ಪಂಕ್ಚರ್ ಫವಾಜ್ ಪೊಲೀಸರ ಅತಿಥಿ
ರಸ್ತೆಯಲ್ಲಿ ಮೊಳೆಗಳನ್ನಿಟ್ಟು ವಾಹನಗಳ ಟೈರ್ ಪಂಕ್ಚರ್ ಮಾಡಿ, ರಿಪೇರಿಗಾಗಿ ಅವರು ತನ್ನ ಅಂಗಡಿ ಬಳಿಯೇ ಬರುವಂತೆ ಮಾಡುತ್ತಿದ್ದ ಆರೋಪಿಯನ್ನು ಎಚ್‍ಎಸ್‍ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ರಸ್ತೆಯಲ್ಲಿ ಮೊಳೆಗಳನ್ನಿಟ್ಟು ವಾಹನಗಳ ಟೈರ್ ಪಂಕ್ಚರ್ ಮಾಡಿ, ರಿಪೇರಿಗಾಗಿ ಅವರು ತನ್ನ ಅಂಗಡಿ ಬಳಿಯೇ ಬರುವಂತೆ ಮಾಡುತ್ತಿದ್ದ ಆರೋಪಿಯನ್ನು ಎಚ್‍ಎಸ್‍ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಮ್ಮನ ಪಾಳ್ಯದ ಆಯಿಷಾ ಮಸೀದಿ ರಸ್ತೆ ನಿವಾಸಿ ಫವಾಜ್(20) ಬಂಧಿತ. ವಾಹನ ಸವಾರರಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಫೇಸ್‍ಬುಕ್ ಮತ್ತು ಟ್ವಿಟರ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.
ಬೊಮ್ಮನಹಳ್ಳಿ ವೃತ್ತದ ಬಳಿ ಪಂಕ್ಚರ್ ಅಂಗಡಿ ಇಟ್ಟುಕೊಂಡಿರುವ ಈತ, ವಾಹನ ಸವಾರರನ್ನು ತನ್ನತ್ತ ಸೆಳೆಯಲು ಸರ್ಜಾಪುರ ರಸ್ತೆಯಲ್ಲಿನ ಇಬ್ಬಲೂರು ವೃತ್ತದಿಂದ ಎಕೋಸ್ಪೇಸ್‍ವರೆಗಿನ ರಸ್ತೆಯಲ್ಲಿ ಮೊಳೆಗಳನ್ನು ಹುದುಗಿಸಿಟ್ಟು, ವಾಹನಗಳು ಅಲ್ಲಿಗೆ ಬಂದಾಗ ಪಂಕ್ಚರ್ ಆಗುವಂತೆ ಮಾಡುತ್ತಿದ್ದ. ಪ್ರತಿ ದಿನ ಸುಮಾರು 25ರಿಂದ 30 ವಾಹನಗಳು ಏಕಾಏಕಿ ಪಂಕ್ಚರ್ ಆಗುತಿದ್ದವು. ಇದು ಸಾರ್ವಜನಿಕರಲ್ಲಿ ತೀವ್ರ ಅನುಮಾನಕ್ಕೂ ಕಾರಣವಾಗಿತ್ತು. ಕೊನೆಗೊಂದು ದಿನ ಈತ ರಸ್ತೆಯಲ್ಲಿ ಮೊಳೆಗಳನ್ನು ಹುದುಗಿಸಿಟ್ಟು, ವಾಹನಗಳನ್ನು ಪಂಕ್ಚರ್ ಮಾಡುತ್ತಿದ್ದ ಸಂಗತಿ ಗೊತ್ತಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಲಾಗಿದೆ. ಆತನಿಂದ ಒಂದು ದ್ವಿಚಕ್ರವಾಹನ ಮತ್ತು ಕಬ್ಬಿಣದ ಮೊಳೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


