ಜಿಲ್ಲಾ ಸುದ್ದಿ

ಕಾಂಗ್ರೆಸ್ ಮಾರಿತು ಕೋಟ್ಯಂತರ ಮೌಲ್ಯದ ಆಸ್ತಿ

ಬೆಂಗಳೂರಿನಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸುಮಾರು 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಖಾಸಗಿಗೆ ಮಾರಾಟ ಮಾಡಿದ್ದು, ಇದರಬೆನ್ನ ಹಿಂದೆ ಕಾಂಗ್ರೆಸ್ ಶಾಸಕರು, ಮಂತ್ರಿಗಳು, ಮುಖಂಡರು ಭಾಗಿಯಾಗಿದ್ದಾರೆ ಎಂದು 15 ಅಂಶಗಳ ಆರೋಪ ಪಟ್ಟಿಯನ್ನು ಬಿಜೆಪಿ...

ಕಾಂಗ್ರೆಸ್ ಮಾರಿತು ಕೋಟ್ಯಂತರ ಮೌಲ್ಯದ ಆಸ್ತಿ
ಬಿಜೆಪಿ ವಕ್ತಾರ ಸುರೇಶ್ ಕುಮಾರ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬೆಂಗಳೂರಿನಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸುಮಾರು 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಖಾಸಗಿಗೆ ಮಾರಾಟ ಮಾಡಿದ್ದು, ಇದರ
ಬೆನ್ನ ಹಿಂದೆ ಕಾಂಗ್ರೆಸ್ ಶಾಸಕರು, ಮಂತ್ರಿಗಳು, ಮುಖಂಡರು ಭಾಗಿಯಾಗಿದ್ದಾರೆ ಎಂದು 15 ಅಂಶಗಳ ಆರೋಪ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಮಾಡಿರುವ ಹಿಟ್‍ಅಂಡ್ ರನ್ ಕೇಸ್ ರೀತಿ ಆರೋಪ ಪಟ್ಟಿ ನಮ್ಮದಲ್ಲ. ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ ಎಂದು ಪ್ರತಿ ಪ್ರಕರಣಗಳ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಮತ್ತು ಎಂಎಲ್‍ಸಿ ಅಶ್ವತ್ಥನಾರಾಯಣ, ಕಾಂಗ್ರೆಸ್ ಪಕ್ಷವು ಮತದಾರರ ಕಣ್ಣಿಗೆ
ಮಣ್ಣೆರಚಲು ತಂತ್ರಗಾರಿಕೆ ನಡೆಸುತ್ತಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ್ ಪ್ರಕಾಶ್, ಎನ್. ರಮೇಶ್ ಇದ್ದರು.

ಕಾಂಗ್ರೆಸ್ ವಿರುದ್ಧ ಚಾರ್ಜ್‍ಶೀಟ್

1. ಕೆ.ಜಿ.ರಸ್ತೆಯಲ್ಲಿದ್ದ ಕ್ಷಯ ರೋಗ ಆಸ್ಪತ್ರೆಗೆ ದಾನವಾಗಿ ನೀಡಿದ್ದ ಬೆಲೆ ಬಾಳುವ ನಿವೇಶನವನ್ನು ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣದ ಹೆಸರಲ್ಲಿ ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯನವರಿಗೆ ಪರಭಾರೆ. ಪ್ರಕರಣ ದಾಖಲಾಗಿದೆ.

2. ಮಾಮೂಲ್ ಪೇಟೆಯ ಶಾಲಾ ಕಟ್ಟಡವನ್ನು ದ್ವಿಚಕ್ರ ವಾಹನ ನಿಲುಗಡೆ ಸಂಕೀರ್ಣದ ಹೆಸರಲ್ಲಿ ಖಾಸಗಿಯವರಿಗೆ ದಾನ. ಸರ್ಕಾರಕ್ಕೆ ರು.250 ಕೋಟಿ ನಷ್ಟ. 3 ಲ್ಯಾಂಗ್ ಫೋರ್ಡ್ ಹಾಕಿ ಸ್ಟೇಡಿಯಂ ಪಕ್ಕದ ರು.600 ಕೋಟಿ ಮೌಲ್ಯದ ಆಸ್ತಿ ದಿವ್ಯಶ್ರೀ ಚೇಂಬರ್‍ಗೆ ದಾನ.

4. ಮಿಲ್ಲರ್ ಟ್ಯಾಂಕ್ ಪ್ರದೇಶದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮತ್ತು ಜೆ.ಸಿ. ನಗರದ ಅಂದಿನ ಪಾಲಿಕೆ ಸದಸ್ಯ ಗೋವಿಂದ ರಾಜು ಅವರಿಂದ ರು.750 ಕೋಟಿ ಮೌಲ್ಯದ ನಿವೇಶನ
ಅತಿಕ್ರಮಣ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

5. ಶಾಸಕ ಆರ್.ವಿ. ದೇವರಾಜ್‍ರಿಂದ ಸಿದ್ದಯ್ಯ ರಸ್ತೆಯಲ್ಲಿ ರು.150 ಕೋಟಿ ವೆಚ್ಚದ 2 ನಿವೇಶನಗಳನ್ನು ಅತಿಕ್ರಮಿಸಿ 2 ಹೋಟೆಲ್ ನಿರ್ಮಾಣ. ಬಿ.ಎಂ.ಟಿ.ಎಫ್, ಲೋಕಾಯುಕ್ತ ಕಚೇರಿಗಳಲ್ಲಿ ದೂರು, ಎಫ್.ಐ.ಆರ್.

6. ಟಿಡಿಆರ್ ಮಾರಾಟದ ನೆಪದಲ್ಲಿ ಕೋಟ್ಯಾಂತರ ರೂ. ಲೂಟಿ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ವಿಧಾನ ಪರಿಷತ್ ಸದಸ್ಯ ಭೈರತಿ ಸುರೇಶ್ ಹಾಗೂ ಶಾಸಕ ಭೈರತಿ ಬಸವರಾಜ್ ಸಹೋದರ ಭೈರತಿ ನಾಗರಾಜ್ ಮತ್ತವರ ಬೆಂಬಲಿಗರ ವಿರುದ್ಧ ದೂರು ದಾಖಲು.


7. ದಿನೇಶ್ ಗುಂಡೂರಾವ್ ಅವರಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕಾಮಗಾರಿಗೆ ಶಾಸಕರ ಮತ್ತು ವಿಶೇಷ ಅನುದಾನದ ನಿಧಿಯಡಿ ಅನುದಾನ ಬಳಸಿ ರು.5
ಕೋಟಿ ಅವ್ಯವಹಾರ.

8. ಸಚಿವ ರೋಷನ್ ಬೇಗ್‍ರಿಂದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಪಕ್ಕದಲ್ಲೇ ಸರ್ಕಾರಿ ನಿವೇಶನ ಅತಿಕ್ರಮಣ. ಎಫ್ಐಆರ್ ದಾಖಲು.

9. ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಡೆಸಿದ ಅಕ್ರಮಗಳ ಸರಮಾಲೆ ನೂರಾರು ಕೋಟಿ ದಾಟಿದೆ. ಶಾಸಕರ ಕುಟುಂಬಕ್ಕೆ ಸೇರಿದ ಮನೆಯ ಮೇಲೆ ನಡೆದ ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ಪಾಲಿಕೆಗೆ ಸೇರಿದ ಸುಮಾರು ರು.150 ಕೋಟಿ ಹಗರಣದ ಸಾವಿರಕ್ಕೂ ಅಧಿಕ ಕಡತ ವಶ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.