ಜಿಲ್ಲಾ ಸುದ್ದಿ

ಡಿಕೆಶಿ ಭೂ ಹಗರಣ: ತನಿಖೆಗೆ ಆಗ್ರಹಿಸಿ ಧರಣಿ

ಯಾವ ಕಾರಣಕ್ಕೂ ಪ್ರಕರಣ ಮುಚ್ಚಲು ಅವಕಾಶ ನೀಡಬಾರದು...

ಡಿಕೆಶಿ ಭೂ ಹಗರಣ: ತನಿಖೆಗೆ ಆಗ್ರಹಿಸಿ ಧರಣಿ
ತನಿಖೆಗೆ ಆಗ್ರಹ
Published On :

ಬೆಂಗಳೂರು: ಶಾಂತಿನಗರ ಹೌಸಿಂಗ್ ಕೋಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಂತರ ರುಪಾಯಿಗಳ ಹಗರಣ ನಡೆದಿದೆ.

ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಯಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ವಿಧಾನಸೌಧದಲ್ಲಿರುವ ಸಹಕಾರ ಸಚಿವ ಮಹಾದೇವ ಪ್ರಸಾದ್ ಕಚೇರಿಯ ಮುಂದೆ ಮಂಗಳವಾರ ಧರಣಿ ನಡೆಸಿದರು.

ಹಗರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸದಸ್ಯರ ಹೆಸರಿನಲ್ಲಿ 197 ನಿವೇಶನಗಳು ನೋಂದಣಿಯಾಗಿವೆ. ಅನಿವಾಸಿ ಭಾರತೀಯರಿಂದ ಹಿಡಿದು ಹಲವರಿಗೆ ನಿವೇಶನ ನೀಡಲಾಗಿದೆ.

ಯಾವ ಕಾರಣಕ್ಕೂ ಪ್ರಕರಣ ಮುಚ್ಚಲು ಅವಕಾಶ ನೀಡಬಾರದು. ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಸ್ಥಳಕ್ಕೆ ಬಂದು ಎಲ್ಲರೊಂದಿಗೂ ಚರ್ಚಿಸಿದ್ದಲ್ಲದೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರಕರಣ ನಡೆದಿದ್ದು 2001ಕ್ಕಿಂತ ಮೊದಲು.

2004ರಿಂದ 2014ರವರೆಗೆ ಯಾವುದೇ ವ್ಯವಹಾರವನ್ನು ಈ ಸೊಸೈಟಿ ನಡೆಸಿಲ್ಲ. ಈ ಸಂಬಂಧ ಅಧಿಕಾರಿಗಳ ದತೆ ಹಲವಾರು ಬಾರಿ ಚರ್ಚೆ ನಡೆಸಿದ್ದೇವೆ. ಈ ತಿಂಗಳ ಅಂತ್ಯದೊಳಗಾಗಿ ಒಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಮಹಾದೇವ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.