ಬೌದ್ಧ ವಿಶ್ವವಿದ್ಯಾಲಯಕ್ಕೆ ೧೦ ಕೋಟಿ ಅನುದಾನ: ಸಿ ಎಂ
ಚಾಮರಾಜನಗರದ ಜೋತಿಗೌಡನಪುರದಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯ

ಮೈಸೂರು: ಚಾಮರಾಜನಗರದ ಜೋತಿಗೌಡನಪುರದಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯ ಮತ್ತು ಅಂಬೇಡ್ಕರ್ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ೧೦ ಕೋಟಿ ಅನುದಾನ ಘೋಷಿಸಿದ್ದು, ೫೦ ಎಕರೆ ಜಾಗವನ್ನು ಲೀಸ್ ಕೊಡಲಾಗುವುದು ಎಂದಿದ್ದಾರೆ.
ರಾಜ್ಯದ ಮೊದಲ ಬೌದ್ಧ ಸಮಾವೇಶವನ್ನು ಭಾನುವಾರ ಉದ್ಘಾಟಿಸಿದ ಸಿದ್ದರಾಮಯ್ಯ, ವಿಶ್ವವಿದ್ಯಾಲಯದ ಸ್ಥಾಪನೆಗೆ ಎಲ್ಲ ಅಗತ್ಯ ನೆರವು ನೀಡುತ್ತೇವೆ ಎಂದಿದ್ದಾರೆ.
ಬುದ್ಧ ಪೂರ್ಣಿಮೆಯ ದಿನವನ್ನು ರಜಾದಿನವಾಗಿ ಘೋಷಿಸಲು ನಿರಾಕರಿಸಿರುವ ಸಿದ್ದರಾಮಯ್ಯ, ನಾನು ವ್ಯಯಕ್ತಿಕವಾಗಿ ರಜೆ ನೀಡುವುದರ ವಿರುದ್ಧ ಆದರೆ ಬುದ್ಧ ಪೂರ್ಣಿಮೆಯನ್ನು ಆಚರಿಸಲು ಲಕ್ಷಾಂತರ ಜನ ಸೇರಲಿದ್ದಾರೆ ಎಂದಿದ್ದಾರೆ.
ತುಳಿತಕ್ಕೊಳಗಾಗಿದ್ದ ಸಮುದಾಯಕ್ಕೆ ಆತ್ಮ ಗೌರವದ ಬೆಳಕು ತೋರಿದ ಆಧ್ಯಾತ್ಮಿಕ ನಾಯಕ ಡಾ. ಬಿ ಆರ್ ಎಂಬೇಡ್ಕರ್ ಎಂದಿರುವ ಸಿದ್ದರಾಮಯ್ಯ ಶಾಂತಿ ಮತ್ತು ಆತ್ಮ ಗೌರವನ್ನು ಸಾರುವ ಧರ್ಮಗಳ ಅಗತ್ಯ ಸಮಾಜಕ್ಕಿದೆ ಎಂದಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ ದೇಶದ ಏಕತೆ, ಜಾತಿ ಮತ್ತು ಧರ್ಮವನ್ನು ಮೀರಿದ್ದು ಎಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಅಸಂಖ್ಯಾತ ಜಾತಿಗಳಿವೆ. ಮರುಮತಾಂತರ ಆದವರನ್ನು ಯಾವ ಜಾತಿಗೆ ಮರಳಿಸುತ್ತಾರೆ? ಎಂದಿದ್ದಾರೆ.
ಸಚಿವ ವಿ ಶ್ರೀನಿವಾಸ ಪ್ರಸಾದ್ ಮತ್ತು ಎಚ್ ಸಿ ಮಹದೇವಪ್ಪ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಭಾಷಣ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


