ಮರದ ಕೊಂಬೆ ಬಿದ್ದು ಮತದಾರ ಸಾವು: ಬಿಬಿಎಂಪಿ ಚುನಾವಣೆ ವೇಳೆ ದುರ್ಘಟನೆ
ಮತದಾರರೊಬ್ಬರು ಮತಗಟ್ಟೆಗೆ ತಮ್ಮ ಹಕ್ಕು ಚಲಾಯಿಸಲು ತೆರಳುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಾಜಿನಗರದಲ್ಲಿ ಶನಿವಾರ...

ಬೆಂಗಳೂರು: ಮತದಾರರೊಬ್ಬರು ಮತಗಟ್ಟೆಗೆ ತಮ್ಮ ಹಕ್ಕು ಚಲಾಯಿಸಲು ತೆರಳುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಾಜಿನಗರದಲ್ಲಿ ಶನಿವಾರ ನಡೆದಿದೆ.
ಫಯಾಜ್ ಝಹೀದ್ (28) ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಶಿವಾಜಿನಗರ ಜೂನಿಯರ್ ಕಾಲೇಜಿಗೆ ತಮ್ಮ ಪೋಷಕರೊಂದಿಗೆ ಮತ ಚಲಾಯಿಸಲು ತೆರಳಿದ್ದರು. ಅವರ ತಂದೆ-ತಾಯಿ ವೋಟು ಹಾಕಿ ಮತಗಟ್ಟೆಯಿಂದ ಹೊರಬಂದು ಆಗಿತ್ತು. ಫಯಾಜ್ ಮತಗಟ್ಟೆಯ ಒಳಗೆ ಕಾಲಿಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಕೂಡಲೇ ಫಯಾಜ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಮರದ ಕೊಂಬೆ ಅವರ ತಲೆಯ ಬಲಭಾಗಕ್ಕೆ ಬಿದ್ದು ರಕ್ತ ಒಂದೇ ಸಮನೆ ಸುರಿಯುತ್ತಿತ್ತು ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ.
ನಗರದ ಕನ್ನಿಂಗ್ ಹ್ಯಾಂ ರಸ್ತೆಯ ಬಳಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಫಯಾಜ್ ಸ್ವಂತ ವ್ಯಾಪಾರ ನಡೆಸುತ್ತಿದ್ದು, ಎಲ್ಲರೊಂದಿಗೆ ಬೆರೆಯುವ ವ್ಯಕ್ತಿಯಾಗಿದ್ದರು. ಈ ಘಟನೆಯಿಂದ ಹೊರಬರಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


