ಜಿಲ್ಲಾ ಸುದ್ದಿ

ನಗರದಲ್ಲಿ ರೈಟ್ ಸೋದರರ ವಿಮಾನ!

ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ರೈಟ್ ಸಹೋದರರ ಮೊದಲ ವಿಮಾನ...

ನಗರದಲ್ಲಿ ರೈಟ್ ಸೋದರರ ವಿಮಾನ!
Published On :

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ರೈಟ್ ಸಹೋದರರ ಮೊದಲ ವಿಮಾನ ಪ್ರಯಾಣದ ಅನುಭವವೂ ಲಭ್ಯ! ಹೀಗೊಂದು ವಿಜ್ಞಾನ ಮಾದರಿಯನ್ನು ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಪರಿಚಯಿಸುತ್ತಿದೆ.

ಜಗತ್ತಿನಲ್ಲಿ ಮೊದಲ ಬಾರಿಗೆ ರೈಟ್ ಸಹೋದರರು ಆವಿಷ್ಕರಿಸಿದ ವಿಮಾನದ ಮಾದರಿಯಲ್ಲಿ ಕುಳಿತು ಪ್ರಯಾಣಿಸುವ ಅನುಭವ ಇಲ್ಲಿ ಸಾಧ್ಯವಿದೆ. ಸುವರ್ಣ ಮಹೋತ್ಸವ ಅಂಗವಾಗಿ ವಸ್ತು ಸಂಗ್ರಹಾಲಯದಲ್ಲಿ ಮನಸ್ಸಿಗೆ ಮುದ ನೀಡುವ ಈ ವಿಜ್ಞಾನ ಮಾದರಿಯನ್ನು ರೂಪಿಸಲಾಗಿದೆ.

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್  (ಎನ್‍ಎಎಲ್)  ಪರಿಕಲ್ಪನೆಯಲ್ಲಿ ರು. 30 ಲಕ್ಷ ವೆಚ್ಚದಲ್ಲಿ ತಯಾರಾಗಿರುವ `ರೈಟ್ ಸಹೋದರರ ವಿಮಾನ ಅನುಕರಣೆ ವ್ಯವಸ್ಥೆ'
ಮೊದಲ ವಿಮಾನ ಪ್ರಯಾಣದ ಅನುಭವ ನೀಡುತ್ತದೆ. ಮೊದಲ ವಿಮಾನದಲ್ಲಿರುವಂತೆ ಇಲ್ಲಿ ಮಲಗಿಕೊಂಡು ವಿಮಾನವನ್ನು ನಿರ್ವಹಿಸಬೇಕು. ಕಂಪ್ಯೂಟರ್ ಆಟದ ಮಾದರಿಯಲ್ಲಿ ಮುಂದಿನ ಪರದೆಯಲ್ಲಿ ಮೂಡುವ ವಿಮಾನವನ್ನು 3 ನಿಮಿಷಗಳಲ್ಲಿ ಆಕಾಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಕೆಳಗಿಳಿಸಬೇಕು. ಉದ್ದ ಮೇಜಿನ ಮೇಲೆ ಮಲಗುವ  ಪೈಲಟ್ ಗೆ ಸೊಂಟಕ್ಕೆ ಬೆಲ್ಟ್ ಹಾಕಲಾಗುತ್ತದೆ.

ಸೊಂಟವನ್ನು ಎಡಕ್ಕೆ, ಬಲಕ್ಕೆ ತಿರುಗಿಸಿದರೆ ಪರದೆಯ ವಿಮಾನ ದಿಕ್ಕು ಬದಲಿಸುತ್ತದೆ. ಮೇಜಿಗೆ ಅಂಟಿಕೊಂಡಂತೆ ಮುಂಭಾಗದಲ್ಲಿರುವ ರಾಡಾರ್ ಮೂಲಕ ವಿಮಾನ ಚಲಾಯಿಸಬಹುದು. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ವಸ್ತು ಸಂಗ್ರಹಾಲಯದ ನಿರ್ದೇಶಕ ಕೆ.ಜಿ.ಕುಮಾರ್, ರೈಟ್ ಸಹೋದರರು 120 ಅಡಿ ಎತ್ತರಕ್ಕೆ ಹಾರಿಸಿದ್ದ ಮೊದಲ ವಿಮಾನದ ಪ್ರಯಾಣದ ಅನುಭವ ಭೇಟಿ ನೀಡುವವರಿಗೆ ಲಭ್ಯವಾಗಲಿದ್ದು, ಏಷ್ಯಾದಲ್ಲೇ ಮೊದಲ ಬಾರಿಗೆ ಈ ಮಾದರಿ ಪರಿಚಯಿಸಲಾಗುತ್ತಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ವಿವರಿಸಲು ವಿಜ್ಞಾನ ಪ್ರಾತ್ಯಕ್ಷಿಕೆ ಕೋಣೆಯನ್ನೂ ನಿರ್ಮಿಸಲಾಗಿದೆ. ಶಬ್ದ, ರಾಸಾಯನಿಕಗಳು ಸೇರಿದಂತೆ ವಿವಿಧ ಬಗೆಯ ವಿಷಯಗಳನ್ನು ಆರಿಸಿ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಪರಿಸರದಲ್ಲಾಗುವ ವಿಕೋಪಕ್ಕೆ ಸಂಬಂಧಿಸಿದಂತೆ ಪ್ರದರ್ಶನ ವನ್ನು ಮಾ.10ರವರೆಗೆ ಏರ್ಪಡಿಸಿದ್ದು, ನೈಸರ್ಗಿಕ ವಿಕೋಪಕ್ಕೆ ಕಾರಣ, ವಿಕೋಪ ಸಂದರ್ಭ ವಹಿಸಬೇಕಾದ ಎಚ್ಚರವನ್ನು ಚಿತ್ರಗಳ ಸಮೇತ ವಿವರಿಸಲಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.