ಜಿಲ್ಲಾ ಸುದ್ದಿ

ಕ್ರಿಸ್ ಆಸ್ಪತ್ರೆ ಆವರಣದಲ್ಲಿ ಕಿಂಡರ್ ಮೆಡಿಕಲ್ ಸಮೂಹದ ಮಹಿಳೆ ಮತ್ತು ಮಕ್ಕಳ ವಿಶೇಷ ಆಸ್ಪತ್ರೆ

ಸಿಂಗಪುರದ ಅಂತಾರಾಷ್ಟ್ರೀಯ ವೆಂಚರ್ ಕಿಂಡರ್ ಮೆಡಿಕಲ್ ಸಮೂಹ, ಇಂದು ಮಹಿಳೆ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು...

ಕ್ರಿಸ್ ಆಸ್ಪತ್ರೆ ಆವರಣದಲ್ಲಿ ಕಿಂಡರ್ ಮೆಡಿಕಲ್ ಸಮೂಹದ ಮಹಿಳೆ ಮತ್ತು  ಮಕ್ಕಳ ವಿಶೇಷ ಆಸ್ಪತ್ರೆ
Published On :

ಡಿ.29, 2015, ಬೆಂಗಳೂರು: ಸಿಂಗಪುರದ ಅಂತಾರಾಷ್ಟ್ರೀಯ ವೆಂಚರ್ ಕಿಂಡರ್ ಮೆಡಿಕಲ್ ಸಮೂಹ, ಇಂದು ಮಹಿಳೆ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿದೆ. ಬೆಂಗಳೂರಿನಲ್ಲಿ ಸಮೂಹದ ಮೊದಲನೆ ಹೆಜ್ಜೆಯಾಗಿದೆ. ಸಿಂಗಪುರ, ಮಲೇಷ್ಯಾ, ಶ್ರೀಲಂಕಾದಲ್ಲಿ ಶಾಖೆಗಳನ್ನು ಅಭಿವೃದ್ಧಿಗೊಳಿಸಿದ್ದು, ಬೆಂಗಳೂರಿನ ಕ್ರಿಸ್ ಆವರಣದಲ್ಲಿ ಕಿಂಡರ್ ವುಮೆನ್ ಮತ್ತು ಚಿಲ್ಡ್ರನ್ ಸೆಂಟರ್(ಕೆಡಬ್ಲ್ಯುಸಿಸಿ) ಎಲ್ಲ ಅತ್ಯಾಧುನಿಕ ತಂತ್ರಜ್ಞಾನ ಹಾಗೂ 3ನೇ ಹಂತದ ಎನ್‍ಐಸಿಯುನೊಂದಿಗೆ ಅಭಿವೃದ್ಧಿಗೊಂಡಿದೆ. ಈ ಆಸ್ಪತ್ರೆಯನ್ನು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕ್ರಿಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಕ್ಯಾತ್‍ಲ್ಯಾಬ್‍ಗೆ ಚಾಲನೆ ನೀಡಿದೆ. ಕೆ.ಆರ್.ಪುರಂ ಶಾಸಕ ಬಿ.ಎ.ಬಸವರಾಜು ಈ ಲ್ಯಾಬ್‍ಗೆ ಚಾಲನೆ ನೀಡಿದರು. 64 ಸ್ಲೈಸ್ ಸಿಟಿ ಸ್ಕ್ಯಾನ್ ಸೆಂಟರ್‍ಗೆ ಬಿಬಿಎಂಪಿ ಕಾರ್ಪೊರೇಟರ್ ಆನಂದ್ ಪಿ ಚಾಲನೆ ನೀಡಿದರು. ಕ್ರಿಸ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ರಾಬರ್ಟ್ ಕ್ರಿಸ್ಟೋಫರ್, ಕಿಂಡರ್ ಮೆಡಿಕಲ್ ಸಮೂಹದ ಅಧ್ಯಕ್ಷ ಡಾ.ವಿ.ಕೆ. ಪ್ರದೀಪ್ ಕುಮಾರ್ ಈ ಶುಭಸಂದರ್ಭದಲ್ಲಿ ಹಾಜರಿದ್ದರು.
ಈ ವೇಳೆ ಮಾತನಾಡಿದ ಕ್ರಿಸ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ರಾಬರ್ಟ್ ಕ್ರಿಸ್ಟೋಫರ್,ಕಿಂಡರ್ ಮಹಿಳೆ ಮತ್ತು ಮಕ್ಕಳ ಕೇಂದ್ರ ಮಹಿಳೆಯರಿಗಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುತ್ತಿದ್ದು ತಪಾಸಣೆ, ನೋಂದಣಿ ಉಚಿತ. ಇತರೆ ಚಿಕಿತ್ಸೆ ಮೇಲೆ ಶೇ.10ರಷ್ಟು ರಿಯಾಯಿತಿ ನೀಡುತ್ತಿದೆ ಎಂದರು.
ಡಾ.ವಿ.ಕೆ.ಪ್ರದೀಪ್ ಕುಮಾರ್ ಮಾತನಾಡಿ, ಕಿಂಡರ್ ಬೆಂಗಳೂರಿನ ವೈಟ್‍ಫೀಲ್ಡ್, ಜೈಪುರ ಹಾಗೂ ಮುಂಬೈಗಳಲ್ಲಿ ಕೇಂದ್ರ ಆರಂಭಿಸಲು ಆಲೋಚಿಸಿದೆ. ಸಿಂಗಪುರದ ತಜ್ಞತೆ, ಗುಣಮಟ್ಟ ಮತ್ತು ವ್ಯವಸ್ಥೆ ಭಾರತದ ಜನರಿಗೂ ಲಾಭ ನೀಡಲಿದೆ ಎಂಬ ಭರವಸೆಯಿದೆ ಎಂದರು.

