ಯುವ ಗಾಯಕಿಯರಿಗೆ ವೇದಿಕೆಯಾದ ಖೇಲ್ ಕರೋಕಿ
'ಕ್ಲೋಸ್ ಟು ಮೈ ಹಾರ್ಟ್' ಕಾರ್ಯಕ್ರಮದಲ್ಲಿ ವಿಜೇತ ಗಾಯಕಿಯರಿಗೆ ನಗದು ಬಹುಮಾನ...

ಬೆಂಗಳೂರು: ಬೆಂಗಳೂರಿನ ಗೊಪಾಲನ್ ಮಾಲ್‌ನಲ್ಲಿ ನಡೆದ 'ಖೇಲ್ ಕರೋಕಿ' ಗಾಯನ ಸ್ಪರ್ಧೆ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. ಹಾಡುಗಾರಿಕೆ ಪ್ರತಿಭೆಯನ್ನು ಹೊರತರುವ ಅನೇಕ ಹವ್ಯಾಸಿ ಗಾಯಕಿಯರಿಗೆ ಅವಕಾಶ ಮಾಡಿಕೊಟ್ಟಿತು.
ಕಾರ್ಯಕ್ರಮದಲ್ಲಿ ಯುವ ಗಾಯಕಿಯರು ಉತ್ಸಾಹದಿಂದ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಯುವ ಗಾಯಕಿಯರ ಪ್ರಯತ್ನಕ್ಕೆ ಸಾರ್ವಜನಿಕರು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು.
ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಸ್ಪರ್ಧಾಳುಗಳು ಜನವರಿ 18ರಂದು ನಡೆಯುವ ಸೆಮಿ ಫೈನಲ್‌ನಲ್ಲಿ ಭಾಗವಹಿಸುವರು.
ಜನವರಿ 24ರಂದು ಬೆಳಿಗ್ಗೆ ಯಲಹಂಕ ಸಮೀಪದ ಸೂಪರ್‌ನೋವನಲ್ಲಿ ನಡೆಯುವ ಖೇಲ್ ಕರೋಕಿ ಗ್ರಾಂಡ್ ಫಿನಾಲೆಯಲ್ಲಿ 3 ಸ್ಪರ್ಧಾಳುಗಳನ್ನು ಆಯ್ಕೆಮಾಡಲಾಗುವುದು. ಅಂದು ಸಂಜೆ 6 ಗಂಟೆಗೆ ಸೋನು ನಿಗಂ ಅವರ 'ಕ್ಲೋಸ್ ಟು ಮೈ ಹಾರ್ಟ್' ಕಾರ್ಯಕ್ರಮದಲ್ಲಿ ವಿಜೇತ ಗಾಯಕಿಯರಿಗೆ ನಗದು ಬಹುಮಾನ ನೀಡಲಾಗುವುದು.
ಖೇಲ್ ಕರೋಕಿ ಆಡಿಷನ್‌ನಲ್ಲಿ ಭಾಗವಹಿಸಲು 8884444957 ಸಂಪರ್ಕಿಸಬಹುದು.
ಮೊದಲ ಬಹುಮಾನ ರೂ.1.00,000, ಪ್ರಥಮ ರನ್ನರ್‌ಅಪ್‌ಗೆ ರೂ. 25,000, ದ್ವಿತೀಯ ರನ್ನರ್‌ಅಪ್‌ಗೆ ರೂ.10,000 ನಗದು ಬಹುಮಾನ ನೀಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


