ಜಿಲ್ಲಾ ಸುದ್ದಿ

ಆನೆಗೊಂದಿ ಆರಾಧನೆ ಮತ್ತೆ ವಿವಾದದಲ್ಲಿ

ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಡಿ. 9ರಿಂದ 11ರ ವರೆಗೆ ನಡೆಯುವ ಶ್ರೀ ಪದ್ಮನಾಭತೀರ್ಥರ ಆರಾಧನೆ ವಿಚಾರವಾಗಿ ಉತ್ತರಾದಿ ಮಠ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ...

ಆನೆಗೊಂದಿ ಆರಾಧನೆ ಮತ್ತೆ ವಿವಾದದಲ್ಲಿ
ಸಾಂದರ್ಭಿಕ ಚಿತ್ರ
Published On :

ಗಂಗಾವತಿ: ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಡಿ. 9ರಿಂದ 11ರ ವರೆಗೆ ನಡೆಯುವ ಶ್ರೀ ಪದ್ಮನಾಭತೀರ್ಥರ ಆರಾಧನೆ ವಿಚಾರವಾಗಿ ಉತ್ತರಾದಿ ಮಠ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ ನಡುವೆ ವಿವಾದ ಉದ್ಭವಿಸಿದೆ.

ಆರಾಧನೆಯ 3 ದಿನಗಳನ್ನು ಎರಡೂ ಮಠಗಳು ಒಂದುವರೆ ದಿನದಂತೆ 18 ವರ್ಷಗಳಿಂದ ಆಚರಿಸಿಕೊಂಡು ಬರುತ್ತವೆ. ಆದರೆ ನವ ವೃಂದಾವನ ಗಡ್ಡೆ ಉತ್ತರಾದಿ ಮಠದ ಸ್ವಾಧೀನದಲ್ಲಿದ್ದು, ಅಲ್ಲಿರುವ 27 ಎಕರೆ 30 ಗುಂಟೆ ಪ್ರದೇಶ ನಮ್ಮದು. ಪೂಜೆ, ಆರಾಧನೆಗೆ ರಾಯರ ಮಠದವರಿಗೆ ಪ್ರವೇಶ ನಿಷೇಧಿಸಬೇಕು. ಎಂದು ಉತ್ತರಾಧಿ ಮಠ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಉತ್ತರಾದಿ ಮಠ ಭೂಮಿ ಅನುಭೋಗಿಸಹಬಹುದು. ರಾಯರ ಮಠ ಆರಾಧನೆ, ಪೂಜೆ ನೆರವೇರಿಸಬಹುದು ಎಂದು ನ್ಯಾಯಾಲಯ ಏ.22ರಂದು ತೀರ್ಪು ನೀಡಿತ್ತು. ನ್ಯಾಯಾಲಯ ತಮ್ಮ ಪರವಾಗಿ ತೀರ್ಪು ನೀಡಿದ್ದು, ಡಿ.9ರಿಂದ 11 ರವರೆಗೆ ನಡೆಯುವ ಆರಾಧನೆಯಲ್ಲಿ ರಾಯರ ಮಠದವರಿಗೆ ಪ್ರವೇಶ ನೀಡಬಾರದು ಎಂದು ಉತ್ತರಾಧಿ ಮಠ ಪಟ್ಟಿ ಹಿಡಿದು ಕುಳಿತಿರುವುದು ವಿವಾದದ ರೂಪ ಪಡೆದಿದೆ.

ಎರಡು ಮಠದವರಿಗೆ ಪೂಜೆ ಅವಕಾಶ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಡಿವೈಎಸ್ಪಿ ಸಂದಿಗ ವಾಡ ಅವರು ಉಭಯ ಮಠಗಳ ಮುಖಂಡರ ಸಭೆ ನಡೆಸಿದರು. 3 ದಿನಗಳಲ್ಲಿ ಒಂದೂವರೆ ದಿನದಂತೆ ಎರಡು ಮಠದವರು ಆರಾಧನೆ ಮಾಡುವಂತೆ ಸೂಚಿಸಿದರು. ಇದಕ್ಕೆ ಒಪ್ಪದ ಉತ್ತರಾದಿ ಮಠದವರು ತಮ್ಮ ನಿಲುವನ್ನು ಡಿ.8 ರಂದು ತಿಳಿಸುವುದಾಗಿ ಹೇಳಿ ಹೊರ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.