ಗಣಿತ ಕಲಿಕೆಗೆ ಸರಳ ಆಟ
ವಿದ್ಯಾರ್ಥಿಗಳಿಗೆ ಗಣಿತ ಕಠಿಣವಾದ ಪಠ್ಯ. ಈಗಲೂ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಂತೆ...

ಬೆಂಗಳೂರು: ವಿದ್ಯಾರ್ಥಿಗಳಿಗೆ ಗಣಿತ ಕಠಿಣವಾದ ಪಠ್ಯ. ಈಗಲೂ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಂತೆಯೇ ಗಣಿತವೆಂದರೆ ಕಬ್ಬಿಣದ ಕಡಲೆ.
ಈ ಹಿನ್ನಲೆಯಲ್ಲಿ ಸರಳವಾದ ಆಟಗಳ ಮೂಲಕ ಮಕ್ಕಳಿಗೆ ಗಣಿತ ಕಲಿಸಲು ಮ್ಯಾಟಿಫಿಕ್ ಸಂಸ್ಥೆ ಆನ್‌ಲೈನ್ ಮೂಲಕ ವಿವಿಧ ರೀತಿಯ ಆಟಗಳನ್ನು ಪರಿಚಯಿಸಿದೆ.
ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳನ್ನು ಬೋಧಿಸುವ ಶಾಲೆಗಳಿಗೆ ತನ್ನ ಆಟದ ಕ್ರಮಗಳನ್ನು ಉಚಿತವಾಗಿ ಪರಿಚಯಿಸಲು ಈ ಸಂಸ್ಥೆ ಆಸಕ್ತಿ ತೋರಿದೆ.
ನಗರದ 17 ಶಾಲೆಗಳು ತಮ್ಮ ಸಂಸ್ಥೆಯ ತಂತ್ರ ಮಕ್ಕಳಿಗೆ ಗಣಿತ ಕಲಿಸಲು ಮುಂದೆ ಬಂದಿವೆ ಎಂದು ಮ್ಯಾಟಿಫಿಕ್ ಸಂಸ್ಥೆಯ ಮುಖ್ಯಸ್ಥ ರುದ್ರೇಶ್ ನಾಯ್ಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಘೋಷಿಸಿದಂತೆ ಡಿಜಿಟಲ್ ಇಂಡಿಯಾದ ಭಾಗವಾಗಿ ಇಷ್ಟರಲ್ಲಿಯೇ ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ಶಾಲೆಗಳು ಅಂತರ್ಜಾಲದ ಸೌಲಭ್ಯ ಪಡೆದುಕೊಳ್ಳಲಿವೆ.
ಆಗ, ಮಕ್ಕಳಿಗೆ ಗಣಿತ ಪಠ್ಯ ಕ್ರಮವನ್ನು ಮ್ಯಾಟಿಫಿಕ್ ಅಭಿವೃದ್ಧಿ ಪಡಿಸುವ ಆಟಗಳನ್ನು ತೆರೆಯಲ್ಲಿ ತೋರಿಸುವ ಮೂಲಕ ಸುಲಭವಾಗಿ ಕಲಿಸಬಹುದಾಗಿದೆ ಎಂದರು. ಸದ್ಯಕ್ಕೆ ಸಂಸ್ಥೆಯ ಕಾರ್ಯ ಕ್ಷೇತ್ರವನ್ನು ಬೆಂಗಳೂರು ನಗರಕ್ಕೆ ಸೀಮಿತವಾಗಿಸಿಕೊಂಡರೂ ಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಿಗೂ ವಿಸ್ತರಿಸುವ ಚಿಂತನೆ ಇದೆ. ಆಸಕ್ತರು ಬಯಸಿದರೆ, ಸಂಸ್ಥೆಯ ಸಿಬ್ಬಂದಿ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


