ಜಿಲ್ಲಾ ಸುದ್ದಿ

ಉದ್ಯಮಿ ಪತ್ನಿ, ಮಕ್ಕಳ ಹತ್ಯೆ

ನಗರದ ಬಟ್ಟೆ ಉದ್ಯಮಿಯ ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ನಗರದ ಕುವೆಂಪು ನಗರದಲ್ಲಿ ಶನಿವಾರ ತಡರಾತ್ರಿ ನಡೆದಿದೆ...

ಉದ್ಯಮಿ ಪತ್ನಿ, ಮಕ್ಕಳ ಹತ್ಯೆ
ಉದ್ಯಮಿ ಪತ್ನಿ, ಮಕ್ಕಳ ಹತ್ಯೆ (ಸಾಂದರ್ಭಿಕ ಚಿತ್ರ)
Published On :

ಬೆಳಗಾವಿ: ನಗರದ ಬಟ್ಟೆ ಉದ್ಯಮಿಯ ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ನಗರದ ಕುವೆಂಪು ನಗರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ರೀನಾ ಮಾಲಗತ್ತಿ (35), ಪುತ್ರ ಆದಿತ್ಯ (12) ಹಾಗೂ ನಾಲ್ಕುವರೆ  ವರ್ಷದ ಹೆಣ್ಣು ಮಗು ಸಾಹಿತ್ಯ ಕೊಲೆಯಾದ ದುರ್ದೈವಿಗಳು. ಇಬ್ಬರು ಮಕ್ಕಳನ್ನು ಬಾತರೂಮ್ ನಲ್ಲಿ ನೀರು ತುಂಬಿ ಇಟ್ಟಿದ್ದ ಬಕೆಟ್‍ನಲ್ಲಿ ಮುಳಗಿಸಿ ಕೊಂದಿದ್ದಾರೆ.

ಮಹಿಳೆಯನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಲಾಗಿದೆ. ರೀನಾ ಪತಿ ಬಳ್ಳಾರಿ ಮೂಲದ ಬಟ್ಟೆ ಉದ್ಯಮಿ, ರಾಕೇಶ ಮಾಲಗತ್ತಿ ಶನಿವಾರ ವ್ಯವಹಾರ ನಿಮಿತ್ತ ಗೋವಾಕ್ಕೆ ತೆರಳಿದ್ದರು. ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ಹತ್ತಿರದ ಹರ್ಷಾ ಎಂಬ ಹುಡುಗ ಕೊಲೆರಪಾತಕಿ ಕೈಗೆ ಕಾಣದೇ ಬಚಾವ್ ಆಗಿದ್ದಾನೆ. ಮೂವರನ್ನು ಕೊಲೆ ಮಾಡಿದ ಸುದ್ದಿ ಕೇಳಿದ ಕುವೆಂಪು ನಗರದ ಸುತ್ತಮುತ್ತಲಿನ ಜತನೆ ಆತಂಕದಿಂದ ಕೊಲೆ ನಡೆದ ಮನೆಯ ಮುಂದೆ ಜಮಾಯಿಸಿದ್ದರು. ವಿಷಯ ತಿಳಿದ ರಾಕೇಶ್ ಭಾನುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದಾರೆ.

ಪರಿಚಿತನ ಕೃತ್ಯ?: ಕೊಲೆ ನಡೆದ ಜಾಗದಲ್ಲಿ ಸಿಕ್ಕಿರುವ ಕೆಲವು ಕುರುಹುಗಳ ಹಿನ್ನೆಲೆಯಲ್ಲಿ ಒಬ್ಬನೇ ಕೊಲೆ ಮಾಡಿರುವ ಸಾಧ್ಯತೆ ಇದೆ ಹಾಗೂ ಇದು ಪರಿಚಿತರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಕೌಟುಂಬಿಕ ಮೂಲಗಳ ಪ್ರಕಾರ, ದಂಪತಿ ಅನ್ಯೋನ್ಯವಾಗಿದ್ದರು. ಸ್ನೇಹಿತರಂತೆ ಇದ್ದರು. ಮದುವೆಯಾದ 14 ವರ್ಷಗಳಿಂದಲೂ ಇವರ ನಡುವೆ ಗಂಭೀರ ಭಿನ್ನಾಭಿಪ್ರಾಯಗಳೇನೂ ಇರಲಿಲ್ಲ. ಇವರ ಪುತ್ರ ಆದಿತ್ಯ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದರೆ, ಮಗಳು ಸಾಹಿತ್ಯ ಹಾಗೂ ರೀನಾ ಮನೆಯಲ್ಲಿಯೇ ಇರುತ್ತಾರೆ. ಒಂದು ವರ್ಷದ ಹಿಂದೆ ಸ್ವಂತ ಮನೆ ಖರೀದಿಸಿದ್ದಾರೆ.

ರಾತ್ರಿ ಪಾರ್ಟಿ:
ಪಾರ್ಟಿ ಮಾಡುವುದಕ್ಕಾಗಿಯೇ ಬಿದರಿನ ಕೊಂಬುಗಳಿಂದ ಮನೆಯ ಮೇಲ್ಮಹಡಿಯಲ್ಲಿ ಪುಟ್ಟ ಕೊಠಡಿಯೊಂದನ್ನು ನಿರ್ಮಿಸಲಾಗಿದೆ. ಅಲ್ಲಿ ಆಗಾಗ ಸ್ನೇಹಿತರ ಜೊತೆ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.