ವಾರಾಂತ್ಯಕ್ಕೆ ಮತ್ತೆ ವೈದ್ಯ ಸೀಟು ಹಂಚಿಕೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಎರಡನೇ ಸುತ್ತಿನ ಮೆಡಿಕಲ್, ಡೆಂಟಲ್ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ ಕೊನೆ ವಾರದಲ್ಲಿ ನಡೆಯಲಿದೆ. ಅದೇ ರೀತಿ ಕಾಮೆಡ್-ಕೆ ನಡೆಸುವ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಎರಡು ದಿನ ಮುಂದೂಡಲ್ಪಟ್ಟಿದೆ...

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಎರಡನೇ ಸುತ್ತಿನ ಮೆಡಿಕಲ್, ಡೆಂಟಲ್ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ ಕೊನೆ ವಾರದಲ್ಲಿ ನಡೆಯಲಿದೆ. ಅದೇ ರೀತಿ ಕಾಮೆಡ್-ಕೆ ನಡೆಸುವ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಎರಡು ದಿನ ಮುಂದೂಡಲ್ಪಟ್ಟಿದೆ.
ಅಖಿಲ ಭಾರತೀಯ ಮಟ್ಟದಲ್ಲಿ ನಡೆಯುವ ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಆ.23ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಂತರ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆಯೇ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಕಾಮೆಡ್-ಕೆ ಎರಡನೇ ಸುತ್ತಿನ
ಕೌನ್ಸೆಲಿಂಗ್ ಅನ್ನು ಆ.25ರಿಂದ ಆರಂಭಿಸುವ ಬದಲು ಆ.27ರಿಂದ ಆರಂಬಿsಸುತ್ತಿದೆ. ಎಐಪಿಎಂಟಿಯಲ್ಲಿ ಸೀಟು ಸಿಗುವ ಸಾಧ್ಯತೆ ಇರುವುದರಿಂದ ಸೀಟು ವಾಪಾಸ್ ಮಾಡಲು
ಅವಕಾಶ ವಿಸ್ತರಿಸಬೇಕೆಂದು ಅನೇಕ ವಿದ್ಯಾರ್ಥಿಗಳು ಕಾಮೆಡ್-ಕೆಗೆ ಕೋರಿಕೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ದಿನಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ದಿನಾಂಕದಂತೆ ಆ.27ರಿಂದ 29ರವರೆಗೆ ನಡೆಯಲಿದ್ದು, ಸದ್ಯ 133 ಮೆಡಿಕಲ್ ಸೀಟು ಲಭ್ಯವಿದೆ. ಆ.23ರಂದು ಅಖಿಲ ಭಾರತೀಯ ಮಟ್ಟದ ಸೀಟು ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಇನ್ನಷ್ಟು ಸೀಟುಗಳು ಕೌನ್ಸೆಲಿಂಗ್‍ಗೆ ಲಭ್ಯವಾಗಲಿದೆ ಎಂದು ಕಾಮೆಡ್-ಕೆ ತಿಳಿಸಿದೆ.
ರೀ ರ್ಯಾಂಕ್: ಕಾಮೆಡ್-ಕೆ ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದ ಇಂಗ್ಲಿಷ್ ಪರೀಕ್ಷೆಯ ಅಂಕವನ್ನು ಸೀಟು ಹಂಚಿಕೆಗೆ ಮಾನದಂಡವಾಗಿಸಬಾರದೆಂದು ಹೈ ಕೋರ್ಟ್ ನಿರ್ದೇಶನ ನೀಡಿದ್ದರಿಂದ ಈ ಬಾರಿ ಸುಮಾರು 68 ವಿದ್ಯಾರ್ಥಿಗಳಿಗೆ ರೀ ರ್ಯಾಂಕ್ ನೀಡಲು ನಿರ್ಧರಿಸಲಾಗಿ ದೆ. ಈ ರೀತಿಯಾಗಿ ರ್ಯಾಂಕ್ ನಡೆಸಲು ಅರ್ಹತೆ ಪಡೆದವರು ಎರಡನೇ ಸುತ್ತಿನಲ್ಲಿ ಲಭ್ಯವಿರುವ ಸೀಟು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಾಮೆಡ್ -ಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


