ಬಿಡಿಎ ಮೇಲೆ ನಿಗಾಕ್ಕೆ ಪರಿಶೀಲನಾ ಸಮಿತಿ
ನಿವೇಶನ ಹಂಚಿಕೆಗಾಗಿ ಜನರಿಂದ ಬಿಡಿಎ ಹಣ ಸಂಗ್ರಹಿಸುತ್ತಿರುವುದರ ಮೇಲೆ ನಿಗಾ ವಹಿಸಲು ಸರ್ಕಾರ ಪರಿಶೀಲನಾ ಸಮಿತಿ ನೇಮಿಸಬೇಕು ಎಂದು ಬಿಜೆಪಿ ಶಾಸಕ ಹಾಗೂ ವಕ್ತಾರ ಸುರೇಶ್‍ಕುಮಾರ್ ಆಗ್ರಹಿಸಿದ್ದಾರೆ...

ಬೆಂಗಳೂರು: ನಿವೇಶನ ಹಂಚಿಕೆಗಾಗಿ ಜನರಿಂದ ಬಿಡಿಎ ಹಣ ಸಂಗ್ರಹಿಸುತ್ತಿರುವುದರ ಮೇಲೆ ನಿಗಾ ವಹಿಸಲು ಸರ್ಕಾರ ಪರಿಶೀಲನಾ ಸಮಿತಿ ನೇಮಿಸಬೇಕು ಎಂದು ಬಿಜೆಪಿ ಶಾಸಕ ಹಾಗೂ ವಕ್ತಾರ ಸುರೇಶ್‍ಕುಮಾರ್ ಆಗ್ರಹಿಸಿದ್ದಾರೆ.
ಅಂದಾಜು 5000 ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಬಿಡಿಎ ಜನರಿಂದ ಕೋಟ್ಯಂತರ ವಸೂಲಿ ಮಾಡುತ್ತಿದ್ದು, ಇದಕ್ಕೆ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಎರಡೂ ಇಲ್ಲ. ಬಿಡಿಎ ಅಧಿಕಾರಿಗಳು ಅರ್ಜಿದಾರರಿಂದ ರು.100 ಅರ್ಜಿ ಶುಲ್ಕ, ಗರಿಷ್ಠ ರು.5000 ನೋಂದಣಿ ಶುಲ್ಕ ಮತ್ತು ರು.2.30ಲಕ್ಷದವರೆಗೂ ಆರಂಭಿಕ ಠೇವಣಿಯನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಈ ಹಣಕ್ಕೆ ಯಾವುದೇ ಖಾತರಿ ಇಲ್ಲ ಎಂದು ಅವರು ದೂರಿದ್ದಾರೆ.
ಈಗಾಗಲೇ ಲಕ್ಷಾಂತರ ಮಂದಿಯಿಂದ ಅರ್ಜಿ ಮತ್ತು ಹಣವನ್ನು ಸಂಗ್ರಹಿಸಿರುವ ಬಿಡಿಎ ಕೋಟ್ಯಂತರ ಹಣ ಸ್ವೀಕರಿಸಿದೆ. ಆದರೆ ಈ ಹಣಕ್ಕೆ ನಿವೇಶನ ನೀಡುವ ಖಾತರಿ ಇಲ್ಲ. ಹಣವನ್ನು ವಾಪಸ್ ನೀಡುವ ಖಚಿತತೆ ಇಲ್ಲ. ಅದಕ್ಕೆ ಬಡ್ಡಿಯನ್ನಾದರೂ ನೀಡುವ ಭರವಸೆ ಕೂಡ ಕೊಟ್ಟಿಲ್ಲ. ಅಷ್ಟೇ ಏಕೆ ಈ ಹಣವನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿ ಇಲ್ಲ. ಅಂದರೆ ಸರ್ಕಾರ ಜನರಿಂದ ಅನಗತ್ಯವಾಗಿ ಕೋಟ್ಯಂತರ ವಸೂಲಿ ಮಾಡಿ ರಿಯಲ್ ಎಸ್ಟೇಟ್ ಮಾಡುತ್ತಿದೆ. ಆದ್ದರಿಂದ ಬಿಡಿಎ ಕಾರ್ಯವೈಖರಿಯನ್ನು ಮೂರನೇ ವ್ಯಕ್ತಿ ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕಾಗಿ ಒಂದು ಸಮಿತಿ ರಚಿಸಬೇಕು ಎಂದು ಸುರೇಶ್ ಕುಮಾರ್ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


