ನಿತ್ಯಾ ಭಕ್ತೆ ನಿಗೂಢ ಸಾವು ತನಿಖೆಗೆ ಒತ್ತಾಯ
ಹೊಸದಾಗಿ ಶವಪರೀಕ್ಷೆ ನಡೆಸಿ, ಆ ವರದಿ ಆಧಾರದ ಮೇಲೆ ತನಿಖೆಯಾಗಬೇಕು...

ಬೆಂಗಳೂರು: ಬಿಡದಿ ನಿತ್ಯಾನಂದ ಆಶ್ರಮದ ಸ್ವಯಂ ಸೇವಕಿಯಾಗಿದ್ದ ಸಂಗೀತಾಳ ನಿಗೂಢ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಂಗೀತಾಳ ತಾಯಿ ಝಾನ್ಸಿರಾಣಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸಂಗೀತಾಳದ್ದು ಅಸಹಜ ಸಾವು. ಈ ಸಂಬಂಧವಾಗಿ ಈಗಾಗಲೇ ರಾಮನಗರ ಎಸ್ಪಿಗೆ ದೂರು ನೀಡಲಾಗಿದೆ. ಹೂತಿರುವ ಶವ ಹೊರತೆಗೆದು ಹೊಸದಾಗಿ ಶವಪರೀಕ್ಷೆ ನಡೆಸಿ, ಆ ವರದಿ ಆಧಾರದ ಮೇಲೆ ತನಿಖೆಯಾಗಬೇಕು ಎಂದು ತಮಿಳುನಾಡಿನ ತಿರುಚಿ ಮೂಲದ ಝಾನ್ಸಿ ಒತ್ತಾಯಿಸಿದರು.
ಕಳೆದ ನಾಲ್ಕು ವರ್ಷಗಳಿಂದ ತಮ್ಮ ಇಡೀ ಕುಟುಂಬವೇ ನಿತ್ಯಾನಂದನ ಭಕ್ತರಾಗಿತ್ತು. ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಮುಗಿಸಿದ್ದ ಸಂಗೀತಾ ಆಶ್ರಮ ಸೇರಿದಳು. ಅಲ್ಲಿ ಆಕೆಗೆ ಮಾ ನಿತ್ಯಾ ತುರಿಯತೀತಾನಂದ ಸ್ವಾಮಿನಿ ಎಂದು ಹೆಸರಿಟ್ಟು ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆಯನ್ನಾಗಿ ಮಾಡಲಾಗಿತ್ತು.
2013ರಲ್ಲಿ ನಾನು ಆಶ್ರಮಕ್ಕೆ ಭೇಟಿ ನೀಡಿದಾಗ ಸಂಗೀತಾಳ ಮೇಲೆ ರಂಜಿತಾ ಎಂಬವರು ಹಲ್ಲೆ ನಡೆಸಿದ್ದರು. ಹೀಗಾಗಿ, ಕೂಡಲೇ ಆಕೆಯನ್ನು ಸ್ವಂತ ಊರಿಗೆ ಕರೆದುಕೊಂಡು ಹೋಗಿದ್ದೆವು. ಆಗ ಸಂಗೀತಾ ಕಾಲಿಗೆ ಗಾಯಗಳಾಗಿದ್ದವು. ನಂತರ, ಆಕೆಗೆ ಆಶ್ರಮಕ್ಕೆ ಹಿಂದಿರುಗಬೇಡ ಎಂದಿದ್ದೆ. ಆದರೆ, ತಿರುಚಿಗೆ ಬಂದ ಮರುದಿನವೇ ಆಶ್ರಮದ ಹಂಸಾನಂದ ಎಂಬಾತ ಮನೆಗೆ ಬಂದು ಕೂಡಲೇ ಆಶ್ರಮಕ್ಕೆ ಮರಳುವಂತೆ ಸಂಗೀತಾಳಿಗೆ ಒತ್ತಾಯಿಸಿದ್ದ.
ಆಶ್ರಮದ ಲ್ಯಾಪ್‌ಟಾಪ್ ಹಾಗೂ ಕೆಲವು ಪೆನ್‌ಡ್ರೈವ್‌ಗಳನ್ನು ಸಂಗೀತಾ ಕದ್ದಿದ್ದಾಳೆ ಎಂದೂ ಹೇಳಿದ್ದ. ಆದರೆ, ಅವೆಲ್ಲವೂ ಸಂಗೀತಾಳದ್ದೆ ಆಗಿದ್ದವು. ನಿತ್ಯಾನಂದನಿಗೆ ಸೇರಿದ ಹಲವು ಫೋಟೊಗಳು ಹಾಗೂ ವಿಡಿಯೋಗಳಿವೆ ಎಂದು ಸಂಗೀತಾ ನನಗೆ ಹೇಳಿದ್ದಳು. ಹೀಗಾಗಿ, ಮಗಳನ್ನು ವಾಪಸ್ ಆಶ್ರಮಕ್ಕೆ ಕಳುಹಿಸಿಲು ನಿರ್ಧರಿಸಿದೆ.
ಆದರೆ, ಡಿ.28ರಂದು ಆಶ್ರಮದಿಂದ ಕರೆ ಮಾಡಿ, ಸಂಗೀತಾಳಿಗೆ ಹೃದಯಾಘಾತವಾಗಿದೆ. ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿಸಿದ್ದರು. ಅವರು ಇದನ್ನು ಸಹಜ ಸಾವೆಂದರೂ ಶವಪರೀಕ್ಷೆಗೆ ಒತ್ತಾಯಿಸಿದೆ.
ಆದರೆ, ಈಗಲೂ ಸಂಗೀತಾ ಸಾವಿನ ಕಾರಣ ನಿಗೂಢವಾಗಿಯೇ ಉಳಿದಿದೆ. ಸೂಕ್ತ ತನಿಖೆಯಾಗಿ ಸಾವಿಗೆ ನಿಖರ ಕಾರಣ ತಿಳಿಯಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


