ಕಾಂಗ್ರೆಸ್ ಪಟ್ಟಿ ಇಂದು ಬಿಡುಗಡೆ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಹೈ ಕಮಾಂಡ್ ಅಖೈರುಗೊಳಿಸಿದ್ದು, ಶುಕ್ರವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ...

ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಹೈ ಕಮಾಂಡ್ ಅಖೈರುಗೊಳಿಸಿದ್ದು, ಶುಕ್ರವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಜಿ. ಪರಮೇಶ್ವರ ಅವರು ಮತ್ತೊಂದು ಸುತ್ತು ಮಾತುಕತೆ ನಡೆಸಿ, ಗೊಂದಲ ಇದ್ದ ನಾಲ್ಕು ಸ್ಥಾನಗಳ ಬಗ್ಗೆ ಚರ್ಚಿಸಿದರು. ನಂತರ ರಾಹುಲ್ಗಾಂಧಿ ಅವರ ನಿವಾಸಕ್ಕೆ ತೆರಳಿ, ಸುಮಾರು ಒಂದು ತಾಸು ಚರ್ಚಿಸಿ ಪಟ್ಟಿ ಅಂತಿಮಗೊಳಿಸಿದರು.
ತಂತ್ರಗಾರಿಕೆ: ಮೇಲ್ಮನೆಯಲ್ಲಿ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಕನಿಷ್ಠ 18 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈಗ ಚುನಾವಣೆಯಲ್ಲಿ 18 ಸ್ಥಾನ ಗೆದ್ದರೆ, ಫೆಬ್ರವರಿಯಲ್ಲಿ ಮೇಲ್ಮನೆಗೆ ಇಬ್ಬರನ್ನು ನಾಮ ನಿರ್ದೇಶನ ಮಾಡುವ ಅವಕಾಶ ಇದೆ. ಹೀಗಾಗಿ ಒಟ್ಟು 20 ಸದಸ್ಯ ಬಲದೊಂದಿಗೆ ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ದಕ್ಕಲಿದೆ. ಈಗ ಮೇಲ್ಮನೆಯಲ್ಲಿ ಬಹುಮತ ಇಲ್ಲದೇ ಆಡಳಿತ ಪಕ್ಷ ಕಾನೂನು ರೂಪಿಸುವ ವಿಷಯದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದಕ್ಕಾಗಿ 18 ಸ್ಥಾನ ಗೆಲ್ಲುವ ಗುರಿ ಮತ್ತು ಗೆಲ್ಲ ಬಹುದಾದ ಸಂಭವ ನೀಯ ಸ್ಥಾನಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ ವಿವರ ನೀಡಿದ್ದಾರೆಂದು ತಿಳಿದುಬಂದಿದೆ.
ಸಂಭವನೀಯ ಅಭ್ಯರ್ಥಿಗಳ ಪಟ್ಟಿ
- ಬೆಂಗಳೂರು- ದಯಾನಂದರೆಡ್ಡಿ
- ಬೆಂಗಳೂರು ಗ್ರಾಮಾಂತರ- ರವಿ
- ಮೈಸೂರು- ಧರ್ಮಸೇನಾ
- ಬೀದರ್- ವಿಜಯïಸಿಂಗ್
- ಕಲಬುರಗಿ- ಅಲ್ಲಮಪ್ರಭು ಪಾಟೀಲ್
- ಧಾರವಾಡ- ಶ್ರೀನಿವಾಸ ಮಾನೆ
- ಧಾರವಾಡ- ನಾಗರಾಜ ಛಬ್ಬಿ
- ಚಿತ್ರದುರ್ಗ- ರಘು ಆಚಾರ್
- ಮಂಡ್ಯ- ಶಿವರಾಮಗೌಡ
- ವಿಜಯಪುರ-ಎಸ್.ಆರ್.ಪಾಟೀಲ್
- ಕೊಡಗು- ಚಂದ್ರ ಮೌಳಿ
- ಬೆಳಗಾವಿ-ವೀರಕುಮಾರ್ ಪಾಟೀಲ್
- ಉತ್ತರ ಕನ್ನಡ- ಶ್ರೀಕಾಂತ್ ಘೋಟ್ನೇಕರ್
- ಶಿವಮೊಗ್ಗ- ಪ್ರಸನ್ನಕುಮಾರ್
- ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ
- ಹಾಸನ- ಗೋಪಾಲಸ್ವಾಮಿ
- ದಕ್ಷಿಣ ಕನ್ನಡ- ಪ್ರತಾಪ್ ಚಂದ್ರ ಶೆಟ್ಟಿ
- ತುಮಕೂರು- ಆರ್.ರಾಜೇಂದ್ರ
- ಕೋಲಾರ-ಅನಿಲ್ಕುಮಾರ್
- ರಾಯಚೂರು - ಇಟಗಿ ಬಸವರಾಜು
- ಬಳ್ಳಾರಿ -ಸೂರ್ಯನಾರಾಯಣರೆಡ್ಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


