ರಾಮ-ಕೃಷ್ಣನ ಲೆಕ್ಕ ಕಳ್ಳಗಂಟಿನ ನಂಟು
ಅಭಿವೃದ್ಧಿ ಯೋಜನೆಗೆ ಬಳಕೆಯಾಗಬೇಕಿದ್ದ ರು. 134 ಕೋಟಿ ಅನುದಾನವನ್ನು `ಕಳ್ಳಗಂಟು' ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಲ್ಲದೇ...

ಬೆಂಗಳೂರು: ಅಭಿವೃದ್ಧಿ ಯೋಜನೆಗೆ ಬಳಕೆಯಾಗಬೇಕಿದ್ದ ರು. 134 ಕೋಟಿ ಅನುದಾನವನ್ನು `ಕಳ್ಳಗಂಟು' ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಲ್ಲದೇ ಕೋಟ್ಯಂತರ ರು.ದುರುಪಯೋಗ ಮಾಡಿದ್ದ ಗ್ರಾಮೀಣ ನೀರು ಸರಬರಾಜು ಇಲಾಖೆ ಉಪ ಕಾರ್ಯದರ್ಶಿಯ ಖದೀಮತನವನ್ನು ಖುದ್ದು ಗ್ರಾಮೀಣಾಭಿವೃದ್ಧಿ ಸಚಿವರೇ ಪತ್ತೆ ಹಚ್ಚಿದ್ದಾರೆ. ಆಂಧ್ರ ಬ್ಯಾಂಕ್‍ನಲ್ಲಿ ನಾಲ್ಕು ವರ್ಷಗಳ ಹಿಂದೆ ಠೇವಣಿ ಖಾತೆ ತೆರೆದು ಕಳ್ಳಗಂಟು ಬಚ್ಚಿಟ್ಟಿದ್ದ ರಾಮಕೃಷ್ಣ 9 ಬಾರಿ ವಹಿವಾಟು ನಡೆಸಿದ್ದಾನೆ. ಸುಮಾರು ರು. 5,79,97,860 ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆಂತರಿಕ ಆರ್ಥಿಕ ಸಲಹೆಗಾರರು, ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಗಮನಕ್ಕೆ ಬಾರದಂತೆ ನಾಲ್ಕು ವರ್ಷ `ವ್ಯವಹಾರ' ನಡೆಸಿದ್ದು ಎಲ್ಲರ
ಹುಬ್ಬೇರಿಸಿದೆ. ಇಲಾಖೆಯಲ್ಲಿ ಹಣ ಕಾಸು ಅಶಿಸ್ತಿಗೆ ಕಾರಣೀಕರ್ತನಾದ ಈ ಅಧಿಕಾರಿಯನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿ, ಲೋಕಾ ಯುಕ್ತ ತನಿಖೆ ನಡೆಸುವಂತೆ ಸಚಿವ ಎಚ್.ಕೆ.ಪಾಟೀಲ್ ಆದೇಶಿಸಿದ್ದಾರೆ.
ಶೀಘ್ರಲಿಪಿಕಾರ: ಕುತೂಹಲಕಾರಿ ಸಂಗತಿ ಎಂದರೆ, ಈತ ಆರಂಭದಲ್ಲಿ ರೇಷ್ಮೆ ಇಲಾಖೆಯಲ್ಲಿ ಶೀಘ್ರ ಲಿಪಿಕಾರನಾಗಿ ಕೆಲಸಕ್ಕೆ ಸೇರಿದ್ದ. ಆದರೆ ಶರವೇಗದಲ್ಲಿ ಬಡ್ತಿ ಪಡೆಯುತ್ತಾ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿಕೊಂಡಿದ್ದ. ಕಳೆದ 20 ವರ್ಷದಿಂದ ಈತ ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲೇ ಬಿಡಾರ ಹೂಡಿದ್ದು, 8 ವರ್ಷದಿಂದಇಲಾಖೆಗೆ ತನ್ನ ಆಸ್ತಿ ವಿವರದ ಲೆಕ್ಕ ಕೊಟ್ಟಿಲ್ಲ. ಕಾಲ ಕಾಲಕ್ಕೆ ಪಂಚಾಯಿತ್ ರಾಜ್ ಇಲಾಖೆಗೆ ಬರುವ ಪ್ರಧಾನ ಕಾರ್ಯದರ್ಶಿಗಳೂ ಸೇರಿದಂತೆ ಆಡಳಿತ ಶಾಹಿಯ `ಮುಖ್ಯ'ರ ಜತೆ ನಿಕಟ ಸಂಪರ್ಕ ಸಾಧಿಸುವ `ಕೌ'ಶಲ್ಯ ಪಡೆದಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


