು ಪೊಲೀಸ್ ಬಲೆಗೆ
ನಕಲಿ ಎಟಿಎಂ ಕಾರ್ಡ್ ಬಳಸಿ ಗ್ರಾಹಕರೊಬ್ಬರ ಖಾತೆಯಿಂದ ರು.6.96 ಲಕ್ಷ ಡ್ರಾ ಮಾಡಿದ್ದ ಆರೋಪಿಗಳನ್ನು...

ಹುಣಸೂರು: ನಕಲಿ ಎಟಿಎಂ ಕಾರ್ಡ್ ಬಳಸಿ ಗ್ರಾಹಕರೊಬ್ಬರ ಖಾತೆಯಿಂದ ರು.6.96 ಲಕ್ಷ ಡ್ರಾ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಎಸ್‌ಬಿಐ ಬ್ಯಾಂಕಿನ ಡಿ ಗ್ರೂಪ್ ನೌಕರ ಮಹದೇವಸ್ವಾಮಿ ಮತ್ತು ಮೈಸೂರು ಶ್ರೀರಾಂಪುರ ಶಾಕೆಯ ನೌಕರ ಮಹದೇವ ಬಂಧಿತ ಆರೋಪಿಗಳು. ಜ್ಯೋತಿನಗರ ನಿವಾಸಿ ರೂಪಾ ಪಟ್ಟಣದ ಎಸ್‌ಬಿಐ ಬ್ಯಾಂಕಿನ ತಮ್ಮ ಖಾತೆಯಲ್ಲಿ 8 ತಿಂಗಳ ಹಿಂದೆ ನೈಜೀರಿಯಾ ದೇಶಕ್ಕೆ ಹೋಗುವ ಮೊದಲು ರು.7.15 ಲಕ್ಷ ಜಮಾ ಮಾಡಿ ಹೋಗಿದ್ದರು.
ಸಂಕ್ರಾಂತಿ ಹಬ್ಬ ಆಚರಿಸಲು ಸ್ವದೇಶಕ್ಕೆ ಜನವರಿ ತಿಂಗಳಿನಲ್ಲಿ ಹಿಂದಿರುಗಿ ಬಂದ ಅವರು ತಮ್ಮ ಖಾತೆಯಲ್ಲಿ ಹಬ್ಬದ ಖರ್ಚಿಗಾಗಿ ಹಣ ಪಡೆಯಲು ಹೋದಾಗ ಕೇವಲ 21 ಸಾವಿರ ಇರುವುದು ಪತ್ತೆಯಾಗಿತ್ತು.
ಈ ಸಂಬಂಧ ಅವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದರು. ಬ್ಯಾಂಕಿನಿಂದ ಎಟಿಎಂ ಕಾರ್ಡ್ ಅಂಚೆ ಮೂಲಕ ರೂಪಾ ಅಳರ ಮನೆಗೆ ಕಳುಹಿಸಲಾಗಿತ್ತು.
ಆದರೆ ಯಾರೂ ಇಲ್ಲದಿದ್ದರಿಂದ ವಾಪಸ್ ಬ್ಯಾಂಕಿಗೆ ಬಂದಿತ್ತು. ಇದನ್ನರಿತ ಮಹದೇವಸ್ವಾಮಿ ತನ್ನ ಸಹೋದ್ಯೋಗಿ ಮಹದೇವನನ್ನು ಬಳಸಿಕೊಂಡು ಎಟಿಎಂನಿಂದ ಹಣ ಡ್ರಾ ಮಾಡಲು ಶುರುಮಾಡಿದ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


