ರೈತರೂ ರಾಜಕೀಯ ಮಾಡಬೇಕು: ಯಾದವ್
ದೇಶದ ಅನ್ನದಾತ ರೈತರನ್ನು ಎಲ್ಲ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣದ ಗುಲಾಮರನ್ನಾಗಿ ಮಾಡಿಕೊಂಡಿವೆ. ರೈತರು ಇದರಿಂದ ಹೊರಬರಬೇಕಾದರೆ ರಾಜಕೀಯ ಮಾಡುವುದು ಅನಿವಾರ್ಯ ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಮುಖಂಡ ಹಾಗೂ ಸ್ವರಾಜ್ ಸಂಘಟನೆ...

ಬೆಂಗಳೂರು: ದೇಶದ ಅನ್ನದಾತ ರೈತರನ್ನು ಎಲ್ಲ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣದ ಗುಲಾಮರನ್ನಾಗಿ ಮಾಡಿಕೊಂಡಿವೆ. ರೈತರು ಇದರಿಂದ ಹೊರಬರಬೇಕಾದರೆ ರಾಜಕೀಯ ಮಾಡುವುದು ಅನಿವಾರ್ಯ ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಮುಖಂಡ ಹಾಗೂ ಸ್ವರಾಜ್ ಸಂಘಟನೆ ಅಧ್ಯಕ್ಷ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು.
ಭೂಸ್ವಾಧೀನ ಕಾಯಿದೆ ವಿರೋಧಿಸಿ, ರೈತ ಸಂಘ ಹಾಗೂ ಎಡಪಕ್ಷಗಳ ನೇತೃತ್ವದಲ್ಲಿ ನಾನಾ ಸಂಘಟನೆಗಳು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ `ನಮ್ಮ ಭೂಮಿ, ನಮ್ಮ ಹಕ್ಕು'
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ದೇಶದಲ್ಲಿ ಕೃಷಿ ಬಿಕ್ಕಟ್ಟು ಹಿಂದೆಂದಿಗಿಂತ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ತಕ್ಕನಾಗಿ ದುಡಿಯುವ ವರ್ಗದಿಂದ ಪ್ರತಿರೋಧ ವ್ಯಕ್ತವಾಗುತ್ತಿಲ್ಲ ಎಂದು ವಿಷಾದಿಸಿದರು.
ನಾಡಿನ ರೈತ ಸಂಘನೆಯ ಮುಖಂಡ ದಿ. ನಂಜುಂಡ ಸ್ವಾಮಿ ಅವರ ಹೋರಾಟವನ್ನು ಸ್ಮರಿಸಿದ ಅವರು, ಇಲ್ಲಿನ ಎಲ್ಲ ರೈತ ಸಂಘಟನೆಗಳು ಹೊಸ ರಾಜಕೀಯ ನೀತಿ ರೂಪಿಸಿಕೊಳ್ಳಬೇಕಿದೆ. ಸರಿಯಾದ ದಾರಿಯಲ್ಲಿ ರೈತರನ್ನು ರಾಜಕೀಯಕ್ಕೆ ಒಗ್ಗೂಡಿಸಬೇಕಿದೆ ಎಂದರು. ಶಾಸಕ ಪುಟ್ಟಣಯ್ಯ ಮಾತನಾಡಿ, `ಬೆಳೆದ ಬೆಳೆಗೆ ಬೆಲೆ ಸಿಗದೆ, ಬೆಳೆ ಬೆಳೆಯುವುದಕ್ಕಾಗಿ ಸಾಲ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಆ ಬಗ್ಗೆ ಕಣ್ಣೀರು ಹಾಕುವವರು ಕಾಣುತ್ತಿಲ್ಲ. ಇವು ಆತ್ಮಹತ್ಯೆ ಅಲ್ಲ ಸರ್ಕಾರಗಳೇ ನಡೆಸುವ ಕಗ್ಗೊಲೆಗಳಾಗಿವೆ' ಎಂದು ಕಿಡಿಕಾರಿದರು. ಮಾಜಿ ಶಾಸಕ ಶ್ರೀರಾಮರೆಡ್ಡಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


