ಸುಟ್ಟ ಸ್ಥಿತಿಯಲ್ಲಿ ಯುವತಿ ಶವ ಪತ್ತೆ
ಎಚ್ಎಸ್ಆರ್ ಬಡಾವಣೆ ಯಲ್ಲಿ ಶಾಪಿಂಗ್ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾರಾಟ ಪ್ರತಿನಿಧಿಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ...

ಬೆಂಗಳೂರು: ಎಚ್ಎಸ್ಆರ್ ಬಡಾವಣೆ ಯಲ್ಲಿ ಶಾಪಿಂಗ್ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾರಾಟ ಪ್ರತಿನಿಧಿಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಂದನಾ(22) ಅನುಮಾನಾಸ್ಪದವಾಗಿ ಮೃತ ಯುವತಿ. ದೊಡ್ಡಕನ್ನಹಳ್ಳಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡ ಸಮೀಪದ ಶೆಡ್ ನಲ್ಲಿ ವಂದನಾ ಪಾಲಕರೊಂದಿಗೆ ವಾಸವಿದ್ದಳು. ಶೆಡ್ ಗಳ ಹಿಂಭಾಗದಲ್ಲೇ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪಾಲಕರು ಮದುವೆ ಇದ್ದ ಕಾರಣ ಕೋಲಾರಕ್ಕೆ ತೆರಳಿದ್ದರು. ಆದರೆ, ವಂದನಾ ಮನೆಯಲ್ಲೇ ಇದ್ದಳು. ಶುಕ್ರವಾರ ಬೆಳಗ್ಗೆ ಆಕೆಯ ಶವ ಸುಟ್ಟು ಸ್ಥಿತಿಯಲ್ಲಿರುವುದನ್ನು ಶೌಚಾಲಯಕ್ಕೆ ತೆರಳಿದ್ದವರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ.
ವಂದನಾ ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಬೇರೆ ಯಾರಾದರೂ ಬೆಂಕಿ ಹಚ್ಚಿದ್ದಾರಾ? ಅತ್ಯಾಚಾರ ನಡೆದಿದೆಯಾ ಎನ್ನುವುದು ಶವ ಪರೀಕ್ಷೆ ವರದಿ ಬಂದ ಬಳಿಕ ತಿಳಿದು ಬರಲಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಎಚ್ಎಸ್ಆರ್ ಬಡಾವಣೆ ಪೊಲೀಸರು ತಿಳಿಸಿದ್ದಾರೆ.
ನವಜಾತ ಶಿಶು ಶವ ಪತ್ತೆ: ಹಳೇ ಮದ್ರಾಸ್ ರಸ್ತೆ
ಹಳೇ ಬೈಯ್ಯಪ್ಪನಹಳ್ಳಿ ಆಟದ ಮೈದಾನದಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಶವವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 1 ದಿನದ ಹೆಣ್ಣು ಮಗುವಿನ ಶವವನ್ನು ತಂದು ಬಿಸಾಡಿರುವ ಸಾಧ್ಯತೆ ಇದೆ ಬೈಯ್ಯಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


