ಚರ್ಚ್ ಸ್ಟ್ರೀಟ್ ಸ್ಪೋಟಕ್ಕೆ ವರ್ಷ
ಕಳೆದ 2014ರ ಡಿ.28ರಂದು ಸಂಭವಿಸಿದ ಬೆಂಗಳೂರಿನ ಚರ್ಚ್‍ಸ್ಟ್ರೀಟ್ ಸ್ಪೋಟಕ್ಕೆ ಸೋಮವಾರ ಒಂದು ವರ್ಷ ಕಳೆದಿದೆ. ಈ ಸ್ಪೋಟದಲ್ಲಿ ಮೃತಪಟ್ಟ ತಮಿಳುನಾಡು ಮೂಲದ ಭವಾನಿ ಅವರಿಗೆ ಕುಟುಂಬ ಸದಸ್ಯರು...

ಬೆಂಗಳೂರು: ಕಳೆದ 2014ರ ಡಿ.28ರಂದು ಸಂಭವಿಸಿದ ಬೆಂಗಳೂರಿನ ಚರ್ಚ್‍ಸ್ಟ್ರೀಟ್ ಸ್ಪೋಟಕ್ಕೆ ಸೋಮವಾರ ಒಂದು ವರ್ಷ ಕಳೆದಿದೆ. ಈ ಸ್ಪೋಟದಲ್ಲಿ ಮೃತಪಟ್ಟ ತಮಿಳುನಾಡು ಮೂಲದ ಭವಾನಿ ಅವರಿಗೆ ಕುಟುಂಬ ಸದಸ್ಯರು ಘಟನೆ ನಡೆದ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಮೃತ ಭವಾನಿ ಅವರ ಪತಿ ಬಾಲನ್, ಸಹೋದರ ರಮೇಶ್ ಅವರು ಸ್ಪೋಟ ನಡೆದ ಸ್ಥಳದಲ್ಲಿ ಮೆಣದಬತ್ತಿ ಹಚ್ಚಿ ನೆನಪಿಸಿಕೊಂಡರು. ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪತಿ ಬಾಲನ್, ``ಇಂದಿಗೆ ನನ್ನ ಪತ್ನಿಯನ್ನು ಕಳೆದುಕೊಂಡು ವರ್ಷ ಕಳೆದಿದೆ. ಹೀಗಾಗಿ ನಾವು ಈ ಸ್ಥಳದಲ್ಲಿ ಶ್ಪದಾಟಛಿಂಜಲಿ ಸಲ್ಲಿಸುತ್ತಿದ್ದೇವೆ. ನನ್ನ ಮಕ್ಕಳು ನೊಂದಿಕೊಳ್ಳುತ್ತಾರೆಂಬ ಕಾರಣಕ್ಕಾಗಿ ಈ ವಿಚಾರವನ್ನು ಅವರಿಗೆ ಹೇಳಿಲ್ಲ'' ಎಂದು ಹೇಳುವಾಗ ಅವರ ಕಣ್ಣಾಲಿಗಳು ತೆವವಾಗಿದ್ದವು.
``ಕರ್ನಾಟಕ ಸರ್ಕಾರ ಘಟನೆ ನಡೆದಾಗ ನಮಗೆ ಬಹಳ ಸಹಾಯ ಮಾಡಿತು. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯಲ್ಲೂ ನಮಗೆ ಸಹಾಯ ಮಾಡಿತ್ತು. ಪರಿಹಾರದ ಹಣ ರು.5 ಲಕ್ಷಕೂಡ ಸರ್ಕಾರ ನೀಡಿದೆ. ನಮಗಾದ ಸ್ಥಿತಿ ಬೇರೆ ಯಾರಿಗೂ ಆಗಬಾರದು. ದೇಶದ ಯಾವ ರಾಜ್ಯದಲ್ಲೂ ಈ ರೀತಿಯ ಘಟನೆ ಸಂಭವಿಸಬಾರದು'' ಎಂದು ಭಾವುಕರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


