ಕೈ ತಪ್ಪಿದ ಗೆಳತಿಯನ್ನೇ ಕೊಂದ ವಿದ್ಯಾರ್ಥಿನಿ
ನಂಬಿದ್ದ ಗೆಳತಿಯೇ ಕತ್ತು ಕೊಯ್ದ ಘಟನೆ ಇದು. ತಾನು ಪ್ರೀತಿಸುತ್ತಿದ್ದ ಗೆಳತಿಗೆ ಮದುವೆಯಾಯಿತು ಎಂಬ ಕಾರಣಕ್ಕೆ ಆಕೆಯ ಸಲಿಂಗ ಗೆಳತಿಯೇ ನಿರ್ದಯವಾಗಿ ಕುತ್ತಿಗೆಗೆ ವೈರ್ ಬಿಗಿದು ಹತ್ಯೆ ಮಾಡಿರುವ ಘಟನೆ ಮಂಡ್ಯದಲ್ಲಿ ಜರುಗಿದೆ...

ಮಂಡ್ಯ: ನಂಬಿದ್ದ ಗೆಳತಿಯೇ ಕತ್ತು ಕೊಯ್ದ ಘಟನೆ ಇದು. ತಾನು ಪ್ರೀತಿಸುತ್ತಿದ್ದ ಗೆಳತಿಗೆ ಮದುವೆಯಾಯಿತು ಎಂಬ ಕಾರಣಕ್ಕೆ ಆಕೆಯ ಸಲಿಂಗ ಗೆಳತಿಯೇ ನಿರ್ದಯವಾಗಿ ಕುತ್ತಿಗೆಗೆ ವೈರ್ ಬಿಗಿದು ಹತ್ಯೆ ಮಾಡಿರುವ ಘಟನೆ ಮಂಡ್ಯದಲ್ಲಿ ಜರುಗಿದೆ.
ಮಂಡ್ಯದ ಹಾಲಹಳ್ಳಿ ಬಡಾವಣೆಯ ದಿವ್ಯಶ್ರೀ (24) ಕೊಲೆಯಾದವಳು. ಕಳೆದ ಮಾ.8ರಂದು ವಿವಾಹವಾಗಿದ್ದ ಈಕೆಯನ್ನು ಹತ್ಯೆ ಮಾಡಿದ ವಿದ್ಯಾರ್ಥಿನಿ ಅನುಷಾ (20) ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ.
ಮಂಡ್ಯದ ಹೊರ ವಲಯದಲ್ಲಿರುವ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಬಳಿ ದಿವ್ಯಶ್ರೀಯನ್ನು ಕರೆದುಕೊಂಡು ಹೋದ ಅನುಷಾ ಅಲ್ಲಿಯೇ ಆಕೆಯನ್ನು ವೈರ್‍ನಿಂದ ಬಿಗಿದು ಹತ್ಯೆ ಮಾಡಿದ್ದಳು. ನಂತರ ತನಗೇನೂ ಗೊತ್ತಿಲ್ಲದಂತೆ ಇದ್ದಳು. ಆದರೆ ಪೊಲೀಸರ ಚಾಣಾಕ್ಷತನದಿಂದ ಹಂತಕಿ ಸಿಕ್ಕಿಬಿದ್ದಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


