ಜಿಲ್ಲಾ ಸುದ್ದಿ

ಸಿಗ್ನಲ್ ಫ್ರೀ ನಿಯಮ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ: ಸಚಿವರ ಆದೇಶ

ರಾಜ್ಯ ಗೃಹ ಸಚಿವರ ಸಿಗ್ನಲ್ ಫ್ರೀ ನಿಯಮ ಇನ್ನುಮುಂದೆ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ!

ಸಿಗ್ನಲ್ ಫ್ರೀ ನಿಯಮ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ: ಸಚಿವರ ಆದೇಶ
ಆಂಬುಲೆನ್ಸ್(ಸಂಗ್ರಹ ಚಿತ್ರ)
Published On :

ಬೆಂಗಳೂರು: ರಾಜ್ಯ ಗೃಹ ಸಚಿವರ ಸಿಗ್ನಲ್ ಫ್ರೀ ನಿಯಮ ಇನ್ನುಮುಂದೆ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ! ಹೌದು. ಇದು ಸ್ವತಃ ಸಚಿವರೇ ನೀಡಿರುವ ಆದೇಶ. ಗೃಹ ಸಚಿವರು ಸಂಚರಿಸುವಾಗ ನಿಯಮದಂತೆ ಸಿಗ್ನಲ್  ಫ್ರೀ ಮಾಡಲಾಗುತ್ತದೆ. ಆಗ ಎಲ್ಲಾ ವಾಹನಗಳು ಒಟ್ಟಿಗೆ ನಿಲ್ಲಬೇಕಾಗುತ್ತದೆ. ನಂತರ ಸಚಿವರ ವಾಹನಗಳು ತೆರಳಿದ ನಂತರವಷ್ಟೇ ಇತರ ವಾಹನಗಳು ಸಾಗಬೇಕು. ಇಂಥ ಸಮಯದಲ್ಲಿ ಆಂಬುಲೆನ್ಸ್ ಗಳು ಕೂಡ ಸಚಿವರ ವಾಹನ ಸಾಗಿ ಹೋಗುವವರೆಗೂ ಕಾಯಬೇಕಿತ್ತು. ಆದರೆ ಇನ್ನು ಮುಂದೆ ಆ ಪರಿಸ್ಥಿತಿ ಬೇಡ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. 
ಚಾಲುಕ್ಯ ವೃತ್ತದಲ್ಲಿ ತೆರಳುತ್ತಿದ್ದಾಗ ಪೊಲೀಸರು ವಿಧಿಸಿದ್ದ ಸಿಗ್ನಲ್ ಫ್ರೀ ಸಮಯದಲ್ಲಿ ಆಂಬುಲೆನ್ಸ್ ವಾಹನಗಳ ಮಧ್ಯೆ ಸಿಲುಕಿರುವುದನ್ನು ಸಚಿವರು ಗಮನಿಸಿ ಆದೇಶ.  ಹೊರಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.