ಬೆಂಗಳೂರು ನಗರ ಜಿಲ್ಲೆ 13 ನಾಮಪತ್ರ ಸಲ್ಲಿಕೆ
ಬಂಡಾಯದ ಬಿಸಿಯ ನಡುವೆ ಕಾಂಗ್ರೆಸ್ಸಿನ ಅಭ್ಯರ್ಥಿ, ಉಳಿದಂತೆ ಅಧೀಕೃತವಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು...

ಬೆಂಗಳೂರು: ಬಂಡಾಯದ ಬಿಸಿಯ ನಡುವೆ ಕಾಂಗ್ರೆಸ್ಸಿನ ಅಭ್ಯರ್ಥಿ, ಉಳಿದಂತೆ ಅಧೀಕೃತವಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ಮೂಲಕ ಇದುವರೆಗೆ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‍ನ ಎಂ.ನಾರಾಯಣಸ್ವಾಮಿ, ಬಿಜೆಪಿಯ ದೊಡ್ಡ ಬಸವರಾಜು ಹಾಗೂ ಪಕ್ಷೇತರ ಅಭ್ಯರ್ಥಿ ಎಚ್.ಎಸ್. ದಯಾನಂದ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನ ಹಾಲಿ ಮೇಲ್ಮನೆ ಸದಸ್ಯ ದಯಾನಂದ ರೆಡ್ಡಿ ಅವರಿಗೆ ಬಿಫಾರಂ ಸಿಗದಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನ ಅಧೀಕೃತ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು `ತಾವು ಪಕ್ಷದ ನಿಷ್ಠಾವಂತನಾಗಿರುವುದರಿಂದ ಈ ಸಾರಿ ಟಿಕೆಟ್ ಸಿಕ್ಕಿದೆ' ಎಂದು ಹರ್ಷ ವ್ಯಕ್ತಪಡಿಸಿದರೆ, ಬಂಡಾಯ ಅಭ್ಯರ್ಥಿ ಬಿ.ಟಿ.ದಯಾನಂದ ರೆಡ್ಡಿ ಅವರು `ನಾನು ಪಕ್ಷದ ವಿರುದ್ಧವಲ್ಲ, ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಸ್ಪರ್ಧಿಸಿರುವುದಾಗಿ' ಸವಾಲು ಹಾಕಿದರು.
ಇಷ್ಟು ದಿನಗಳ ಕಾಲ ವಿವಿಧ ಪಕ್ಷಗಳಿಂದ ಟಿಕೆಟ್ ಪಡೆಯಲು ಹರಸಾಹಸ ಮಾಡಿದ ಅಭ್ಯರ್ಥಿಗಳ ಕೊನೆಯ ಆಟ ಮುಗಿದಿದೆ. ಇನ್ನೇನಿದ್ದರೂ ಸ್ಪರ್ಧೀಗಿಳಿದವರ ಆಟ ಶುರುವಾಗಲಿದೆ. ಈ ನಡುವೆ ನಾಮಪತ್ರ ಹಿಂಪಡೆ ಯಲು ಇನ್ನೆರಡು ದಿನಗಳ ಅವಕಾಶವಿದ್ದು ಅಂತಿಮ ಕಣದಲ್ಲಿ ಉಳಿಯುವವರಾರು ಎಂಬುದು ಗೊತ್ತಾಗಬೇಕಿದೆ. ಅಲ್ಲಿ ಯವರೆಗೂ ಬಂಡಾಯಗಾರರನ್ನು ತಣಿಸು ವುದು ಆಯಾ ಪಕ್ಷಗಳಿಗೆ ತಲೆ ನೋವಾಗುವ ಮುನ್ಸೂಚನೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


