ಜೆಡಿಎಸ್ ಅಂತಾರಾಷ್ಟ್ರೀಯ ದರ್ಜೆ ಪ್ರಣಾಳಿಕೆ
ಜರ್ಮನಿಯ ಮ್ಯೂನಿಕ್‍ನ ಬಿಯರ್ ಪಾರ್ಟಿಯಂತೆ ಕೆಂಪೇಗೌಡ ಜಯಂತಿಯನ್ನು 9 ದಿನ ಬೆಂಗಳೂರು ಹಬ್ಬವಾಗಿ ಆಚರಣೆ: ಸಿಡ್ನಿ ಓಪೇರಾ ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಕಲಾಮಂದಿರ:ಇಂಗ್ಲೆಂಡ್ ನಲ್ಲಿರುವಂತೆ ಆರೋಗ್ಯ ಪ್ಯಾಕೇಜ್, ಎಲ್ಲರಿಗೂ ಉಚಿತ ಇಂಟರ್ ನೆಟ್, ವೈ-ಫೈ: ಸ್ವೀಡನ್ ನಂತೆ ಜೈವಿಕ ತ್ಯಾಜ್ಯ...

ಬೆಂಗಳೂರು: ಜರ್ಮನಿಯ ಮ್ಯೂನಿಕ್‍ನ ಬಿಯರ್ ಪಾರ್ಟಿಯಂತೆ ಕೆಂಪೇಗೌಡ ಜಯಂತಿಯನ್ನು 9 ದಿನ ಬೆಂಗಳೂರು ಹಬ್ಬವಾಗಿ ಆಚರಣೆ: ಸಿಡ್ನಿ ಓಪೇರಾ ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಕಲಾಮಂದಿರ:ಇಂಗ್ಲೆಂಡ್ ನಲ್ಲಿರುವಂತೆ ಆರೋಗ್ಯ ಪ್ಯಾಕೇಜ್, ಎಲ್ಲರಿಗೂ ಉಚಿತ ಇಂಟರ್ ನೆಟ್, ವೈ-ಫೈ: ಸ್ವೀಡನ್ ನಂತೆ ಜೈವಿಕ ತ್ಯಾಜ್ಯ ಸಂಸ್ಕರಣೆ: ಹಾಂಗ್ ಕಾಂಗ್ ಮಾದರಿ ಕಡಿಮೆ ದರದ ಮನೆಗಳು: ತಮಿಳುನಾಡಿನಂತೆ ಅನ್ನಪೂರ್ಣ ಕಿಚನ್
ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ನೀಡಿರುವ ಭರವಸೆಗಳ ಹೈಲೈಟ್ ಇವು. ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷದ ಶಾಸಕ ಜಮೀರ್ ಅಹ್ಮದ್ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಮೆಟ್ರೊಪಾಲಿಟನ್ ಕನಸು: ಇವುಗಳ ಜತೆಗೆ ಕೋಮುವಾದ ಪ್ರತಿಪಾದಿಸಬಾರದು; ಜಾತೀ ಯ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಆಡಳಿತ ಮಾಡಬಾರದು; ಮತ, ಜಾತಿಯ ಒಲುಮೆ ಮೀರಿ ನಾಗರಿಕರ ಸೇವೆ, ಯಾವುದೇ ಕಾರಣಕ್ಕೂ ಭ್ರಷ್ಟತೆಯಿಂದ ಕೂಡಿರಬಾರದು: ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲತೆಗಳ ಸಂಗ್ರಹ, ನಾಗರಿಕರ ಅನುಕೂಲಕ್ಕಾಗಿ ಸಂಪನ್ಮೂಲ ಬಳಕೆ, ಜಾಗತಿಕ ಮಟ್ಟದಲ್ಲಿ ಬೆಂಗಳೂರು ವಾಸ ಯೋಗ್ಯ ಅತ್ಯುತ್ತಮ ನಗರವಾಗಿ ಅಭಿವೃದ್ಧಿ ಹಾಗೂ ಎಲ್ಲ ನಾಗರಿಕರಿಗೂ ಸುಖವಾಗಿ ವಾಸಿಸಲು ಯೋಗ್ಯವಾದ ಮೆಟ್ರೊಪಾಲಿಟನ್ ನಗರವನ್ನಾಗಿ ಅಭಿವೃದ್ಧಪಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಜನರಿಗೆ ಪ್ರಥಮ ಅಶ್ವಾಸನೆಗಳಾಗಿ ನೀಡಲಾಗಿದೆ.
ಹಳೆಯ ಕೊಡುಗೆಗಳ ಸ್ಮರಣೆ: ಪಕ್ಷದ ಮೂಲ ಮಂತ್ರ, ಕಾರ್ಯಕ್ರಮ, ಅನುಸರಿಸುವ ಮಾರ್ಗಗಳು, ಕಾರ್ಯಸೂಚಿ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಕ್ರಿಯಾಯೋಜನೆಯನ್ನೇ ತನ್ನ 36 ಪುಟಗಳ ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ.