ಕ್ರಿಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನೆ ಘಟಕದ ಕುರಿತು:
ಕ್ರಿಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನೆ ಘಟಕ ಪ್ರೈ.ಲೀ, 2015ರಲ್ಲಿ ಆರಂಭಗೊಂಡ ಅತ್ಯಾಧುನಿಕ ತಂತ್ರಜ್ಞಾನದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ. ಕ್ಷಿಪ್ರವೇಗದಲ್ಲಿ ಆಸ್ಪತ್ರೆ ನಗರದ ಪ್ರಮುಖ ಆರೋಗ್ಯಧಾಮವಾಗಿ ಜನಪ್ರಿಯಗೊಂಡಿತು. ಜನರ ಲಾಭಕ್ಕಾಗಿ ಕ್ಯಾತ್‍ಲ್ಯಾಬ್ ಸೇವೆ ಮತ್ತು 64ಸ್ಲೈಸ್ ಸಿಟಿ ಸ್ಕ್ಯಾನ್‍ನ್ನು ಆರಂಭಿಸಿದೆ. ಹೃದ್ರೋಗ ಕ್ಷೇತ್ರದ ಹೆಸರಾಂತ ವೈದ್ಯರೊಂದಿಗೆ ಕ್ಯಾತ್‍ಲ್ಯಾಬ್ ಸೇವೆ ಲಭಿಸಲಿದೆ. ಕ್ಯಾತ್‍ಲ್ಯಾಬ್ ಹಾಗೂ ಸಿಟಿ ಸ್ಕ್ಯಾನ್ ಜನರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ.

ಕಿಂಡರ್ ವುಮೆನ್ ಆಸ್ಪತ್ರೆ ಮತ್ತು ಫೆರ್ಟಿಲಿಟಿ ಕೇಂದ್ರದ ಕುರಿತು:
ಕೇರಳ ಮತ್ತು ಬೆಂಗಳೂರಿನಲ್ಲಿ ಮಹಿಳೆಯರಿಗೆ ತಾಜಾ ಉಸಿರಾಗಿದ್ದು ಕಿಂಡರ್ ಮಹಿಳೆ ಆಸ್ಪತ್ರೆ ಮತ್ತು ವಂಶಾಭಿವೃದ್ಧಿ ಘಟಕ, ಭಾರತ ಹಾಗೂ ಸಿಂಗಪುರದ ಅಂತಾರಾಷ್ಟ್ರೀಯ ಸಹಯೋಗವಾಗಿದೆ. 100 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆ ಮಹಿಳೆಯರಿಗೆ ಕೈಗೆಟಕುವ ದರದಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆ ನೀಡುತ್ತಿದೆ. ಕಿಂಡರ್ ಐವಿಎಫ್ ಬ್ರ್ಯಾಂಡ್‍ನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕೇರಳ ಮತ್ತು ಬೆಂಗಳೂರಿನಲ್ಲಿ ಪರಿಚಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.