ಕಲಾವಿದ ವೆಂಕಟೇಶ್ ರಾವ್‍ಗೆ ಸನ್ಮಾನ
ಇಲ್ಲಿನ ನಯನ ಸಭಾಂಗಣದಲ್ಲಿ ಯಕ್ಷ ದೇಗುಲ ಮತ್ತು ಕೇಂದ್ರ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು...

ಬೆಂಗಳೂರು: ಇಲ್ಲಿನ ನಯನ ಸಭಾಂಗಣದಲ್ಲಿ ಯಕ್ಷ ದೇಗುಲ ಮತ್ತು ಕೇಂದ್ರ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಯಕ್ಷಗಾನ ಪ್ರೋತ್ಸಾಹಕ ಮಹಾಬಲೇಶ್ವರ ಅಡಿಗ ಮಾತನಾಡಿ, ಹಿರಿಯ ಕಲಾವಿದರನ್ನು ನಾವು ಗೌರವಿಸುವಂತಹ ಕಾರ್ಯ ಮಾಡಿದಾಗ ಪರೋಕ್ಷವಾಗಿ ನಾವು ಕಲೆಯನ್ನು ಕೂಡ
ಗೌರವಿಸಿದಂತೆ. ತನ್ಮೂಲಕ ಕಲೆಯ ಉಳಿಯುವಿಕೆ ಹಾಗೂ ಕಲೆಯ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಸುರೇಶ ಹಂದೆ ಮಾತನಾಡಿ, ಜಲವಳ್ಳಿ ವೆಂಕಟೇಶ ಅವರಂಧ ಮೇರು ಕಲಾವಿದರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಹಾಗೆಯೇ ಯಕ್ಷದೇಗುಲ ಸಂಸ್ಥೆಯು ಕಳೆದ ಹಲ ವರ್ಷಗಳಿಂದ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ವೆಂಕಟೇಶ್, ಇನ್ನು ಕಲೆಯಲ್ಲಿ ತೊಡಗುವಂತೆ ಅಭಿಮಾನಿ ಬಳಗದ ಒತ್ತಡ ಇದ್ದರೂ ಭಾಗವಹಿಸುವುದಕ್ಕೆ ದೈಹಿಕ ಅಶಕ್ತತೆ ಇದೆ ಎಂದರು. ಜೊತೆಗೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿರುವ ಬಗ್ಗೆಯೂ ಈ ವೇಳೆ ಬೇಸರ ವ್ಯಕ್ತಪಡಿಸಿದರು.
ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕೆ.ಎಂ.ಶೇಖರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಮೋಹನ್ ವಂದಿಸಿ, ಲತಾ ನಿರೂಪಿಸಿದರು. ಲಂಬೋದರ ಹೆಗಡೆ, ದೇವರಾಜ ದಾಸ, ಗಣಪತಿ ಭಟ್, ಮಾಧವ, ಸುಜಯೀಂದ್ರ ಹಂದೆ, ತಮ್ಮಣ್ಣಗಾಂವ್ಕರ್, ಗಣಪತಿ ಹೆಗಡೆ, ಗಣೇಶ ಉಪ್ಪುಂದ, ಉದಯ ಬೋ, ವಿಶ್ವನಾಧ ಶೆಟ್ಟಿ, ನರಸಿಂಹ ತುಂಗ, ಮನೋಜ್ ಭಟ್, ಪ್ರಕಾಶಅ ಉಳ್ಳೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


