ವಿಶೇಷ ಪ್ರಕರಣವಾದ್ದರಿಂದ ಷರತ್ತು ವಿಧಿಸಲಾಗಿತ್ತು: ಟಿಬಿ ಜಯಚಂದ್ರ
ಐಎಸ್ ಅಧಿಕಾರಿ ಡಿಕೆ ರವಿ ಅವರ ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐಗೆ ಷರತ್ತು ವಿಧಿಸಲಾಗಿತ್ತು ಎಂದು ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ...

ನವದೆಹಲಿ: ಐಎಸ್ ಅಧಿಕಾರಿ ಡಿಕೆ ರವಿ ಅವರ ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐಗೆ ಷರತ್ತು ವಿಧಿಸಲಾಗಿತ್ತು ಎಂದು ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.
ರವಿ ಪ್ರಕರಣವನ್ನು ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ತಿರಸ್ಕರಿಸಿರುವ ಸಿಬಿಐ ಇಂದು ಷರತ್ತು ಹಿಂಪಡೆಯದ ಹೊರತು ತನಿಖೆ ಸಾಧ್ಯವಿಲ್ಲ ಎಂದು ಹೇಳಿದೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆಯೇ ಸರ್ಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಅವರು, ಡಿಕೆ ರವಿ ನಿಗೂಢ ಸಾವು ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐ ಅಧಿಕಾರಿಗಳಿಗೆ ಷರತ್ತು ವಿಧಿಸಲಾಗಿತ್ತು. ರವಿ ಪ್ರಕರಣವನ್ನು ವರ್ಷಾನುಗಟ್ಟಲೆ ತನಿಖೆಗೊಳಪಡಿಸುವುದು ಅನಗತ್ಯ. ಹೀಗಾಗಿ 3 ತಿಂಗಳ ಗಡುವು ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಜಯಚಂದ್ರ ಅವರು, "ಡಿಕೆ ರವಿ ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐ ಅಧಿಕಾರಿಗಳಿಗೆ 3 ತಿಂಗಳ ಗಡುವು ನೀಡಲಾಗಿತ್ತು. ಅಲ್ಲದೆ ಡಿಕೆ ರವಿ ಪ್ರಕರಣದಲ್ಲಿ ವರ್ಷಾನುಗಟ್ಟಲೆ ತನಿಖೆ ನಡೆಸುವುದು ಅನಗತ್ಯ. ಹೀಗಾಗಿ ಸಿಬಿಐಗೆ ಷರತ್ತು ವಿಧಿಸಲಾಗಿತ್ತು. ಅವಧಿ ಕುರಿತಂತೆ ಸಿಬಿಐ ವಿಸ್ತರಣೆ ಬೇಕು ಎಂದು ಕೇಳಿದರೆ ಆ ಬಗ್ಗೆ ಚಿಂತಿಸಬಹುದು. ಕಾನೂನು ತಜ್ಞರು ಹಾಗೂ ಸಂಪುಟದಲ್ಲಿ ಚರ್ಚಿಸಿ ಸರ್ಕಾರದ ನಿರ್ಧಾವನ್ನು ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


