ಜಿಲ್ಲಾ ಸುದ್ದಿ

ಪ್ರಮೋದಾದೇವಿಗೆ ಗಾಯ

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವೇದಿಕೆಯಿಂದ ಕೆಳಗೆ ಇಳಿಯುವ ಮುನ್ನ ಎಡವಿದ ಕಾರಣಕ್ಕಾಗಿ ಎಡಗಾಲಿಗೆ ಬಾವು..

ಪ್ರಮೋದಾದೇವಿಗೆ ಗಾಯ
ರಾಣಿ ಪ್ರಮೋದಾ ದೇವಿ (ಸಂಗ್ರಹ ಚಿತ್ರ)
Published On :

ಮಂಡ್ಯ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವೇದಿಕೆಯಿಂದ ಕೆಳಗೆ ಇಳಿಯುವ ಮುನ್ನ ಎಡವಿದ ಕಾರಣಕ್ಕಾಗಿ ಎಡಗಾಲಿಗೆ ಬಾವು ಬಂದ ಘಟನೆ ಶುಕ್ರವಾರ ಜರುಗಿತು.

ನಗರದ ಸರ್ ಎಂವಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಭಾಷಣ ಮುಗಿಸಿ ತುರ್ತಾಗಿ ಮೈಸೂರಿಗೆ ತೆರಳುವ ಅನಿವಾರ್ಯತೆ ಹೇಳಿಕೊಂಡು ವೇದಿಕೆಯಿಂದ ನಿರ್ಗಮಿಸಿದರು.

ಸಚಿವ ಅಂಬರೀಷ್ ಸೇರಿದಂತೆ ಇತರೆ ಗಣ್ಯರು ಪ್ರಮೋದಾದೇವಿಯವರನ್ನು ವೇದಿಕೆಯಿಂದ ಬೀಳ್ಕೊಟ್ಟರು. ವೇದಿಕೆಯಿಂದ ಇಳಿಯುವ ಮುನ್ನ ಕೊನೆ ಮೆಟ್ಟಿಲಲ್ಲಿ ಆಯತಪ್ಪಿ ಕೆಳಗೆ ಬಿದ್ದರು. ಎಡಗಾಲಿನ ಪಾದಕ್ಕೆ ಸ್ವಲ್ಪ ಒಳ ಏಟು ಆಗಿ ಬಾವು ಬಂದಿತು. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.