ಜಿಲ್ಲಾ ಸುದ್ದಿ

ಕಾನೂನು ತಪ್ಪಿ ನಡೆದಿಲ್ಲ: ವೀರೇಂದ್ರ ಹೆಗ್ಗಡೆ

``ಧರ್ಮಸ್ಥಳ ಕ್ಷೇತ್ರದಲ್ಲಿ ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ನಡೆದಿಲ್ಲ. ಹಾಗೆಯೇ ಹಿಂದಿನ ಪರಂಪರೆಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಪ್ರಜ್ವಲವಾಗುತ್ತಿದೆ,'' ಎಂದು ಧರ್ಮಾಧಿಕಾರಿ...

ಕಾನೂನು ತಪ್ಪಿ ನಡೆದಿಲ್ಲ: ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (ಸಂಗ್ರಹ ಚಿತ್ರ)
Published On :

ಬೆಳ್ತಂಗಡಿ: ``ಧರ್ಮಸ್ಥಳ ಕ್ಷೇತ್ರದಲ್ಲಿ ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ನಡೆದಿಲ್ಲ. ಹಾಗೆಯೇ ಹಿಂದಿನ ಪರಂಪರೆಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಪ್ರಜ್ವಲವಾಗುತ್ತಿದೆ,'' ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಭಾನುವಾರ ಉಜಿರೆಯಲ್ಲಿ ನಡೆದ ಲಕ್ಷದೀಪೋತ್ಸವದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ``ಜನರು ಕ್ಷೇತ್ರಕ್ಕೆ ಬೆಂಬಲ ನೀಡಿದ್ದಾರೆ. ಇದರಿಂದ ನನಗೆ ಮತ್ತು ನನ್ನ ಕುಟುಂಬ ವರ್ಗಕ್ಕೆ ಹೃದಯ ತುಂಬಿ ಬಂದಿದೆ. ಧರ್ಮಾಧಿಕಾರಿಯ ಪೀಠ ನನಗೆ ಭಾರವಾಗಿಲ್ಲ.

ಬದಲಾಗಿ ನನಗೆ ಹೊಣೆಗಾರಿಕೆಯನ್ನು ನೀಡಿದೆ. ಕ್ಷೇತ್ರದ ಎಲ್ಲಾ ಸೇವಾ ಚಟುವಟಿಕೆಗಳು ನನ್ನಿಂದ ಆಗಿದೆ ಎಂದು ನಾನು ಭಾವಿಸಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಕೀರ್ತಿ ಇನ್ನಷ್ಟು ಬೆಳಗಿದೆ'' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.