ಜಿಲ್ಲಾ ಸುದ್ದಿ

ಚರ್ಚ್‍ಸ್ಟ್ರೀಟ್ ಪ್ರಕರಣ: ಇಬ್ಬರು ಉಗ್ರರು ವಶಕ್ಕೆ

ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಚಾರಣೆಗಾಗಿ ಬಿಹಾರದ ಪಟನಾ ಜೈಲಿನಲ್ಲಿರುವ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿರುವ...

ಚರ್ಚ್‍ಸ್ಟ್ರೀಟ್ ಪ್ರಕರಣ: ಇಬ್ಬರು ಉಗ್ರರು ವಶಕ್ಕೆ
ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟ
Published On :

ಬೆಂಗಳೂರು: ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಚಾರಣೆಗಾಗಿ ಬಿಹಾರದ ಪಟನಾ ಜೈಲಿನಲ್ಲಿರುವ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿರುವ ನಗರ ಪೋಲೀಸರು ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ನರೇಂದ್ರ ಮೋದಿ ಪಾಟನಾದ ಗಾಂಧಿ ಮೈದಾನದಲ್ಲಿ 2013ರ ಅ.27ರಂದು ಲೋಕಸಭೆ ಚುನಾವಣೆ ಪ್ರಚಾರ ರ್ಯಾಲಿ ನಡೆಸುತ್ತಿದ್ದ ವೇಳೆ 10 ಬಾಂಬ್  ಸ್ಫೋಟ ಸಂಭವಿಸಿದ್ದವು. ಐವರು ಮೃತಪಟ್ಟು 83 ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಎನ್‍ಐಎ ಅಧಿಕಾರಿಗಳು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಪ್ರಮುಖ ಆರೋಪಿಗಳಾದ ಉಮರ್ ಸಿದ್ದಿಕ್ಕಿ ಹಾಗೂ ಹೈದರ್ ಅಲಿ ಎಂಬುವರನ್ನು ಬಂಧಿಸಿದ್ದರು. ಪಟನಾ ಬಾಂಬ್ ಸ್ಫೋಟಕ್ಕೂ ಚರ್ಚ್‍ಸ್ಟ್ರೀಟ್ ಬಾಂಬ್  ಸ್ಫೋಟಕ್ಕೂ ಸಾಮ್ಯತೆ ಕಂಡು ಬಂದಿದೆ. ಹೀಗಾಗಿ, ಬಿಹಾರ ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ಇಬ್ಬರನ್ನು ನಗರಕ್ಕೆ ಕರೆತರಲಾಗುತ್ತಿದೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.