ಮತ್ತೆ ಏಳು ರೈತರ ಆತ್ಮಹತ್ಯೆ
ಬೆಳೆಹಾನಿ, ಸಾಲಬಾಧೆಯಿಂದ ಕಲಬುರಗಿಯ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಭಾನುವಾರವೂ ಏಳು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ

ಬೆಂಗಳೂರು: ಬೆಳೆಹಾನಿ, ಸಾಲಬಾಧೆಯಿಂದ ಕಲಬುರಗಿ ಯ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಭಾನುವಾರವೂ ಏಳು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳಿಯ ಅಣ್ಣೆಪ್ಪ (55), ಆಳಂದ ತಾಲೂಕಿನ ಸರಸಂಬಾ ಗ್ರಾಮದ ಶಂಕರ (61) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಬ್ಯಾಂಕ್‍ಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದರು. ಕುಣಿಗಲ್ ತಾಲೂಕಿನ ಬಸವಮತ್ತೀಕೆರೆಯಲ್ಲಿ ವಿಷಯ ಕುಡಿದು ಪ್ರಾಣ ಬಿಟ್ಟ ಶಿವರಾಮಯ್ಯ(65) ಅವರಿಗೆ ರು. 4 ಲಕ್ಷ ಸಾಲವಿತ್ತು. ಭದ್ರಾವತಿ ತಾಲೂಕಿನ ಭದ್ರಾ ಪುರದ ಆನೆಹಳ್ಳಿ ರವಿ (32) ನೇಣಿಗೆ ಕೊರಳೊಡ್ಡಿ ದ್ದು, ರು. 5ಲಕ್ಷಕ್ಕೂ ಮಿಗಿಲಾಗಿ ಸಾಲ ಹೊಂದಿದ್ದರು. ಬೇಲೂರು ತಾಲೂ ಕಿನ ಕಲ್ಲಿಶೆಟ್ಟಿ-ಹಳ್ಳಿಯ ಬಸವರಾಜು (44) ಸಹ ರು. 3 ಲಕ್ಷ ಸಾಲ ಮಾಡಿಕೊಂಡಿದ್ದರು.ಶ್ರೀರಂಗಪಟ್ಟಣ ತಾಲೂಕಿನ ಸಿದ್ಧಾಪುರದ ಚನ್ನೇಗೌಡ (48) ಬೆಳೆನಷ್ಟದಿಂದ ಬೇಸತ್ತಿದ್ದರು. ಜತೆಗೆ ಅವರಿಗಿದ್ದ ರು. 2 ಲಕ್ಷ ಸಾಲ ದಿಂದ ಅವರು ನೇಣಿಗೆ ಶರಣಾಗಿದ್ದಾರೆ.
ಸಿಂಧನೂರು ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಂಪಾಪತಿ ಗುಂಜಳ್ಳಿ (45) ರು.4 ಲಕ್ಷ ಸಾಲಹೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


