ಪುರಾಣ ಕಾವ್ಯಗಳ ರೋಗಗ್ರಸ್ತ ಗೆಡ್ಡೆ ಕಿತ್ತೆಸೆಯೋಣ: ದೇವನೂರು
ಪುರಾಣ ಕಾವ್ಯಗಳ ಗಣಿಯಿಂದ ಅದಿರನ್ನು ತೆಗೆದು, ಅದರಿಂದ ಚಿನ್ನವನ್ನು ಬೇರ್ಪಡಿಸಿ ಒಡವೆಗಳನ್ನು ಮಾಡಿಕೊಳ್ಳದಿದ್ದರೆ ನಾವು ಇಲ್ಲದವರು(ಹ್ಯಾವ್ ನಾಟ್ಸ್) ಆಗಿಬಿಡುವ ಅಪಾಯವಿದೆ.

ಮಂಗಳೂರು: ಪುರಾಣ ಕಾವ್ಯಗಳ ಗಣಿಯಿಂದ ಅದಿರನ್ನು ತೆಗೆದು, ಅದರಿಂದ ಚಿನ್ನವನ್ನು ಬೇರ್ಪಡಿಸಿ ಒಡವೆಗಳನ್ನು ಮಾಡಿಕೊಳ್ಳದಿದ್ದರೆ ನಾವು ಇಲ್ಲದವರು(ಹ್ಯಾವ್ ನಾಟ್ಸ್) ಆಗಿಬಿಡುವ ಅಪಾಯವಿದೆ.
ಭಗವದ್ಗೀತೆಯಲ್ಲಿರುವ ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಶನ್ ಮಾಡಿ ಎಸೆದು ಗೀತೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಸಲಹೆ ನೀಡಿದ್ದಾರೆ. ಮಂಗಳೂರಿನ ಅಭಿಮತ ಸಂಸ್ಥೆಯಿಂದ ನಗರದ ಶಾಂತಿಕಿರಣ ಸಭಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ `ಜನ ನುಡಿ' ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು. ಭಾರತಕ್ಕೆ ಹುಟ್ಟಿನಿಂದ ನಿರ್ಧರಿತವಾಗುವ ಜಾತಿ ಚಾತುರ್ವರ್ಣವೇ ಮುಖ್ಯ ಎನ್ನುವ ಗೀತೆಯ ಸಂದೇಶವನ್ನು ಒಪ್ಪದ ಬೌದ್ಧಿಸಂ ಪರದೇಶಿ ಆಗಬೇಕಾಯಿತು.
ಜೈನ, ಲಿಂಗಾಯತ ಜಾತಿಯಾಗಿ ಹಿಡ ಮಾಡಿಕೊಂಡು ಇಲ್ಲೇ ಉಳಿದವು. ಇಷ್ಟೆಲ್ಲ ಆಗಬೇಕಾದರೆ ಗೀತೆಯಲ್ಲಿ ನಡೆದಿರಬಹುದಾದ ವಂಚನೆಯಾದರೂ ಏನು? ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಸೇರಿ ಪುರಾಣ ಕಾವ್ಯಗಳ ಮರುಹುಟ್ಟು ಮಾಡಿ ಕಥನ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ನಾವು ಎಷ್ಟೇ ಚೆನ್ನಾಗಿ ಮಾತನಾಡಿದರೂ ಅದಕ್ಕೆ ವಿರುದ್ಧ ವಿದ್ಯಮಾನಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ.
ಸಮುದಾಯದ ಮನಸ್ಸಿನೊಂದಿಗೆ ನಾವು ಕೊಂಡಿಯಾಗಿ ಮಥಿಸಿ ಮರುಹುಟ್ಟು ಪಡೆಯದಿದ್ದರೆ ನಾವು ಸಮುದಾಯದಿಂದಲೇ ಡ್ರಾಪ್ ಔಟ್ ಆಗಿಬಿಡುವ ಸಾಧ್ಯತೆ ಇದೆ ಎಂದು ದೇವನೂರು ಎಚ್ಚರಿಸಿದರು.
ಈ ಸಮಸ್ಯೆಗೆ ಪುರಾಣ ಕಾವ್ಯ ಹಿಡಿದುಕೊಂಡು ಗಾಂಧೀಜಿ ಬಳಿ ಹೋದರೆ ಅವರು ಪ್ರಾರ್ಥನೆ ಮಾಡಿಬಿಡುತ್ತಾರೆ. ಅಂಬೇಡ್ಕರ್ ಅವರು ವಾಸ್ತವ ಎಂಬಂತೆ ವಿವರಣೆ ಕೊಡುತ್ತಾರೆ. ಇನ್ನು ಪೆರಿಯಾರ್ ಅದನ್ನು ಮುರಿದು ಎಸೆಯುತ್ತಾರೆ. ಕಾರ್ಲಸ್ ಮಾರ್ಕ್ಸ್ ಬಳಿ ಹೋದರೆ ಆತ `ಧರ್ಮದ ಜೊತೆ ಬೆರೆತ ಕಾವ್ಯ ಅಫೀಮು' ಎಂದು ಆ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಆದರೆ ಲೋಹಿಯಾರಿಗೆ ಮಾತ್ರ ಪುರಾಣ ಕಾವ್ಯವನ್ನು ಕಾಣುವ ಕಣ್ಣಿದೆ. ಕುವೆಂಪು
ನಮ್ಮ ಸಾಂಸ್ಕೃತಿಕ ವಿವೇಕ ಎನಿಸುತ್ತದೆ. `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂದು ಕುವೆಂಪು ಕರೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


