ಒಂದೆಂಬುದೇ ಹಿಂದೂ ಧ್ಯೇಯ
ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳವು ಭಾನುವಾರ ಕೊನೆಗೊಂಡಿತು. ಒಟ್ಟು ಐದು ದಿನಗಳ...

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳವು ಭಾನುವಾರ ಕೊನೆಗೊಂಡಿತು. ಒಟ್ಟು ಐದು ದಿನಗಳ ಕಾಲ ನಡೆದ ಈ ಸಮಾವೇಶದಲ್ಲಿ ಸಂಸ್ಕಾರ ಪ್ರಸರಣ, ಸನಾತನ ಹಿಂದೂ ಧರ್ಮದ ಸಂರಕ್ಷಣೆ ಹಾಗೂ ಹಿಂದೂ ಸಂಘಟನೆಗಳು ಕೈಗೊಂಡಿರುವ ಸೇವಾ ಕೈಂಕರ್ಯಗಳ ಬಗೆಗೆ ಮಾಹಿತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸ್ಕೃತ ಭಾರತೀ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್, ``ಹಿಂದೂ ಧರ್ಮ ಎಂದರೆ ಎಲ್ಲರೂ ಒಂದೇ ಎಂದರ್ಥ. ಇಲ್ಲಿ ಅಸ್ಪೃಶ್ಯರು, ಪೌರ ಕಾರ್ಮಿಕರು ಎಂಬುದಿಲ್ಲ. ಅವರೆಲ್ಲರನ್ನು ಒಟ್ಟಿಗೆ ನೋಡುವುದು, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ ಕಲಿಸುವುದು, ಸಂಸ್ಕೃತ ಅಧ್ಯಯನ ಮಾಡುವುದು, ಆಯುರ್ವೇದ ಕಲಿಸುವುದು, ಯೋಗಾಭ್ಯಾಸ ಮಾಡುವುದು, ಧ್ಯಾನಸ್ಥರಾಗುವುದು ಹಿಂದೂ ಧರ್ಮದ ಕೊಡುಗೆಗಳು. ಇವುಗಳನ್ನು ಅನುಷ್ಠಾನಕ್ಕೆ ತರಬೇಕಾದದ್ದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ,'' ಎಂದರು.
ಅಸಹಿಷ್ಣುತೆ ಇಲ್ಲ: ಹಿಂದೂ ಧರ್ಮದಲ್ಲಿ ಅಸಹಿಷ್ಣುತೆ ಇಲ್ಲ. ಯಾರು ಅಸಹಿಷ್ಣುತೆ ಎನ್ನುತ್ತಿದ್ದಾರೋ ಅಂಥವರ ಮೇಲೆ ಅಸಹಿಷ್ಣುತೆ ತೋರಬೇಕು. ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಬಾರದು. ಅವರನ್ನು ಅಲ್ಲಿ ಓದಿಸಿದರೆ, ಬೆಳೆದು ದೊಡ್ಡವರಾದ ನಂತರ ನಿಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಬದುಕಿದಷ್ಟು ದಿನ ಯಾವುದೇ ಫಲಾಪೇಕ್ಷೆ ಇಲ್ಲದೆ ಬಡವರಿಗೆ ಸಹಾಯ ಮಾಡಬೇಕು. ದೇವಸ್ಥಾನದಲ್ಲಿ ಸ್ತೋತ್ರ ಹೇಳಿಕೊಡಬೇಕು. ಮಠಗಳು ಮಾಡುತ್ತಿರುವ ತ್ರಿವಿಧ ದಾಸೋಹಗಳನ್ನು ನಾವು ಮಾಡುವಂತಾಗಬೇಕು ಎಂದು ಅವರು ಕರೆ ನೀಡಿದರು.
ವಿವಿಧ ದೇಶಗಳು ಹಲವು ಪ್ರಯತ್ನ ಮಾಡಿ ಮಂಗಳಯಾನ ಕೈಗೊಂಡವು. ಅದೇ ಭಾರತ ಒಂದೇ ಪ್ರಯತ್ನದಲ್ಲಿ ಸಫಲವಾಯಿತು. ಇದು ಸಾಧ್ಯವಾಗಿದ್ದು ಸನಾತನದ ಧರ್ಮ ಹಾಕಿಕೊಟ್ಟ ವಿರ ಪರಂಪರೆಯಿಂದ.
ಮೈಲಸ್ವಾಮಿ ಅಣ್ಣಾದೊರೈ ಇಸ್ರೋ ವಿಜ್ಞಾನಿ
ಸ್ವಧರ್ಮ ನಿಷ್ಠರಾಗಿ, ಪರಧರ್ಮ ಸಹಿಷ್ಣುಗಳಾಗಿ ನಾವು ಬದುಕಬೇಕು. ಆದರ್ಶ ಗೃಹಸ್ಥ ಕುಟುಂಬಗಳು ಧರ್ಮ ಉಳಿಸಲು ಮುಂದಾಬೇಕು.
● ಸಿದ್ಧಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


