ಜುಲುಮೆಗೆ ಒಲಿದ ಪುತಿನ ಪುರಸ್ಕಾರ
`ಜಾನಪದ ಹಾಗೂ ತತ್ವಪದ ಹೊಳಪನ್ನು ಯುವ ಕವಿ ರಮೇಶ್ ಅರೋಲಿ ಅವರ ಕವನ ಸಂಕಲನದಲ್ಲಿ ಕಾಣಬಹುದು. ಕಂಬಾರರ ನಂತರ ಬೇಂದ್ರೆ ಪರಂಪರೆಯ ಕವಿಗಳಾಗಿ ಬೆಳೆಯುವ ಆಶಾವಾದವನ್ನು ಇವರು ಮೂಡಿಸಿದ್ದಾರೆ' ಎಂದು ಸಾಹಿತಿ ಹಾಗೂ ಪುತಿನ...

ಬೆಂಗಳೂರು: `ಜಾನಪದ ಹಾಗೂ ತತ್ವಪದ ಹೊಳಪನ್ನು ಯುವ ಕವಿ ರಮೇಶ್ ಅರೋಲಿ ಅವರ ಕವನ ಸಂಕಲನದಲ್ಲಿ ಕಾಣಬಹುದು. ಕಂಬಾರರ ನಂತರ ಬೇಂದ್ರೆ ಪರಂಪರೆಯ ಕವಿಗಳಾಗಿ ಬೆಳೆಯುವ ಆಶಾವಾದವನ್ನು ಇವರು ಮೂಡಿಸಿದ್ದಾರೆ' ಎಂದು ಸಾಹಿತಿ ಹಾಗೂ ಪುತಿನ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್ ವಾಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯುವ ಕವಿ ರಮೇಶ್ ಅರೋಲಿ ರಚಿಸಿದ ಜುಲುಮೆ ಕವನ ಸಂಕಲನಕ್ಕೆ 2014ನೇ ಸಾಲಿನ ಪುತಿನ ಕಾವ್ಯ ನಾಟಕ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ಪುತಿನ ಅವರ ಕಾವ್ಯಗಳಲ್ಲಿ ಕಾಣುತ್ತಿದ್ದ ಸ್ವಧರ್ಮ ಗೇಯತೆಯೂ ಜುಲುಮೆ ಕವನ ಸಂಕಲನದ ಕೆಲವು ಪದ್ಯಗಳಲ್ಲಿ ಕಾಣಬಹುದಾಗಿದೆ. ಆದರೂ ಇದು ಪುತಿನ ಅವರ ಕಾವ್ಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಕಾವ್ಯ ರಚಿಸಲು ಆಸಕ್ತಿ ತೋರುತ್ತಿಲ್ಲ. ಇಂತಹ ಪ್ರಕ್ಷುಬದ್ಧ ದಿನಮಾನಗಳಲ್ಲಿ ರಮೇಶ್ ಅವರಂತಹ ಯುವ ಕವಿಗಳು ಕಾವ್ಯ ರಚಿಸುತ್ತಿರುವುದು
ಶ್ಲಾಘನಿಯವಾಗಿದೆ. ಇಂತಹ ಯುವ ಕವಿಗೆ ಪುತಿನ ಪ್ರಶಸ್ತಿ ನೀಡುತ್ತಿರುವುದು ಪ್ರತಿಷ್ಠಾನಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು. ಕವಿ ಪೊ್ರ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಸಮಾಜದಲ್ಲಿ ಪುತಿನ ಪ್ರಶಸ್ತಿಗೆ ಅದರದ್ದೇ ಮಹತ್ವವಿದೆ. ಪುತಿನ ಅವರು ಜಾತ್ಯತೀತತೆ ನಿಲುವನ್ನು ಹೊಂದಿ ಮತಾಂಧತೆ ಮೀರಿದ ಕವಿಯಾಗಿದ್ದರು. ಸಣ್ಣ ಸಂಗತಿಗಳಲ್ಲೂ
ಪ್ರಕೃತಿಯ ಲೋಕ ದರ್ಶನ ಮಾಡಿಸುವ ಮೂಲಕ ಪ್ರಕೃತಿ ಆರಾಧಕರಾಗಿದ್ದರು. ಪುತಿನ ಶೈಲಿಯಂತೆ ಯುವ ಕವಿ ರಮೇಶ್ ತತ್ವಪದ ಹಾಗೂ ತಮ್ಮ ಜಾನಪದ ಸೊಬಗನ್ನು ಪದ್ಯಗಳ ಮೂಲಕ ಹೊರಹೊಮ್ಮಿದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ಕವಿ ರಮೇಶ್ ಅರೋಲಿ ಮಾತನಾಡಿ, ಆಧುನಿಕ ಜೀವನ ಶೈಲಿಯು ನಮ್ಮ ಸಂಸ್ಕೃತಿ ತಳಪಾಯಕ್ಕೆ ಕೊಡಲಿ ಪೆಟ್ಟುನೀಡುತ್ತಿದೆ. ಸಂಸ್ಕೃತಿ ಜೀವಾಳ ಆಗಿರುವ ಜಾನಪದ ಸಾಹಿತ್ಯ ಪ್ರಕಾರದಲ್ಲಿ ಕಾವ್ಯದ ಮೂಲಕ ರೂಪಪಡೆದ ಕೃತಿಯೇ ಜುಲುಮೆಯಾಗಿದೆ. ನಾನು ಉತ್ತರ ಕರ್ನಾಟಕದವನಾದ್ದರಿಂದ ನನ್ನ ಮೇಲೆ ಜಾನಪದ ಹಾಗೂ ತತ್ವಪದ ಸಾಹಿತ್ಯ ಅಪಾರವಾದ ಪ್ರಭಾವ ಬೀರಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಪು.ತಿ.ನ ಟ್ರಸ್ಟ್ ಕಾರ್ಯದರ್ಶಿ ಖಾದ್ರಿ ಎಸ್.ಅಚ್ಯುತನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


