ಜಿಲ್ಲಾ ಸುದ್ದಿ

ಡಾಟಾ ಎಂಟ್ರಿ ಆಪರೇಟರ್‍ಗಳ ನೇಮಕದಲ್ಲಿಯೂ ಅವ್ಯವಹಾರ

ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‍ಗಳ ಸೇವೆ ಕಾಯಂ ಮಾಡದೇ, ಮಾಸಿಕ ವೇತನವನ್ನೂ ನೀಡದೇ ಜಿಲ್ಲಾ ...

ಡಾಟಾ ಎಂಟ್ರಿ ಆಪರೇಟರ್‍ಗಳ ನೇಮಕದಲ್ಲಿಯೂ ಅವ್ಯವಹಾರ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‍ಗಳ ಸೇವೆ ಕಾಯಂ ಮಾಡದೇ, ಮಾಸಿಕ ವೇತನವನ್ನೂ ನೀಡದೇ ಜಿಲ್ಲಾ ಪಂಚಾಯಿತಿಗಳು ಸತಾಯಿಸುತ್ತಿವೆ. ಇದರ ನಡುವೆ ರಾಜ್ಯದ ವಿವಿಧ ಕಡೆ ಮಾಡಿಕೊಂಡಿರುವ ನೇಮಕಾತಿಯಲ್ಲಿ ಕೂಡ ಅವ್ಯವಹಾರ ನಡೆದಿದೆ. ಈ ಸಂಬಂಧ `ಕನ್ನಡ-ಪ್ರಭ'ಕ್ಕೆ ದಾಖಲೆಗಳು ಲಭ್ಯವಾಗಿದೆ.

ನರೇಗಾ ಯೋಜನೆಯಡಿ ರಾಜ್ಯದ 5629 ಗ್ರಾ.ಪಂ.ಗಳಿಗೆ ಡಾಟಾ ಎಂಟ್ರಿ ಆಪರೇಟರ್ ನೇಮಿಸಿಕೊಳ್ಳಲಾಗಿತ್ತು, ಮೆರಿಟ್ ಆಧಾರದ ಮೇಲೆ ಅರ್ಹ-ರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯೂ ನಡೆದಿತ್ತು. ಕೆಲವು ಕಡೆಗುತ್ತಿಗೆ, ಮತ್ತೆ ಕೆಲವು ಕಡೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆದು ಕಳೆದ 10 ವರ್ಷದಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಕಾಯಂ ಮಾಡಲು ಸರ್ಕಾರವು ಗ್ರಾ.ಪಂ. ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ರೂಪಿಸಿತು. ಅದರಂತೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ-ವರನ್ನು ನೇಮಕ ಮಾಡಿಕೊಳ್ಳಲು ಜಿ.ಪಂ.ಗಳಿಗೆ ಸೂಚಿಸಲಾಯಿತು. 2014ರ ಸೆಪ್ಟೆಂಬರ್ 10ರಂದು ಸರ್ಕಾರದ ಆದೇಶ ಹೊರಬಿದ್ದು, ಸೇವೆ ಕಾಯಂಗೊಳಿಸಲು ಸೂಚಿಸಲಾಗಿತ್ತು.

ಆದರೆ, ಯಾವುದೇ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ, ಕೆಲವು ಜಿಲ್ಲೆಗಳಲ್ಲಿ ಈ ಪ್ರಕ್ರಿಯೆಯೇ ಆರಂಭವಾಗಿಲ್ಲ. ಈ ಮಧ್ಯೆ ಕೆಲವು ಜಿಲ್ಲೆಗಳಲ್ಲಿ ಮಾಡಿಕೊಂಡಿರುವ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರದ ಸೂಚನೆ ಉಲ್ಲಂಘಿಸಲಾಗಿದೆ.

ಸಿಇಓಗಳಿಗೆ ಎಚ್ಚರಿಕೆ: ಕೆಲವು ಕಡೆಗಳಲ್ಲಿ ಕರ ವಸೂಲಿಗಾರ, ನೀರುಗಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇತರೆ ಸಿಬ್ಬಂದಿಯನ್ನು ಗ್ರಾ.ಪಂ. ಹಿಂದಿನ ದಿನಾಂಕದಂದು ಕ್ಲರ್ಕ್ ಎಂದು ಠರಾವು ಮಾಡಿರುವಂತೆ ಮಾಡಿ ಜಿ.ಪಂ.ನಿಂದ ಅನುಮೋದನೆ ಪಡೆದಿದ್ದು ಸರ್ಕಾರದ ಗಮನಕ್ಕೂ ಬಂದಿತ್ತು. ಈ ಬಗ್ಗೆ ಸ್ಪಷ್ಟ ಉತ್ತರ ನೀಡಿರುವ ಸರ್ಕಾರ, ತಪ್ಪು ಪ್ರಸ್ತಾವನೆಗೆ ಅನುಮೋದನೆ ನೀಡಿದರೆ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು.

ಈ ನಡುವೆಯೂ ಜಿ.ಪಂ.ಅಧಿಕಾರಿಗಳು ಕುಂಟು ನೆಪ ಹುಡುಕಿ ಹಾಲಿ ಕರ್ತವ್ಯ ನಿರತ ಡಾಟಾ ಎಂಟ್ರಿ ಆಪರೇ-ಟ-ರ್‍ಗಳಿಗೆ ನೇಮಕಾತಿ ನೀಡಲು ಸತಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ಕಡೆಗಳಲ್ಲಿ ಕರವಸೂಲಿ- ಗಾರರು, ನೀರುಗಂಟಿ ಸೇರಿದಂತೆ ತಮಗಿಷ್ಟ ಬಂದವರಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ನೀಡಲಾಗಿದೆ. ಇನ್ನು ಕೆಲವು ಕಡೆ ಹಾಲಿ ಕರ್ತವ್ಯನಿರತ ಸಿಬ್ಬಂದಿಗೆ ಹೆಚ್ಚಿನ ವಿದ್ಯಾರ್ಹತೆ ನೆಪ ಹೇಳಿ ನೇಮಕಾತಿ ಮಾಡಿಕೊಳ್ಳದಿರುವುದೂ ಕಂಡುಬಂದಿದೆ. ಉದಾಹರಣೆಗೆ, ಬಳ್ಳಾರಿಯ ಕೊರ್ಲಗುಂಟಿಯಲ್ಲಿ ಪಂಪ್‍ಆಪರೇ-ಟರ್‍ಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಕರುಣಿಸಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್ ಆಗಿದ್ದವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನು
ಚಳ್ಳಗುರ್ಕಿ-ಯಲ್ಲಿ 9 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಗೆ ಕೆಲಸ ನಿರಾಕರಿಸಿ, ಹೊಸ ಮುಖಕ್ಕೆ ಅವಕಾಶ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.