ವಾಯುಮಾಲಿನ್ಯ: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕಾಯಿಲೆಗಳು
ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಎಷ್ಟು ಸುರಕ್ಷಿತರು? ವಾಯುಮಾಲಿನ್ಯ ಇವರ ಆರೋಗ್ಯದ ಮೇಲೆ ಏನೆಲ್ಲಾ...

ಬೆಂಗಳೂರು: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಎಷ್ಟು ಸುರಕ್ಷಿತರು? ವಾಯುಮಾಲಿನ್ಯ ಇವರ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಉಂಟು ಮಾಡುತ್ತಿದೆ ಎಂಬುದರ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರ್ ಮೆಂಟ್ (ಸಿಎಸ್ ಇ) ವರದಿ ಬೆಳಕು ಚೆಲ್ಲಿದೆ.
ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದ ವಿರಾಟ ರೂಪ ದರ್ಶನವಾಗಿದೆ.ಲೇಕ್ ಸೈಡ್ ಆಸ್ಪತ್ರೆ ಮತ್ತು ವೈದ್ಯಕೀಯ ಕೇಂದ್ರದ ಶಿಶುತಜ್ಞ ಡಾ.ಎಚ್. ಪರಮೇಶ್ವರ್ ಅವರು ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ 18 ವರ್ಷದೊಳಗಿನ 20 ಸಾವಿರ ಮಕ್ಕಳನ್ನು ಅಧ್ಯಯನ ನಡೆಸಿದ್ದಾರೆ.ಇವರಿಂದ ತಿಳಿದು ಬಂದ ಮಾಹಿತಿ ಶೇ.9 ರಷ್ಟು ರೋಗಗಳು ಹೆಚ್ಚಾಗಿವೆ.
ಆ ಮಕ್ಕಳ ಭೌಗೋಳಿಕ ಹಿನ್ನೆಲೆ ಮತ್ತು ಶಾಲಾ ವಾತಾವರಣ ಆಧರಿಸಿ ಮೂರು ಗುಂಪುಗಳನ್ನು ರಚಿಸಲಾಯಿತು. ಒಂದನೇ ಗುಂಪಿನಲ್ಲಿ ಹೆಚ್ಚು ವಾಹನ ದಟ್ಟಣೆ ಪ್ರದೇಶದ ಮಕ್ಕಳ ಹೆಚ್ಚು ವಾಹನ ದಟ್ಟಣೆ ಪ್ರದೇಶ ಮತ್ತು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಪ್ರದೇಶದ ಮಕ್ಕಳ ಅನಾರೋಗ್ಯ ಶೇ.31.14ರಷ್ಟು ಹೆಚ್ಚಿದೆ. 1994ರಿಂದ 99 ವರ್ಷದೊಳಗೆ ಈ ಎಲ್ಲ ಮಕ್ಕಳಲ್ಲಿ ಅಸ್ತಮಾ ಕಾಯಿಲೆಯು ಶೇ 20ರಿಂದ 27.5 ರಷ್ಟು ಹಾಗೂ ತೀವ್ರತರವಾದ ಅಸ್ತಮಾದ ಪ್ರಮಾಣ ಪ್ರದೇಶದ ಮಕ್ಕಳ ಅನಾರೋಗ್ಯ ಶೇ.11.15 ರಷ್ಟು ಹೆಚ್ಚಿದೆ. ಗ್ರಾಮಾಂತರ ಪ್ರದೇಶದ ಮಕ್ಕಳ ಅನಾರೋಗ್ಯ ಶೇ.5.7 ರಷ್ಟು ಹೆಚ್ಚಿದೆ. 20 ರಿಂದ 60 ವರ್ಷದೊಳಗಿನ 292 ಆರೋಗ್ಯವಂತ ಪುರುಷರನ್ನು ಬೆಂಗಳೂರು ಗ್ರಾಮಾಂತರದ ನಿಯಂತ್ರಿತ ಗುಂಪುಗಳಿಂದ 148 ಮಂದಿ ಹಾಗೂ ನಗರದ ಪ್ರದೇಶದ 144 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು) ಅಧ್ಯಯನಕ್ಕೆ ಒಳಪಡಿಸಿದಾಗ ಅವರ ಉಸಿರಾಟ ವಿಧಾನವನ್ನು ಬೆಂಗಳೂರು ವಾಯುಮಾಲಿನ್ಯ ನಿಯಂತ್ರಿಸುತ್ತಿರುವುದು ಕಂಡು ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


