ಜಿಲ್ಲಾ ಸುದ್ದಿ

ವಿಶ್ವ ಅಂಗವಿಕಲರ ದಿನಾಚರಣೆ

ಇಷ್ಟು ದಿನ ಮಾತಾಡುತ್ತಿದ್ದ ರಾಜಕಾರಣಿಗಳು ಅನಿವಾರ್ಯ ಕಾರಣಗಳಿಂ ದ ಮೌನಕ್ಕೆ ಶರಣಾಗಿ ವಿಕಲಚೇತನರ ಮಾತುಗಳಿಗೆ ಕಿವಿಯಾದರು.ಅವರ ಅಸಾಧಾರಣ ಪ್ರತಿಭೆ ಅನಾವರಣಕ್ಕೆ ಕಣ್ಣಾದರು. ಸೌಲಭ್ಯ ವಂಚಿತರಾಗುತ್ತಿದ್ದೇವೆ ಎಂಬ ಮನವಿಗೆ ಅಕ್ಷರಶಃ ಮನಸ್ಸು...

ವಿಶ್ವ ಅಂಗವಿಕಲರ ದಿನಾಚರಣೆ
ಕಂಠೀರವ ಒಳಾಂಗಣದಲ್ಲಿ ಆಯೋಜಿಸಿದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಸಚಿವೆ ಉಮಾಶ್ರೀ
Published On :

ಬೆಂಗಳೂರು: ಇಷ್ಟು ದಿನ ಮಾತಾಡುತ್ತಿದ್ದ ರಾಜಕಾರಣಿಗಳು ಅನಿವಾರ್ಯ ಕಾರಣಗಳಿಂ ದ ಮೌನಕ್ಕೆ ಶರಣಾಗಿ ವಿಕಲಚೇತನರ ಮಾತುಗಳಿಗೆ ಕಿವಿಯಾದರು.ಅವರ ಅಸಾಧಾರಣ ಪ್ರತಿಭೆ ಅನಾವರಣಕ್ಕೆ ಕಣ್ಣಾದರು. ಸೌಲಭ್ಯ ವಂಚಿತರಾಗುತ್ತಿದ್ದೇವೆ ಎಂಬ ಮನವಿಗೆ ಅಕ್ಷರಶಃ ಮನಸ್ಸು ಮಿಡಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇನಾಲಯವು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತಿಯಿಂದಾಗಿ ರಾಜಕಾರಣಿಗಳ ಮಾತಿಗೆ ಬ್ರೇಕ್ ಹಾಕಿ, ವಿಕಲಚೇತನರ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯ ಸಾಧನೆಗೈದ 37 ಮಂದಿಗೆ ಸರ್ಕಾರ ಸನ್ಮಾನಿಸಿತು. ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಪ್ರತಿಯೊಬ್ಬರನ್ನು ಸನ್ಮಾನಿಸುವಾಗಲು ಮುಖದಲ್ಲಿ ಮಂದಹಾಸ ಛಾಯೆ ಹೊರಸೂಸುತ್ತಿತ್ತು. ಈ ನಡುವೆ ಕೆಪಿಟಿಸಿಎಲ್ ನಲ್ಲಿ ಕೆಲಸ ಕಳೆದುಕೊಂಡ ಒಂದು ಗುಂಪು ಸೇವೆಯನ್ನು ಕಾಯಂ ಮಾಡುವಂತೆ ಮನವಿ ಮಾಡಿದ ಘಟನೆಯೂ ನಡೆಯಿತು.

ದೇಹಿಕ ಅಂಗವಿಕಲಕಾಗಿರುವ ಕರಾಟೆಪಟು ಕೆ.ಎಸ್ ವಿಶ್ವಾಸ್ ಹಾಗೂ ವ್ಹೀಲ್ ಚೇರ್ ನಲ್ಲಿ ರಶ್ಮೀ ಸುಂದರೇಶ್ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಅಂಗವಿಕಲೆ ಸಾಕಮ್ಮ ಜಾನಪದ ದೀತೆ ಪ್ರಸ್ತುತಪಡಿಸಿದರು. ಸೆರೆಬ್ರಲ್ ಪಾಲ್ಸಿಯಾದ ಮೊಯ್ಸುದ್ದೀನ್ ಹಿಂದಿಶಾಯಿರಿ ಹೇಳಿ ಚಪ್ಪಾಳೆ ಗಿಟ್ಟಿಸಿದರು. ಇದೇ ವೇಳೆ ಐಐಎಂ ಇಂದೂರಿನಲ್ಲಿ ಎಂಬಿಎ ಪದವಿ ಪಡೆದ ಮೊದಲ ಸೆರೆಬ್ರಲ್ ಪಾಲ್ಸಿ ವ್ಯಕ್ತಿಯಾದ, ಫ್ಲಿಪ್ ಕಾರ್ಟ್ ನಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ. ಸುಮಂತ್ ಅವರೂ ಸೇರಿದಂತೆ ಒಟ್ಟು 37 ಮಂದಿಗೆ ರಾಜ್ಯ ಅಂಗವಿಕಲ ಪ್ರಶಸ್ತಿ ನೀಡಲಾಯಿತು. ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶಕುಂತಲಾಶೆಟ್ಟಿ ಮುಂತಾದವರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.