ಜಿಲ್ಲಾ ಸುದ್ದಿ

ಉಗ್ರಪ್ಪ ನೇತೃತ್ವದ ಸಮಿತಿಯಿಂದ ಸಿಎಂಗೆ ಪ್ರಾಥಮಿಕ ಶಿಫಾರಸುಗಳ ವರದಿ ಸಲ್ಲಿಕೆ

ರಾಜ್ಯದ ವಿವಿಧೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಒಂದೂವರೆ ವರ್ಷದ ತರುವಾಯ ತನ್ನ ಪ್ರಾಥಮಿಕ ವರದಿಯನ್ನು ...

ಉಗ್ರಪ್ಪ ನೇತೃತ್ವದ ಸಮಿತಿಯಿಂದ ಸಿಎಂಗೆ ಪ್ರಾಥಮಿಕ ಶಿಫಾರಸುಗಳ ವರದಿ ಸಲ್ಲಿಕೆ
ಸಿಎಂ ಗೆ ವರದಿ ಸಲ್ಲಿಸಿದ ಉಗ್ರಪ್ಪ ನೇತೃತ್ವದ ಸಮಿತಿ
Published On :

ಬೆಂಗಳೂರು: ರಾಜ್ಯದ ವಿವಿಧೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಒಂದೂವರೆ ವರ್ಷದ ತರುವಾಯ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, 18 ಪ್ರಮುಖ ಶಿಫಾರಸುಗಳನ್ನು ಮಾಡಿದೆ.

`ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ' ಹೆಸರಿನ ಈ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಇಂದು ಮುಖ್ಯಮಂತ್ರಿಯವರಿಗೆ ೇಪ್ರಾಥಮಿಕ ವರದಿಯನ್ನು ಹಸ್ತಾಂತರಿಸಿದರು.

ಪ್ರಮುಖ ಶಿಫಾರಸುಗಳು

1. ಶಾಲೆಗಳಲ್ಲಿ ಬೋಧಕ-ಬೋಧಕೇತರ ಹಾಗೂ ಆಸ್ಪತ್ರೆಗಳಲ್ಲಿ ಕಾವಲುಗಾರ ಸೇರಿ ಇನ್ನಿತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅಭ್ಯರ್ಥಿಗಳ ಪೂರ್ವಾಪರ ಮಾಹಿತಿ ಪೊಲೀಸ್ ಇಲಾಖೆಯ ತಪಾಸಣೆ ಆಗಲೇ ಬೇಕು. ಜೊತೆಗೆ ವಾಹನ ಚಾಲಕ ಮತ್ತು ನಿರ್ವಾಹಕರು, ಸಿಬ್ಬಂದಿ ಮಾಹಿತಿ ಪೊಲೀಸ್ ಠಾಣೆಗೆ ಶಾಲೆಗಳು, ಆಸ್ಪತ್ರೆಗಳು ನೀಡಬೇಕು, ಪ್ರತಿ ನೌಕರರಿಗೆ ಪೊಲೀಸರಿಂದ ನಿಗದಿತ ಬ್ಯಾಡ್ಜ್ ಹಾಗೂ ನಂಬರ್ ನೀಡುವ ನಿಯಮಾವಳಿ ರೂಪಿಸಬೇಕು.

2. ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಸಭೆ ನಡೆಸಬೇಕು. ಸಿಬ್ಬಂದಿ ನಡವಳಿಕೆ, ನ್ಯೂನತೆ, ಕುಂದುಕೊರತೆ ಕಂಡುಬಂದರೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು, ಈ ಸಭೆಯ ಲಾಗ್ ಪುಸ್ತಕ ಕಡ್ಡಾಯವಾಗಿ ನಿರ್ವಹಿಸು ವಂತಾಗಬೇಕು. ಪೊಲೀಸ್ ಅಧಿಕಾರಿಗಳು ಸಹ ಇದೇ ರೀತಿ ಕ್ರಮಕೈಗೊಳ್ಳಬೇಕು ಮತ್ತು ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ನಿತ್ಯ ಪೊಲೀಸ್ ಬೀಟ್ ಕಡ್ಡಾಯ ಮಾಡಬೇಕು.

3. ಶಾಲಾ, ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ ಮುಂತಾದ ಕಡೆ ಪ್ರವೇಶ- ನಿರ್ಗಮನ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಿ ಸರ್ಕಾರ ಕ್ರಮಕೈಗೊಳ್ಳಬೇಕು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೆಟರ್ ಸೌಲಭ್ಯ ದ್ವಿಗುಣಗೊಳಿಸಿ, ಮಹಿಳಾ ರೋಗಿಗಳಿಗೆ ವೆಂಟಿಲೆಟರ್ ಕೊರತೆ ಇಲ್ಲದೇ ವೈದ್ಯಕೀಯ ಸೌಲಭ್ಯ ಸುಲಭವಾಗಿ ದೊರೆಯುವಂತಾಗಬೇಕು.

4. ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಮಿತಿ ಮೀರಿದ ವಿಳಂಬವಾಗುತ್ತಿದೆ. ಈಗಿರುವ ವ್ಯವಸ್ಥೆಯನ್ನು ಬದಲಾಯಿಸಿ ಡಿಸಿ, ಎಸ್ಪಿ ಹಾಗೂ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲು ಕಾನೂನು ತಿದ್ದುಪಡಿ ತರಬೇಕು.

5. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಮೇಲೆ ನಡೆಯುವ ವೈದ್ಯಕೀಯ ಪರೀಕ್ಷೆಯಲ್ಲಿ ಎರಡು ಬೆರಳುಗಳ ಪರೀಕ್ಷೆ ನಿಷೇಧ ಆಗಿರುವುದನ್ನು ಎಲ್ಲಾ ವೈದ್ಯರು ಕಟ್ಟುನಿಟ್ಟಾಗಿ ಪಾಲಿಸಬೇಕು.

6. ಹೊರ ರಾಜ್ಯಗಳಿಂದ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಜನರ ಮೇಲೆ ನಿಗಾ ಇಟ್ಟು ಆಯಾ ಪ್ರದೇಶಗಳ ಗಸ್ತು ಕಾರ್ಯ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಬೇಕು. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೂ ಮಾಲಿಕರು ಕಾವಲುಗಾರರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಲು ನಿಯಮಾವಳಿ ರೂಪಿಸಬೇಕು.

7. ಬಾಡಿಗೆ ವಾಹನಗಳ ಚಾಲಕರು- ನಿರ್ವಾಹಕರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವ ಮುನ್ನ ವಾಹನ ಮಾಲಿಕರು ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಮಾಡಬೇಕು. ನೇಮಕಗೊಂಡ ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಬ್ಯಾಡ್ಜ್ - ನಂಬರ್ ನೀಡುವ ನಿಯಮಾವಳಿ ಜಾರಿ ಮಾಡಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.