ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ
ಕುಕ್ಕೆ ಸುಬ್ರಹ್ಮಣ್ಯದಲ್ಲಿ 120ಕ್ಕೂ ಅಧಿಕ ಭಕ್ತರು ಎಡೆಸ್ನಾನ ಸೇವೆಗೈದರು. ಗೋವು ಉಂಡ ಎಂಜಲು ಎಲೆಯ ಮೇಲೆ ಭಕ್ತರು ದೇವಾ ಲಯದ ಹೊರಾಂಗಣದಲ್ಲಿ ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು..

ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 120ಕ್ಕೂ ಅಧಿಕ ಭಕ್ತರು ಎಡೆಸ್ನಾನ ಸೇವೆಗೈದರು. ಗೋವು ಉಂಡ ಎಂಜಲು ಎಲೆಯ ಮೇಲೆ ಭಕ್ತರು ದೇವಾ ಲಯದ ಹೊರಾಂಗಣದಲ್ಲಿ ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೇದಮೂರ್ತಿ ಎಸ್. ರಾಜಗೋಪಾಲ ಹಾಗೂ ಪಂಡಿತ ವೇದಮೂರ್ತಿ ವಿಜಯ ಕುಮಾರ್ ಸ್ಥಳದಲ್ಲಿದ್ದು, ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು. ದೇವಳದ ಹೊರಾಂಗಣದ ಸುತ್ತಲು ಬಾಳೆಯ ಎಲೆಗಳನ್ನು ಹಾಕಿ ಅದರ ಮೇಲೆ ಊಟಕ್ಕೆ ಬಡಿಸಿದರು. ಬಳಿಕ ಗೋವುಗಳ ಮೂಲಕ ಎಲೆಯ ಮೇಲಿನ ಪ್ರಸಾದವನ್ನು ತಿನ್ನಿಸಲಾಯಿತು. ಗೋವುಗಳು ತಿಂದ ಪ್ರಸಾದದ ಮೇಲೆ ಉರುಳು ಸೇವೆ ನಡೆಯಿತು.
ಮೊದಲ ಬಾರಿ
ಚಂಪಾಷಷ್ಠಿಯಂದು ಮೊದಲ ಬಾರಿಗೆ ಈ ಬಾರಿ ಎಡೆಸ್ನಾನ ಕ್ಷೇತ್ರದಲ್ಲಿ ನಡೆದಿದೆ. ಕಳೆದ ವರ್ಷ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಮಡೆಮಡಸ್ನಾನ ಸೇವೆ ನಡೆದು ಬಳಿಕ ಕಿರುಷಷ್ಠಿ ವೇಳೆಗೆ ಎಡೆಸ್ನಾನ ಸೇವೆ ನಡೆದಿತ್ತು. ಇನ್ನೂ ಎರಡು ದಿನ ಎಡೆ ಸ್ನಾನ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


