ಜಿಲ್ಲಾ ಸುದ್ದಿ

ಬರ ಸೆಳೆದ ವಿದೇಶ ಪ್ರವಾಸ

ರಾಜ್ಯದ ದಕ್ಷಿಣ ಭಾಗದ ಐದು ಜಿಲ್ಲೆಗಳಲ್ಲಿ ಬರ, ಉತ್ತರ ಭಾಗದ ಎಂಟು ಜಿಲ್ಲೆಗಳಲ್ಲಿ ನೆರೆ ಹಾವಳಿ. ಆದರೆ ಅಧಿಕಾರಸ್ಥರಿಗೆ ಇದಾವುದೂ ಲೆಕ್ಕಕ್ಕಿಲ್ಲ.

ಬರ ಸೆಳೆದ ವಿದೇಶ ಪ್ರವಾಸ
Published On :

-ಅಂಶಿ ಪ್ರಸನ್ನ ಕುಮಾರ್
ಮೈಸೂರು:
ರಾಜ್ಯದ ದಕ್ಷಿಣ ಭಾಗದ ಐದು ಜಿಲ್ಲೆಗಳಲ್ಲಿ  ಬರ, ಉತ್ತರ ಭಾಗದ ಎಂಟು ಜಿಲ್ಲೆಗಳಲ್ಲಿ ನೆರೆ ಹಾವಳಿ. ಆದರೆ ಅಧಿಕಾರಸ್ಥರಿಗೆ ಇದಾವುದೂ ಲೆಕ್ಕಕ್ಕಿಲ್ಲ.

ಆಕ್ಷೇಪಗಳ ನಡುವೆಯೇ ಶಾಸಕರು ವಿದೇಶ ಪ್ರವಾಸ ಮುಗಿಸಿ ಬಂದರು, ಇದೀಗ ಮೈಸೂರು-ಚಾಮರಾಜನಗರ ಜಿಲ್ಲಾ ಉತ್ಪಾದಕರ ಸಂಘಗಳ ಒಕ್ಕೂಟದ (ಮೈಮುಲ್) 20 ನಿರ್ದೇಶಕರು ಹಾಲು ಉತ್ಪಾದಕರ ಹಣದಲ್ಲೇ ಮಂಗಳವಾರ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಸೆ.23ರಿಂದ ಅ.8ರವರಗೆ ನಡೆಯುವ ಪ್ರವಾಸ ನಡೆಯಲಿದ್ದು, ಸುಮಾರು ರು.1 ಕೋಟಿ ವೆಚ್ಚವಾಗಲಿದೆ. ತಂಡವು ಡೆನ್ಮಾರ್ಕ್ ನ್ಯೂಜಿಲೆಂಡ್, ದುಬೈ ಮತ್ತಿತ್ತರ ದೇಶಗಳಿಗೂ ಭೇಟಿ ನೀಡಲಿದೆ. ಇದಕ್ಕೆ 'ಅಧ್ಯಯನ ಪ್ರವಾಸ' ಎಂದು ಹೆಸರಿಡಲಾಗಿದೆ.

ಅನ್ವಯವಿಲ್ಲ: ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು, ಶಾಸಕರ ಪ್ರವಾಸಕ್ಕೆ ಕಡಿವಾಣ ಹಾಕಲಾಗಿದೆ. ಸಹಕಾರ ಸಂಸ್ಥೆಗಳಿಗೆ ಇದು ಅನ್ವಯವಾಗದು. ಹೀಗಾಗಿ ಅನುಮಂತಿ ನೀಡಲಾಗಿದೆ. ಹಿಂದೆಯೂ ವಿದೇಶ ಪ್ರವಾಸಕ್ಕೆ ಮೈಮುಲ್‌ನಿಂದ ಮನವಿ ಬಂದಿತ್ತು. ಆಗ ಅನುಮತಿ ನೀಡಿರಲಿಲ್ಲ ಎಂದು ಸಹಕಾರ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ತಿಳಿಸಿದ್ದಾರೆ. ಮೈಮುಲ್‌ನ ಪ್ರಸ್ತುತ ಆಡಳಿತ ಮಂಡಳಿಯದ್ದು ಇದು ಎರಡನೇ ವಿದೇಶ ಪ್ರವಾಸ (ಹಿಂದೆ 21011-12ರಲ್ಲಿ ಹೋಗಿದ್ದರು. ಆಗ ಸುಮಾರು ರು.60 ಲಕ್ಷ ಅಧಿಕ ವೆಚ್ಚವಾಗಿತ್ತು) ಎಂಬುದನ್ನು ಅವರ ಮಗನಕ್ಕೆ ತಂದಾಗ, ಈ ಬಗ್ಗೆ ಮಾಹಿತಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲನೆಯದು ಎಂದು ತಿಳಿಸಿದರು.