ದೇವೇಗೌಡ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೀಡದ ಕೊಡುಗೆಗಳನ್ನು 10 ಪುಟಗಳಲ್ಲಿ ವರ್ಣಿಸಲಾಗಿದೆ. ಬಿಜೆಪಿ ಸರ್ಕಾರ ನೀಡಿದ ಆಶ್ವಾಸನೆಗಳನ್ನು ಪೂರೈಸಲಾಗದ ವಿವರ 4 ಪುಟ ಮೀಸಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಆಶ್ವಾಸನೆ ನೆರವೇರದ್ದು, ಕಳೆದ ವರ್ಷದಲ್ಲಿ ಬೆಂಗಳೂರು ಆಡಳಿತದ ಬಗ್ಗೆ ಅವರ ಪ್ರಮಾದಗಳನ್ನು 2 ಪುಟಗಳಲ್ಲಿ ವಿವರಿಸಲಾಗಿದೆ. `ಬಿಬಿಎಂಪಿ ನಿರ್ವಹಣಾ ಕಾಮಗಾರಿ ವಿಭಾಗದಲ್ಲಿ ಜೆಡಿಎಸ್ ತರಲಿರುವ ಬದಲಾವಣೆಗಳು' ಎಂಬ ಪುಟವನ್ನು 2 ಬಾರಿ ಮುದ್ರಿಸಲಾಗಿದೆ.
ಏಕಮುಖ ಸಂಚಾರ ಮಿತಿ: ರಸ್ತೆ ವಿಸ್ತರಿಸಿ 98 ರಸ್ತೆಗಳ ಏಕಮುಕ ಸಂಚಾರವನ್ನು 21 ರಸ್ತೆಗಳಿಗೆ ಮಿತಿ, ಪ್ರತಿ 200 ಮೀಟರ್ ಗೆ ಪಾದಚಾರಿದಾಟಲು ಅವಕಾಶ. 6 ಜಂಕ್ಷನ್ ಗಳಲ್ಲಿ ವರ್ತುಲಾಕಾರದ ಎತ್ತರಿಸಿದ ಪಾದಚಾರಿ ಮಾರ್ಗ, 6 ಸ್ಥಳಗಲ್ಲಿ 3.6 ಕಿಮೀ ಟನಲ್ ರಸ್ತೆ, 8 ಸಿಗ್ನಲ್ ಫ್ರೀ ಕಾರಿಡಾರ್, ಮೆಟ್ರೊ ವಿಸ್ತರಣೆಗೆ ಸಹಕಾರ ಸೇರಿದಂತೆ 5 ವರ್ಷಗಳಲ್ಲಿ ಎಲ್ಲರಿಗೂ ಇಂಟರ್ ನೆಟ್ ಸೇವೆಯನ್ನು ಉಚಿತವಾಗಿ ನೀಡಲಿದೆ.
ತ್ಯಾಜ್ಯ ನಿರ್ವಹಣೆಗೆ ಕ್ರಮ: ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣ ಸೇರಿದಂತೆ ನೈರ್ಮಲ್ಯ ಅಭಿವೃದ್ಧಿಗೆ ಕಾರ್ಯ ಸೂಚಿಯನ್ನು ಪ್ರಕಟಿಸಿದೆ. ಪ್ಲಾಸ್ಟಿಕ್ ಬಳಕೆ ನಿರ್ಬಂಧ, ತ್ಯಾಜ್ಯ ನಿರ್ವಹಣೆ ಪ್ರಾಧಿಕಾರ ರಚಿಸಿ ಅದರ ಮೂಲಕವೇ ಹಣ ವಿನಿಯೋಗ, 5 ವರ್ಷಗಳಲ್ಲಿ ಎಲ್ಲ ರಸ್ತೆಗಳನ್ನು ಯಂತ್ರದ ಮೂಲಕವೇ ಸ್ವಚ್ಛ. ಕೆರೆಗಳ ಒತ್ತುವರಿ ತೆರವುಗೊಳಿಸಿ ಎಲ್ಲ ಕೆರೆಗಳನ್ನು ಪುನರುಜ್ಜೀವನ, ರಾಜಕಾಲುವೆಗಳ ಮೇಲೆ ಅಣೆಕಟ್ಟೆಗಳನ್ನು ನಿರ್ಮಿಸಿ 1.6 ಟಿಎಂಸಿ ಮಳೆ ನೀರನ್ನು ಹಿಡಿದಿಟ್ಟು ಅದನ್ನು ಗೃಹ ಬಳಕೆಯೇತರ ಕೆಲಸಗಳಿಗೆ ಬಳಸಲಾಗುವುದೆಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


