ಹಾಲೋಬ್ರಿಕ್ಸ್ ಬಿದ್ದು ಕಾರ್ಮಿಕ ಸಾವು
ತಲೆ ಮೇಲೆ ಆಕಸ್ಮಿಕವಾಗಿ ಹಾಲೋಬ್ರಿಕ್ಸ್ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕಮ್ಮನಹಳ್ಳಿಯ ಸೇಂಟ್...

ಬೆಂಗಳೂರು: ತಲೆ ಮೇಲೆ ಆಕಸ್ಮಿಕವಾಗಿ ಹಾಲೋಬ್ರಿಕ್ಸ್ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕಮ್ಮನಹಳ್ಳಿಯ ಸೇಂಟ್ ಚಾರ್ಲ್ಸ್ ಶಾಲೆ ಆವರಣದ ನಿರ್ಮಾಣದ ಹಂತದ ಕಟ್ಟಡದಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಸರವಣ(26) ಮೃತರು. 5ನೇ ಮಹಡಿ ಕಟ್ಟಡದಲ್ಲಿ ಇತರ ಕಾರ್ಮಿಕರೊಂದಿಗೆ ಕಳೆದ ಮೂರು ತಿಂಗಳಿಂದ ಸರವಣ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಸರವಣ ನೆಲ ಮಹಡಿ ಯಲ್ಲಿ ಹಾಲೋಬ್ರಿಕ್ಸ್ ಗಳನ್ನು ಲೋಡ್ ಮಾಡಿ 5ನೇ ಮಹಡಿಗೆ ಯಂತ್ರದ ಮೂಲಕ ಕಳುಹಿಸುತ್ತಿದ್ದರು.
ಮೇಲಿನ ಮಹಡಿಯಲ್ಲಿ ಅದನ್ನು ಮತ್ತೊಬ್ಬ ಕಾರ್ಮಿಕ ಅನ್‍ಲೋಡ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಒಂದು ಹಾಲೋಬ್ರಿಕ್ಸ್ ಜಾರಿ ಸರವಣನ ತಲೆ ಮೇಲೆ ಬಿದ್ದಿದೆ. ರಕ್ತಸ್ರಾವವಾಗಿ ಕುಸಿದು ಬಿದ್ದ ಸರವಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿ ದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


