ಹೌಸಿಂಗ್ ಕಾಯ್ದೆ ತಿದ್ದುಪಡಿಗೆ ನಿರ್ಧಾರ ನಿಯಮಾವಳಿ ಸರಳ; ಏಕಗವಾಕ್ಷಿ ಕೇಂದ್ರ
ಖಾಸಗಿ ಸಂಘಗಳೇ ನೇರಭೂಮಿ ಖರೀದಿಸಲು ಅನುವು ಮಾಡಿಕೊಡಲು ಹೌಸಿಂಗ್ ಕಾಯಿದೆ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ವಸತಿ, ನಿವೇಶನಗಳ ಆಕಾಂಕ್ಷಿಗಳಿಗೆ ಒಂದೇ ವರ್ಷದಲ್ಲಿ ಸೌಲಭ್ಯ ಕಲ್ಪಿಸುವ ಹಾಗೂ ಖಾಸಗಿ ಸಂಘಗಳೇ ನೇರಭೂಮಿ ಖರೀದಿಸಲು ಅನುವು ಮಾಡಿಕೊಡಲು ಹೌಸಿಂಗ್ ಕಾಯಿದೆ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿದೆ.
ಗ್ಛಹನಿರ್ಮಾಣ ಸಂಘಗಳು ಸದಸ್ಯರಿಗೆ ಸೌಲಭ್ಯ ಕಲ್ಪಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿವೆ. ಇದಕ್ಕೆ ಕ್ಲಿಷ್ಟಕರ ನಿಯಮಗಳೂ ಕಾರಣ ಹೀಗಾಗಿ ಎಲ್ಲ ನಿಯಮಗಳನ್ನು ಸರಳಗೊಳಿಸಿ, ಎಲ್ಲಕೂ ನಿರಾಕ್ಷೇಪಣಾ ಪತ್ರ ಪಡೆಯಲು ಏಕಗವಾಕ್ಷಿ ಕೇಂದ್ರ ತೆರೆಯಲಾಗುತ್ತದೆ ಎಂದು ಸಹಕಾರ ಸಚಿವ ಎಚ್‌ಎಸ್ ಮಹದೇವ ಪ್ರಸಾದ್ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ಈಗಿನ ಕಾಯಿದೆ ಪ್ರಕಾರ ಖಾಸಗಿ ಗೃಹ ನಿರ್ಮಾಣ ಸಂಘಗಳಿಗೆ ನಿಯಮ 109ರ ಅಡಿಯಲ್ಲಿ ಭೂಮಿ ಖರೀದಿಸುವ ಅವಕಾಶವಿದ್ದರೂ ಅವು ನೇರವಾಗಿ ಖರೀದಿಸುವಂತಿಲ್ಲ. ಡೆವಲಪರ್‌ಗಳ ಮೂಲಕ ಇದನ್ನು ನಿರ್ವಹಿಸಬೇಕಾಗಿತ್ತು. ಇದನ್ನು ರದ್ದುಮಾಡಿ ಸಂಘಗಳೇ ನೇರವಾಗಿ ಭೂಮಿ ಖರೀದಿಸಲು ಅನುವು ಮಾಡಿಕೊಡಲಾಗುತ್ತಿದೆ. ಜತಗೆ ಬಡಾವಣೆ ನಿರ್ಮಾಣಕ್ಕೆ ಸುಮಾರು 10 ಏಜೆನ್ಸಿಗಳಿಂದ ನಿರಾಪೇಕ್ಷಣಾ ಪತ್ರ ಪಡೆಯಲು ಆಗುತ್ತಿರುವ ವಿಳಂಬ ತಪ್ಪಿಸಲು ಏಕಗವಾಕ್ಷಿ ಕೇಂದ್ರ ತೆರೆಯಲಾಗುತ್ತದೆ.
ಕಾಯಿದೆಗೆ ತಿದ್ದುಪಡಿ ತರುವ ಕರಡನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ತಯಾರಿಸುತ್ತಿದೆ. ಇದನ್ನು ಸದ್ಯದಲ್ಲಿಯೇ ಸಲ್ಲಿಸಲಿದ್ದು, ಅದನ್ನು ಪರಿಶೀಲಿಸಲಾಗುತ್ತದೆ. ಮುಂದಿನ ಜಂಟಿ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


