ಜಿಲ್ಲಾ ಸುದ್ದಿ

ಬೋಟ್ ಮಾಡಿಕೊಳ್ಳಿ, ಜಿಗಿಯಿರಿ

ನಿಮ್ಮದೇ ಬೋಟ್ ಮಾಡಿಕೊಳ್ಳಿ, ನಿಮ್ಮದೇ ವಿನ್ಯಾಸವೂ ಇರಲಿ. ಇಂತಹದ್ದೇ...

ಬೋಟ್ ಮಾಡಿಕೊಳ್ಳಿ, ಜಿಗಿಯಿರಿ
Published On :

ಬೆಂಗಳೂರು: ನಿಮ್ಮದೇ ಬೋಟ್ ಮಾಡಿಕೊಳ್ಳಿ, ನಿಮ್ಮದೇ ವಿನ್ಯಾಸವೂ ಇರಲಿ. ಇಂತಹದ್ದೇ ಎಂಬ ಮಾನದಂಡವೇನೂ ಇಲ್ಲ. ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂಬ ತವಕ ಇರಬೇಕಷ್ಟೇ.

ಈ ಬೋಟ್ ಮಾಡಿಕೊಂಡು ಕೆರೆಗೆ ಇಳಿಯಬಹುದು, ಅಲ್ಲಲ್ಲಿ ಜಿಗಿಯಬಹುದು. ಅದು ಸುಮಾರು 20 ಅಡಿ ಎತ್ತರದಿಂದ!

ಹೌದು. ಇಂತಹ ವಿಶಿಷ್ಟ ಹಾಗೂ ಸಾಹಸಮಯ ಅವಕಾಶ ದೇಶದಲ್ಲಿ ಪ್ರಥಮ ಬಾರಿಗೆ ಲಭ್ಯ. ಅದೂ ಉದ್ಯಾನನಗರಿಯಲ್ಲಿ ಇದಕ್ಕೆ ಅವಕಾಶ ಮಾಡುತ್ತಿದೆ ರೆಡ್ ಬುಲ್. ಇದು ಭಾರತದ ಪ್ರಥಮ 'ರೆಡ್‌ಬುಲ್ ಫ್ಲಗ್‌ಟ್ಯಾಗ್‌'.

ಆಸ್ಟ್ರಿಯಾದಲ್ಲಿ ಪ್ರಥಮವಾಗಿ 1992ರಲ್ಲಿ ಆರಂಭವಾದ 'ರೆಡ್‌ಬುಲ್ ಫ್ಲಗ್‌ಟ್ಯಾಗ್‌' 68 ನಗರಗಳನ್ನು ಸುತ್ತಿದೆ. ಇದೀಗ ಪ್ರಥಮ ಬಾರಿಗೆ ಭಾರತಕ್ಕೆ ಕಾಲಿರಿಸಿದೆ.

ಸೆ.28ರಂದು ನಡೆಯಲಿದೆ. ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಿಕೊಂಡ ಬೋಟ್‌ನೊಂದಿಗೆ ನೀವು ನೀರಿಗೆ ಜಿಗಿಯಬಹುದು. ಇದು ಬೋಟ್ ಅಷ್ಟೇ ಆಗಬೇಕೆಂದೇನೂ ಇಲ್ಲ.

ಹಾರುವ ಹೆಲಿಕಾಫ್ಟರ್, ವಿಮಾನ, ಆಟೋ, ಜೀಪ್ ಸೇರಿದಂತೆ ಹತ್ತಾರು ಅಡಿ ಚಲಿಸಿ ನೀರಿಗೆ ಹಾರುವಂತಹ ವಾಹನವಾಗಿದ್ದರೆ ಸಾಕು. ಈ ಸಾಹಸದಲ್ಲಿ ಭಾಗವಹಿಸಲು ಯಾವುದೇ ಡ್ರೆಸ್ ಕೋಡ್ ಇಲ್ಲ.

ನಿಮಗೆ ಆರಮಾ ತರಿಸುವ ಲುಂಗಿಯನ್ನೂ ಧರಿಸಬಹುದು ಅಥವಾ ಹೈಟೆಕ್ ಸೂಟ್‌ಧರಿಯಾಗಿಯೂ ಬರಬಹುದು.

ರೆಡ್‌ಬುಲ್ ತನ್ನ ವಾಣಿಜ್ಯ ಪ್ರಚಾರಕ್ಕಾಗಿ ಈ ಸಾಹಸ ಕಾರ್ಯಕ್ರಮವನ್ನು ಆಯೋಜಿಸಿದೆ. ಹೆಚ್ಚಿನ ವಿವರಗಳಿಗೆ http://flugtag.redbull.com/in.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.