ಸರ್ಕಾರದ ವಿರದ್ಧ ಹೋರಾಟ ಯಾರಿಗೂ ಸಾಧ್ಯವೇ ಆಗುತ್ತಿಲ್ಲ: ದೇವೇಗೌಡ
ರೈತರ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರವೇ ಕಸಿಯುತ್ತಿದ್ದು, ಈ ವಿರುದ್ಧ ಹೋರಾಟ ಮಾಡಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ...

ಬೆಂಗಳೂರು: ರೈತರ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರವೇ ಕಸಿಯುತ್ತಿದ್ದು, ಈ ವಿರುದ್ಧ ಹೋರಾಟ ಮಾಡಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವೇ ರೈತರ ಭೂಮಿಯನ್ನು ಕಸಿದಿದ್ದು, ಇಧು ನೈಸ್ ಸಂಸ್ಥೆಯ ಕಾರಿಡಾರ್ ಯೋಜನೆಯಲ್ಲಿ ಸಾಬೀತಾಗಿದೆ. ಈ ಬಗ್ಗೆ ಮಾಧ್ಯಮಗಳೂ ಸಾಕಷ್ಟು ವರದಿ ಮಾಡುತ್ತಿದ್ದು, ಇಂದಿಗೂ ಸನ್ನಿವೇಶದಲ್ಲಿ ಇಂತಹ ಹಗರಣಗಳ ವಿರುದ್ಧ ಹೋರಾಡುವವರೇ ಇಲ್ಲದಂತಾಗಿದೆ.
ಅಧಿಕಾರ ಹಾಗೂ ಹಣದ ಆಸೆಗಾಗಿ ರಾಜಕಾರಣಿಗಳು ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಯ ಅಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ನೀಡುವ ಸಮಸ್ಯೆ ಭವಿಷ್ಯದಲ್ಲಿ ಮತ್ತಷ್ಟು ಜಟಿಲವಾಗಲಿದೆ. ಬೆಂಗಳೂರಿಗೆ ನೀರು ನೀಡುವುದನ್ನು ನ್ಯಾಯಾಧಿಕರಣ ನಿರ್ಧರಿಸುತ್ತಿದ್ದರೂ ಜನರಿಗೆ ನಿಜವಾದ ನ್ಯಾಯ ದೊರೆಯುತ್ತಿಲ್ಲ. ಹಿಂದೊಮ್ಮೆ ನ್ಯಾಯಾಧಿಕರಣದಲ್ಲಿದ್ದ ಮೂರು ನ್ಯಾಯಾಧೀಶರಲ್ಲಿ ಇಬ್ಬರು ನೀಡಿದ ತೀರ್ಪಿನಿಂದ ಬೇಸತ್ತ ಮೂರನೆಯ ನ್ಯಾಯಾಧೀಶರು, ತಮ್ಮ ಸ್ಥಾನದಿಂದ ತಾವೇ ಕೆಳಗಿಳಿದಿದ್ದರು. ಎಲ್ಲರಿಗೂ ನೀರು ಸಿಗುತ್ತದೆ ಎಂದು ನಂಬಿಸುತ್ತಿದ್ದರೂ, ಹೋರಾಟ ಮಾಡುವವರ ಪಾಲಿಗೆ ಇದು ಉರುಳಾಗಿ ಪರಿಣಮಿಸಿದಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