ಉತ್ಪಾದಕರ ಆಕ್ರೋಶ: ಆಡಳಿತ ಮಂಡಳಿಯ ನಿರ್ದೇಶಕ ವಿದೇಶ ಪ್ರವಾಸದಿಂದ ಬಡ ಉತ್ಪಾದಕರಿಗೆ ಕಿಂಚಿತ್ತೂ ಉಪಯೋಗವಾಗುವುದಿಲ್ಲ. ಎರಡು-ಮೂರು ವರ್ಷಗಳಿಂದ ಮೈಮುಲ್ ಆಡಳಿತಯವರು ಈ ರೀತಿಯ ದುಂದು ವೆಚ್ಚದ ಪ್ರವಾಸಕ್ಕೆ ಬಡ ರೈತರ ಒಕ್ಕೂಟದ ಹಣ ವೆಚ್ಚ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಾಲು ಉತ್ಪಾದಕರು ಪ್ರಶ್ನಿಸಿದ್ದಾರೆ.

ತಂಡದಲ್ಲಿ ಯಾರಿದ್ದಾರೆ?

ಮೈಮುಲ್ ಅಧ್ಯಕ್ಷ ಎನ್. ಮಹದೇವಪ್ಪ, ನಿರ್ದೇಶಕರಾದ ಸಿ.ಓಂಪ್ರಕಾಶ್, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್ (ಈ ಮೂವರು ಮಾಜಿ ಅಧ್ಯಕ್ಷರು), ಅಂಬಳೆ ಶಿವಾನಂದ ಸ್ವಾಮಿ, ಕೆ.ಈರೇಗೌಡ, ಕೆ.ಎಸ್.ಕುಮಾರ್, ಕೆ.ಜಿ.ಮಹೇಶ್, ನಂ.ಸಿದ್ದಪ್ಪ, ಟಿ.ಎ.ರಾಜೇಗೌಡ, ಎಚ್.ಎಸ್.ಬಸವರಾಜು, ಎಸ್.ಮಹಾದೇವ ಸ್ವಾಮಿ, ವಿಮಲಾ ಶಂಕರ್, ಎ.ಶಿವಗಾಮಿ, ಬಿ.ನೀಲಾಂಬಿಕೆ ಮಹೇಶ್, ವಿಯಜಲಕ್ಷ್ಮಿ, ಸಿ.ಚನ್ನಕೃಷ್ಣಯ್ಯ, ಕೆ.ಎಂ.ಆಶಾ. ಡಾ.ದೇವದಾಸ್, ಡಾ.ಎ.ಎಸ್.ಪ್ರೇಮನಾಥ್ ಕೂಡ ತಂಡ ಸೇರಿಕೊಳ್ಳಲ್ಲಿದ್ದಾರೆ. ಎನ್‌ಡಿಡಿಬಿ ಪ್ರತಿನಿಧಿಯಾಗಿರುವ ನಿಧಿ ನೇಗಿ ಆರೂರು ಮಾತ್ರ ಪ್ರವಾಸ ಹೋಗಿಲ್ಲ ಎಂದು ಗೊತ್ತಾಗಿದೆ.

ನಷ್ಯದಲ್ಲಿರುವ ಒಕ್ಕೂಟಗಳ ನಿರ್ದೇಶಕರನ್ನು ವಿದೇಶಕ್ಕೆ ಪ್ರವಾಸ ಕಳುಹಿಸುವ ಪ್ರಶ್ನೆಯೇ ಇಲ್ಲ. ಮುಂದಿನ ವರ್ಷ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತ್ಯೇಕ ಒಕ್ಕೂಟ ರಚನೆಯಾಗುವುದರಿಂದ ಎಲ್ಲರೂ ಒಟ್ಟಾಗಿ ಪ್ರವಾಸ ಹೋಗಿದ್ದಾರೆ.
- ಎಚ್.ಎಸ್.ಮಹಾದೇವ ಪ್ರಸಾದ್
ಸಹಕಾರ ಸಚಿವ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.