ಜಿಲ್ಲಾ ಸುದ್ದಿ

ಸ್ಮಾರ್ಟ್ ಆಗಲಿವೆ ರಾಜ್ಯದ 4 ಸಿಟಿಗಳು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ 100 ನಗರಗಳ ಆಯ್ಕೆ ಪಟ್ಟಿರಬಿದ್ದಿದ್ದು, ಕರ್ನಾಟಕ ರಾಜಧಾನಿ ಬೆಂಗಳೂರು...

ಸ್ಮಾರ್ಟ್ ಆಗಲಿವೆ ರಾಜ್ಯದ 4 ಸಿಟಿಗಳು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ 100 ನಗರಗಳ ಆಯ್ಕೆ ಪಟ್ಟಿರಬಿದ್ದಿದ್ದು, ಕರ್ನಾಟಕ ರಾಜಧಾನಿ ಬೆಂಗಳೂರು ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರೆ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ ಸೇರಿ ನಾಲ್ಕು ನಗರಗಳು 48 ಸಾವಿರ ಕೋಟಿಗಳ ಬೃಹತ್  ಯೋಜನೆಯಲ್ಲಿ ಸ್ಥಾನ ಗಿಟ್ಟಿಸಿವೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಶನಿವಾರ ಸ್ಮಾರ್ಟ್ ಸಿಟಿ  ಯೋಜನೆಗೆ ಆಯ್ಕೆಯಾಗಿರುವ ದೇಶದ ನಗರ-ಪಟ್ಟಣಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರು, ಪಾಟ್ನಾ, ಗ್ಯಾಂಗ್‍ಟಕ್, ತಿರುವನಂತಪುರ ಮುಂತಾದ ರಾಜ್ಯ ರಾಜಧಾನಿಗಳು ಪಟ್ಟಿಯಿಂದ ಹೊರಗುಳಿದಿವೆ. ಆದರೆ, ಮುಂಬೈ, ಕೋಲ್ಕತ್ತಾ, ಲಖನೌ, ಜೈಪುರ, ರಾಂಚಿ ಮತ್ತು ಭುವನೇಶ್ವರ್ ಮುಂತಾದ ರಾಜಧಾನಿಗಳು ಸ್ಮಾರ್ಟ್‍ಸಿಟಿ  ಯೋಗ ಪಡೆದಿವೆ.

ಉತ್ತರಪ್ರದೇಶದ 13 ನಗರಗಳು ಸ್ಮಾರ್ಟ್‍ಸಿಟಿ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಅತಿ ಹೆಚ್ಚು ನಗರಗಳಿಗೆ  ಯೋಜನೆಯ ಲಾಭ ಪಡೆಯುವ ಅವಕಾಶ ಆ ರಾಜ್ಯಕ್ಕೆ ಸಿಕ್ಕಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯದ ಶಿವಮೊಗ್ಗ ಸೇರಿದಂತೆಬಿಹಾರದ ಬಿಹಾರ್ ಶರೀಫ್, ಧರ್ಮಶಾಲಾ ಮುಂತಾದ ಚಿಕ್ಕ ನಗರ-ಪಟ್ಟಣಗಳೂ ಪಟ್ಟಿಯಲ್ಲಿ ಅವಕಾಶ ಪಡೆದಿವೆ. ದೆಹಲಿಸೇರಿದಂತೆ ರಾಷ್ಟ್ರದ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಕೂಡ ಸ್ಮಾರ್ಟ್‍ಸಿಟಿ  ಯೋಜನೆಗೆ ಅರ್ಹತೆ ಪಡೆದಿವೆ.

ನೆರೆಯ ಆಂಧ್ರಪ್ರದೇಶದ ಧಾರ್ಮಿಕ ಕ್ಷೇತ್ರ ತಿರುಪತಿ, ಕಾಕಿನಾಡ ಹಾಗೂ ವಿಶಾಖಪಟ್ಟಂ ಕೂಡ ಅವಕಾಶ ಗಿಟ್ಟಿಸಿವೆ.  ಯೋಜನೆಗೆ ಆಯ್ಕೆಯಾಗಿರುವ ಎಲ್ಲಾ ನೂರು ನಗರಗಳು ಸ್ಮಾರ್ಟ್‍ಸಿಟಿ  ಯೋಜನೆ ಪ್ರಸ್ತಾಪ ಸಲ್ಲಿಸಬೇಕಿದ್ದು, ಆ ಯೋಜನೆಯ ಆಧಾರದ ಮೇಲೆ ಮೊದಲ ಹಂತದಲ್ಲಿ 20 ನಗರಗಳನ್ನು ಆಯ್ಕೆಮಾಡಿ, ಮೊದಲ ವರ್ಷ 200 ಕೋಟಿ ಅನುದಾನ ನೀಡಲಾಗುವುದು.

ನಂತರದ ಹಂತದಲ್ಲಿಉಳಿದ 80 ನಗರಗಳಲ್ಲಿ ತಲಾ 40ರಂತೆ ಮುಂದಿನ ಐದು ವರ್ಷದಲ್ಲಿ ಎರಡು ಹಂತದಲ್ಲಿ ಅನುದಾನ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ವಿವರಿಸಿದ್ದಾರೆ. ತತಕ್ಷಣಕ್ಕೆ ಎಲ್ಲಾ 100 ನಗರಗಳಿಗೆ ಸ್ಮಾರ್ಟ್‍ಸಿಟಿ  ಯೋಜನೆ ಪ್ರಸ್ತಾವನೆ ತಯಾರಿಸಲು ತಲಾ ಎರಡು ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದೂ ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.