ಕೌನ್ಸಿಲರ್ ಹತ್ಯೆ: ಪ್ರಮುಖ ಆರೋಪಿ ಶರಣು
ರೌಡಿ ಕೌನ್ಸಿಲರ್ ನಿಜಾಂ ಪಾಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಮದ್ ರಾಮನಗರದ ಹಿರಿಯ ಸಿವಿಲ್...

ರಾಮನಗರ: ರೌಡಿ ಕೌನ್ಸಿಲರ್ ನಿಜಾಂ ಪಾಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಮದ್ ರಾಮನಗರದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಶುಕ್ರವಾರ ಶರಣಾಗಿದ್ದಾನೆ.
ಬೆಂಗಳೂರಿನ ನಾಲ್ವರು ವಕೀಲರ ಜತೆ ನ್ಯಾಯಾಲಯಕ್ಕೆ ಬೆಳಗ್ಗೆ 11.15ಕ್ಕೆ ಆಗಮಿಸಿದ ಸಮದ್, ನ್ಯಾಯಾಧೀಶ ಎಸ್.ಎಚ್.ಹೊಸಗೌಡರ್ ಅವರೆದುರು ಶರಣಾದ. ನ್ಯಾಯಾಧೀಶರು ಆರೋಪಿಯನ್ನು ಜ.29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ನಿಜಾಂ ಪಾಷ ಹತ್ಯೆಗೂ ಸಮದ್‌ಗೂ ಸಂಬಂಧವಿಲ್ಲ. ಆದರೆ, ಪೊಲೀಸರು ಈತನನ್ನು ಮೊದಲ ಆರೋಪಿಯಾಗಿಸಿದ್ದು, ಬಂಧಿಸಲು ಹುಡುಕಾಡುತ್ತಿದ್ದಾರೆ. ಅಂತೆಯೇ ಜೀವಭಯದ ಹಿನ್ನೆಲೆಯಲ್ಲಿ ಸಮದ್ ಶರಣಾಗುತ್ತಿದ್ದಾನೆ ಎಂದು ಆತನ ಪರ ವಕೀಲರು ವಕಾಲತ್ತು ಅರ್ಜಿಯಲ್ಲಿ ಹೇಳಿದ್ದಾರೆ.
ಆರೋಪಿಯನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸ್ ತನಿಖಾಧಿಕಾರಿ ಕೋರಿಕೆ ಸಲ್ಲಿಸಲಿಲ್ಲ. ಹೀಗಾಗಿ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


