ಧಾರವಾಡ ಬಂದ್ ಪೂರ್ಣ
ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವಂತೆ ಆಗ್ರಹಿಸಿ ವಿವಧ ಸಂಘಟನೆಗಳಿಂದ ಶನಿವಾರ ನಡೆದ ಧಾರವಾಡ ಬಂದ್ ಸಂಪೂರ್ಣವಾಗಿದೆ...

ಧಾರವಾಡ: ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವಂತೆ ಆಗ್ರಹಿಸಿ ವಿವಧ ಸಂಘಟನೆಗಳಿಂದ ಶನಿವಾರ ನಡೆದ ಧಾರವಾಡ ಬಂದ್ ಸಂಪೂರ್ಣವಾಗಿದೆ.
ಬಂದ್ ನಿಂದಾಗಿ ನಗರ ಹಾಗೂ ಹೊರ ವಲಯದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್, ಬ್ಯಾಂಕ್, ಎಟಿಎಂ, ಸಿನಿಮಾ ಮಂದಿರ, ಪೆಟ್ರೋಲ್ ಬಂಕ್, ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಸ್ವಯಂಪ್ರೇರಣೆಯಿಂದ ಸ್ಥಗಿತವಾಗಿದ್ದವು. ಅಲ್ಲದೆ ಜನರ ಓಡಾಟವೂ ವಿರಳವಾಗಿತ್ತು.
ಬಂದ್ ಮಾಹಿತಿ ಇಲ್ಲದೆ ಧಾರವಾಡಕ್ಕೆ ಆಗಮಿಸಿದವರು ಬಸ್ ಗಳೂ ಇಲ್ಲದೇ, ನಡೆದೇ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರು. ರಸ್ತೆಗಳಲ್ಲಿ ಎತ್ತಿನ ಬಂಡಿ, ಬೈಕ್ ಗಳನ್ನು ಅಡ್ಡವಾಗಿ ನಿಲ್ಲಿಸಿ ರೈತರು ಸಂಚಾರ ಸ್ಥಗಿತಗೊಳಿಸಿದರು. ಉತ್ತರ ಕರ್ನಾಟಕದ ಹಲವು ಮಠಾಧೀಶರ ನೈತೃತ್ವದಲ್ಲಿ ಹತ್ತಾರು ಸಂಘಟನೆಗಳು ಕಲಾಭವನದಲ್ಲಿ ಒಟ್ಟಗೂಡಿ ಹೋರಾಟಕ್ಕೆ ಚಾಲನೆ ನೀಡಿದವು. ರಾಷ್ಟ್ರ ಧ್ವಜಾರೋಹಣ ಮಾಡಿ ಹೋರಾಟಕ್ಕೆ ಜಯವಾಗಲಿ ಎಂದು ಮುಖಂಡರು ಘೋಷಣೆಯಿಟ್ಟರು. ಮಹದಾಯಿ ನೀರು ಹರಿಸುವಂತೆ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನೆ ನಡೆಯಿತು. ದಾರಿಯುದ್ದಕ್ಕೂ ಸರ್ಕಾರಗಳ ವಿರುದ್ಧ ಘೋಷಣೆ ಕೂಗಲಾಯಿತು. ಐದು ಪ್ರಮುಖ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


