ಯೋಧರ ತ್ಯಾಗ ಬಲಿದಾನ ಸದಾಕಾಲ ಗೌರವಿಸಿ
ಭಾರತೀಯ ಯೋಧರ ತ್ಯಾಗ ಬಲಿದಾನಗಳನ್ನು ಮರೆತಷ್ಟು ದೇಶಾಭಿಮಾನ ಕಡಿಮೆಯಾಗುತ್ತದೆ. ಸದಾಕಾಲ ಅವರ ತ್ಯಾಗಗಳನ್ನು ಗೌರವಿಸಬೇಕು. ಇದು ರಾಷ್ಟ್ರಕ್ಕೆ ಸಲ್ಲಿಸುವ ಗೌರವ ಎಂದು ಲೆಫ್ಟಿನಂಟ್ ಜನರಲ್ ಆರ್.ಪಿ. ರಾಯ್ ಹೇಳಿದರು...

ಬೆಂಗಳೂರು: ಭಾರತೀಯ ಯೋಧರ ತ್ಯಾಗ ಬಲಿದಾನಗಳನ್ನು ಮರೆತಷ್ಟು ದೇಶಾಭಿಮಾನ ಕಡಿಮೆಯಾಗುತ್ತದೆ. ಸದಾಕಾಲ ಅವರ ತ್ಯಾಗಗಳನ್ನು ಗೌರವಿಸಬೇಕು. ಇದು ರಾಷ್ಟ್ರಕ್ಕೆ ಸಲ್ಲಿಸುವ ಗೌರವ ಎಂದು ಲೆಫ್ಟಿನಂಟ್ ಜನರಲ್ ಆರ್.ಪಿ. ರಾಯ್ ಹೇಳಿದರು.
ನಗರದ ಎಎಸ್‍ಸಿ(ಆರ್ಮಿ ಸರ್ವಿಸ್ ಕಾರ್ಪ್) ಮೈದಾನದಲ್ಲಿ ಹಮ್ಮಿಕೊಂಡಿದ್ದ 10ನೇ ಆರ್ಮಿ ಸರ್ವಿಸ್ ಕಾರ್ಪ್ ವಾರ್ಷಿಕೋತ್ಸವದಲ್ಲಿ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ ಮತ್ತು ವಾರ್ಷಿಕ ಪರೇಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುದ್ಧ ಮತ್ತು ಉಗ್ರರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಸೈನಿಕರ ಸಾಹಸ, ಬಲಿದಾನಕ್ಕೆ ಸಮಾನವಾದದ್ದು ದೇಶದಲ್ಲಿ ಯಾವುದೂ ಇಲ್ಲ. ನಮ್ಮ ಹಲವಾರು ಸೈನಿಕರು ವೀರಮರಣವನ್ನಪ್ಪಿದ್ದಾರೆ. ಅವರ ಕುಟುಂಬ ಧೈರ್ಯಗುಂದದೆ ಹೆಮ್ಮೆ ಪಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರ ಕುಟುಂಬದವರಿಗೆ ವೀರನಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುನೇನಾ ದೇವಿ, ಸಂಪಾ ಗೇನ್, ಬೀರ್ ಮತಿ ದೇವಿ, ಪ್ರೇಮಲತಾ, ಸ್ನಿಗ್ದಾ ದೇವಿ, ಸಿ.ಎಚ್ ಸತ್ಯಕಲಾ, ಗೋರಾ ಬಾಯಿವೀರನಾರಿ ಪ್ರಶಸ್ತಿ ಪಡೆದವರು. ನಂತರ ಸೇನೆಯ ಮೇಜರ್ ಎಚ್.ಎಸ್.ಚಟ್ ವಾಲ್, ಮೇಜರ್ ವಿಕ್ರಮ್ ಸಿಂಗ್, ಮೇಜರ್ ಜಸ್‍ಪ್ರೀತ್ ಸಿಂಗ್, ಮೇಜರ್ ವಿವೇಕ ಶಾಹಿ, ಕ್ಯಾ.ಬನ್ನಿ ಶರ್ಮಾ ಮತ್ತು ಕ್ಯಾ.ಕೃತಿಕಾ ಪಾಟೀಲ್ ಅವರಿಂದ ಲೆಫ್ಟಿನಂಟ್ ಜನರಲ್ ಆರ್.ಪಿ.ರಾಯ್ ಗೌರವ ವಂದನೆ ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


