ಜಿಲ್ಲಾ ಸುದ್ದಿ

ಮಕ್ಕಳನ್ನು ಕೊಂದು, ದಂಪತಿ ಆತ್ಮಹತ್ಯೆ

ಆಹಾರದಲ್ಲಿ ವಿಷ ಬೆರೆಸಿ ಉಣಿಸಿ ತಮ್ಮ ಇಬ್ಬರು ಮಕ್ಕಳನ್ನು ಕೊಂದ ದಂಪತಿ, ನಂತರ ನೇಣಿಗೆ ಶರಣಾಗಿರುವ...

ಮಕ್ಕಳನ್ನು ಕೊಂದು, ದಂಪತಿ ಆತ್ಮಹತ್ಯೆ
Published On :

ಶಿವಮೊಗ್ಗ: ಆಹಾರದಲ್ಲಿ ವಿಷ ಬೆರೆಸಿ ಉಣಿಸಿ ತಮ್ಮ ಇಬ್ಬರು ಮಕ್ಕಳನ್ನು ಕೊಂದ ದಂಪತಿ, ನಂತರ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದ ಜೆ.ಪಿ ನಗರದಲ್ಲಿ ಸೋಮವಾರ ನಡೆದಿದೆ.

ಮೃತರನ್ನು ಸುರೇಶ (38), ಗಾಯಿತ್ರಿ(28) ಹಾಗೂ ಮಕ್ಕಳಾದ ಇಂದ್ರಜಿತ್(10)ಮತ್ತು ಶಾಲಿನಿ(8) ಎಂದು ಗುರಿತಿಸಲಾಗಿದೆ.

ತರೀಕೆರೆ ನಿವಾಸಿಗಳಾಗಿದ್ದ ದಂಪತಿ, ಜೆ.ಪಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುರೇಶ್ ಅಡಿಕೆ ವ್ಯಾಪಾರಿಯಾಗಿದ್ದರು. ಇಂದು ಬೆಳಗ್ಗೆ ಪಕ್ಕದ ಮನೆಯವರು ಗಾಯಿತ್ರಿ ಅವರನ್ನು ಕೂಗಲು ಹೋದಾಗ ಮನೆಯ ಬಾಗಿಲು ತೆರೆದಿತ್ತು. ಒಳ ಹೋಗಿ ನೋಡಿದಾಗ ಮಕ್ಕಳಲ್ಲಿ ಬಾಯಲ್ಲಿ ನೊರೆ ಕಾಣಿಸಿತ್ತು. ಅಲ್ಲಲ್ಲಿ ಊಟದ ತಟ್ಟೆ, ಚೆಲ್ಲಿದ ಅನ್ನ ನೋಡಿ ಗಾಬರಿಗೊಂಡು ಹೊರಗೆ ಬಂದು ಸಾಗರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ನೋಡಿದಾಗ ಮಕ್ಕಳು ಸಾವನ್ನಪ್ಪಿರುವುದನ್ನು ಖಚಿತಪಡಿಸಿದರು. ನಂತರ ಕೋಣೆಯಲ್ಲಿ ದಂಪತಿ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.   

ಡೆತ್‌ನೋಟ್‌ನಲ್ಲಿ  ತನಗೆ ಆದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಬರೆದಿಟ್ಟಿದ್ದಾರೆ ಎಂದು ಸಾಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.