ಬೆಂಗಳೂರು ಕ್ಲಬ್ಬಿನಲ್ಲಿ ಕನ್ನಡ ಭಾಷೆಗೆ ಅವಮಾನ, ಸದಸ್ಯೆ ಅಮಾನತು
ಕನ್ನಡ ಭಾಷೆಯನ್ನು ಅವಮಾನಿಸಿದ್ದಕ್ಕೆ ಬೆಂಗಳೂರು ಕ್ಲಬ್ಬು ತನ್ನ ದೀರ್ಘ ಕಾಲದ ಸದಸ್ಯೆಯನ್ನು ಅಮಾನತು ಮಾಡಿದೆ.

ಬೆಂಗಳೂರು: ಕನ್ನಡ ಭಾಷೆಯನ್ನು ಅವಮಾನಿಸಿದ್ದಕ್ಕೆ ಬೆಂಗಳೂರು ಕ್ಲಬ್ಬು ತನ್ನ ದೀರ್ಘ ಕಾಲದ ಸದಸ್ಯೆಯನ್ನು ಅಮಾನತು ಮಾಡಿದೆ. ಜನವರಿಯ ಮೊದಲವಾರದಲ್ಲಿ ಕ್ಲಬ್ಬಿನ ಮೊದಲ ಮಹಡಿಯ ಕಾರ್ಡ್ಸ್ ಕ್ಲಬ್ಬಿನಲ್ಲಿ ಈ ಘಟನೆ ನಡೆದಿತ್ತು. ಈ ಹಿರಿಯ ಮಹಿಳೆ ಕನ್ನಡದಲ್ಲಿ ಮಾತನಾಡಿದ್ದ ಒಬ್ಬ ನೌಕರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
"ನಿನಗೆ ಕನ್ನಡದಲ್ಲಿ ಮಾತನಾಡಲು ಎಷ್ಟು ಧೈರ್ಯ? ಇದು ಸ್ಲಂಗಳಲ್ಲಿ ಮಾತನಾಡುವ ಭಾಷೆ" ಎಂದು ನೌಕರನ್ನು ನಿಂದಿಸಿದ್ದರು.ಈ ನಿಂದನೆ ಅಲ್ಲಿ ಆಟವಾಡುತ್ತಿದ್ದ ಇತರ ಸದಸ್ಯರ ಎದುರಿಗೇ ನಡೆದಿತ್ತಿ.
೭೨ ವರ್ಷದ ಈ ಮಗಿಳೆ ಬೆಂಗಳೂರು ಕ್ಲಬ್ಬಿನ ಶಾಶ್ವತ ಸದಸ್ಯೆ.
ಈ ಘಟನೆ ನಡೆದ ನಂತರ ಕ್ಲಬ್ಬಿನ ನಿರ್ವಾಹಕ ಮಂಡಲಿಗೆ ದೂರು ಬಂದ ಹಿನ್ನಲೆಯಲ್ಲಿ, ಜನವರಿ ೧೬ ರಂದು ನಡೆದ ಸಭೆಯಲ್ಲಿ ತನಿಖೆಗೆ ಆದೇಶಿಸಿ, ಜನವರಿ ೨೦ ರಿಂದ ಮಹಿಳೆಯನ್ನು ಬೆಂಗಳೂರು ಕ್ಲಬ್ಬಿನಿಂದ ಅಮಾನತು ಮಾಡಲಾಗಿದೆ.
ಆದರೆ ಈ ಮಹಿಳೆಯನ್ನು ಸಂಪರ್ಕಿಸಿದಾಗ ಅವರು ಬೇರೆಯದೇ ಕಥೆಯನ್ನು ಹೇಳುತ್ತಾರೆ. ಈ ರೀತಿಯ ಘಟನೆ ನಡೆದೇ ಇಲ್ಲ. ನಾನು ಅಂದು ಒಬ್ಬ ಪಂಜಾಬಿ ಮತ್ತು ದಕ್ಷಿಣ ಭಾರತೀಯ ಮಹಿಳೆಯೊಂದಿದೆ ಆಟವಾಡುತ್ತಿದ್ದೆ. ದಕ್ಷಿಣ ಭಾರತದ ಮಹಿಳೆ ಯಾವಾಗಲು ತನ್ನ ಭಾಷೆಯಲ್ಲಿ (ಕನ್ನಡ) ಮಾತನಾಡುತ್ತಿದ್ದರು. ನೀವು ಇಂಗ್ಲಿಶ್ ಅಥವಾ ಹಿಂದಿಯಲ್ಲಿ ಮಾತನಾಡಿದರೆ ನಿಮ್ಮ ಜೋಕುಗಳು ಎಲ್ಲರಿಗೂ ಅರ್ಥವಾಗುತ್ತದೆ ಎಂದಷ್ಟೇ ನಾನು ಹೇಳಿದ್ದೆ ಎನ್ನುತ್ತಾರೆ.
ಈ ಹಿಂದೆ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮ ಮತ್ತು ಅವರ ಚಾಲಕ ಕ್ಲಬ್ಬಿನ ಭದ್ರತಾ ಸಿಬ್ಬಂದಿಯ ಜೊತೆಗೆ ಅನುಚಿತ ವರ್ತನೆ ತೋರಿದ್ದಕೆ ಒಂದು ತಿಂಗಳವರೆಗೆ ಸದಸ್ಯತ್ವ ಕಳೆದುಕೊಂಡಿದ್ದರು. ಇದರ ಪರಿಣಾಮವಾಗಿ ಕ್ಲಬ್ಬಿನ ಮೇಲೆ ಅಬಕಾರಿ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಇಲಾಖೆಗಳು ದಾಳಿ ನಡೆಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


